newsfirstkannada.com

ಸಿದ್ದಲಿಂಗ ಮುತ್ಯಾನ ಜಾತ್ರೆಯಲ್ಲಿ ದುರಂತ.. ರಥದ ಚಕ್ರಕ್ಕೆ ಸಿಲುಕಿ ಇಬ್ಬರು ಸಾವು, ಮತ್ತೋರ್ವ ಗಂಭೀರ

Share :

Published April 28, 2024 at 7:42pm

    ಮೃತ ಇಬ್ಬರು ವ್ಯಕ್ತಿಗಳು ವಿಜಯಪುರದ ಲಚ್ಯಾಣ ಗ್ರಾಮದ ನಿವಾಸಿಗಳು

    ಇತಿಹಾಸ ಪ್ರಸಿದ್ಧ ಸಿದ್ದಲಿಂಗ ಮುತ್ಯಾನ ಜಾತ್ರೆಗೆ ಲಕ್ಷಾಂತರ ಭಕ್ತರು ಭಾಗಿ

    ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಘಟನೆ

ವಿಜಯಪುರ: ರಥದ ಚಕ್ರಕ್ಕೆ ಸಿಲುಕಿ ಇಬ್ಬರು ಮೃತಪಟ್ಟಿರೋ ಘಟನೆ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ನಡೆದಿದೆ. ಸಂಜೆ ನಡೆದ ರಥೋತ್ಸವದ ವೇಳೆ ಈ ಅವಘಡ ಸಂಭವಿಸಿದೆ. ಬಂಡು ಕಟಕದೊಂಡ್ (40), ಸೋಬು ಕಟದೊಂಡ್ (55) ಮೃತ ದುರ್ದೈವಿಗಳು.

ಇದನ್ನೂ ಓದಿ: ಹಾಸನ ಅಶ್ಲೀಲ ವಿಡಿಯೋ ಕೇಸ್​​; ಅಜ್ಜಿಯನ್ನು ಬಿಡದ ರಾಕ್ಷಸನಿಗೆ ಶಿಕ್ಷೆಯಾಗಲಿ ಎಂದ ಭವ್ಯ ನರಸಿಂಹಮೂರ್ತಿ

ರಥೋತ್ಸವದಲ್ಲಿ ಮೃತಪಟ್ಟ ಇಬ್ಬರು ಲಚ್ಯಾಣ ಗ್ರಾಮದ ನಿವಾಸಿಗಳಾಗಿದ್ದಾರೆ. ಇಂದು ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಪವಾಡ ಪುರುಷ ಸಿದ್ದಲಿಂಗ ಮುತ್ಯಾನ ಜಾತ್ರಾ ಮಹೋತ್ಸವ ನಡೆಯುತ್ತಿತ್ತು. ಈ ಸಿದ್ದಲಿಂಗ ಮುತ್ಯಾನ ಜಾತ್ರೆಗೆ ಲಕ್ಷಾಂತರ ಭಕ್ತರು ಸೇರಿಕೊಂಡಿದ್ದರು. ಹೀಗೆ ರಥ ಎಳೆಯುತ್ತಿದ್ದ ವೇಳೆ ಆಯತಪ್ಪಿ ಚಕ್ರದಡಿ ಸಿಲುಕಿದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದ ತಡವಾಳ ಗ್ರಾಮದ ಮತ್ತೋರ್ವನಿಗೆ ಗಂಭೀರ ಗಾಯಗಳಾಗಿವೆ. ಕೂಡಲೇ ಆತನನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಸಿದ್ದಲಿಂಗ ಮುತ್ಯಾನ ಜಾತ್ರೆಯಲ್ಲಿ ದುರಂತ.. ರಥದ ಚಕ್ರಕ್ಕೆ ಸಿಲುಕಿ ಇಬ್ಬರು ಸಾವು, ಮತ್ತೋರ್ವ ಗಂಭೀರ

https://newsfirstlive.com/wp-content/uploads/2024/04/accident14.jpg

Load More