/newsfirstlive-kannada/media/post_attachments/wp-content/uploads/2025/07/BIDAR.jpg)
ಬೀದರ್: 7 ಪ್ರಯಾಣಿಕರಿದ್ದ ಗೂಡ್ಸ್ ವಾಹನ ತೆರೆದ ಬಾವಿಗೆ ಬಿದ್ದು ಭಾರೀ ದುರಂತ ಸಂಭವಿಸಿದೆ. ಅಪಘಾತದಲ್ಲಿ ಮಗನ ನಿಧನದ ಸುದ್ದಿ ತಿಳಿದು ಆಘಾತಕ್ಕೆ ಒಳಗಾದ ತಾಯಿಗೆ ಹೃದಯಾಘಾತವಾಗಿದೆ. ಒಂದು ಅನಾಹುತದಿಂದ ಒಟ್ಟು ಮೂವರು ಕೊನೆಯುಸಿರೆಳೆದಿದ್ದು, ಕುಟುಂಬದಲ್ಲಿ ದುಃಖ ಮುಡಿಗಟ್ಟಿದೆ.
ಬೀದರ್ ತಾಲೂಕಿನ ಘೋಡಂಪಳ್ಳಿ ಗ್ರಾಮದಲ್ಲಿ ನಿನ್ನೆ ರಾತ್ರಿ 9.30ರ ಸುಮಾರಿಗೆ ಅಪಘಾತ ಸಂಭವಿಸಿದೆ. ಬೀದರ್‌ನಿಂದ ಚಿಟ್ಟಾ ಮಾರ್ಗವಾಗಿ ಘೋಡಂಪಳ್ಳಿಗೆ ಹೋಗುವ ಮಾರ್ಗದಲ್ಲಿದ್ದ ಬಾವಿಗೆ ವಾಹನ ಬಿದ್ದಿದೆ. ಅತಿವೇಗವಾಗಿ ಚಲಿಸುತ್ತಿದ್ದ ಗೂಡ್ಸ್ ವಾಹನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಬಾವಿಗೆ ಬಿದ್ದಿದೆ.
ಇದನ್ನೂ ಓದಿ: ಕೂತಲ್ಲೇ, ನಿಂತಲ್ಲೇ ಹೃದಯ ಹಿಂಡ್ತಿದ್ದಾನೆ ಯಮ.. ಬೆಳ್ಳಂಬೆಳಗ್ಗೆ 6 ಪ್ರಕರಣ ಬೆಳಕಿಗೆ..
ಪರಿಣಾಮ ಘೋಡಂಪಳ್ಳಿ ಗ್ರಾಮದ ಚಾಲಕ ಲಕ್ಷ್ಮಿಕಾಂತ್ ಅಲಿಯಾಸ್ ಕಾಂತು ರಾಜ್ (45), ರವಿ (18) ಅನ್ನೋರು ಪ್ರಾಣ ಕಳೆದುಕೊಂಡಿದ್ದರು. ಇನ್ನು, ಅದೇ ಗ್ರಾಮದ ಅರ್ಜುನ್, ಪ್ರಜ್ವಲ್, ಪವನ್, ಸಂಗಮೇಶ್ ಗಂಭೀರವಾಗಿ ಗಾಯಗೊಂಡಿದ್ದು, ಬೀದರ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮೃತ ಲಕ್ಷ್ಮೀಕಾಂತ್ (45) ಸುದ್ದಿ ತಿಳಿದು ತಾಯಿ ಶಾರದಾಬಾಯಿಗೆ (86) ಹೃದಯಾಘಾತವಾಗಿದೆ. ಮೃತರ ಮನೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ರಸ್ತೆ ಪಕ್ಕವೇ ತೆರೆದ ಬಾವಿ ಇದ್ದಿದ್ರಿಂದ ಅನಾಹುತ ಸಂಭವಿಸಿದೆ. ವಿನಾಕಾರಣ ರೋಡ್ ಬ್ರೇಕರ್ ಹಾಕಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಚಿಟ್ಟಾದಿಂದ ಗೋಡಂಪಳ್ಳಿವರೆಗೆ 18 ರೋಡ್ ಬ್ರೇಕ್ ಹಾಗೂ 5 ಬಾವಿ ಮುಚ್ಚುವಂತೆ ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ. ಹಲವು ಬಾರಿ ಅಪಘಾತ ಸಂಭವಿಸಿದ್ರೂ ಎಚ್ಚೆತ್ತುಕೊಂಡಿಲ್ಲ ಎಂಬ ಆರೋಪ ಇದೆ. ಗಾಂಧಿಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕಿರಣ್ ರಾಜ್ ಅಭಿಮಾನಿಗಳಿಗೆ ಇಂದು ಹಬ್ಬ.. ಕರ್ಣನ ಮನೆ ತುಂಬಿಸಿಕೊಳ್ಳಲು ಫ್ಯಾನ್ಸ್ ಎಕ್ಸೈಟ್..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ