newsfirstkannada.com

ಭೀಕರ ಅಪಘಾತ.. ಎರಡು ಬೈಕ್‌ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸವಾರರು ಸ್ಥಳದಲ್ಲೇ ಸಾವು

Share :

Published February 27, 2024 at 2:25pm

  ಚನ್ನರಾಯಪಟ್ಟಣ ತಾಲ್ಲೂಕಿನ ಅಡಗೂರು ಗ್ರಾಮದ ಬಳಿ ಅಪಘಾತ

  2 ವರ್ಷದ ಮಗುವಿಗೆ ಚೇಳು ಕಡಿದಿತ್ತು ಎಂದು ಆಸ್ಪತ್ರೆಗೆ ಹೋದವರು

  ತಂಗಿ ಮದುವೆ ಲಗ್ನಪತ್ರಿಕೆ ಕೊಡಲು ಬಂದಿದ್ದ ಬೈಕ್ ಸವಾರ ದಾರುಣ ಸಾವು

ಹಾಸನ: ಎರಡು ಬೈಕ್‌ಗಳ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಚನ್ನರಾಯಪಟ್ಟಣ ತಾಲ್ಲೂಕಿನ ಅಡಗೂರು ಗ್ರಾಮದ ಬಳಿ ನಡೆದಿದೆ. ಬೆಳಗಿನ ಜಾವ ಈ ಅಪಘಾತ ಸಂಭವಿಸಿದ್ದು, ಇಬ್ಬರು ಸಾವನ್ನಪ್ಪಿದ್ರೆ ಮೂವರಿಗೆ ಗಂಭೀರ ಗಾಯಗಳಾಗಿದೆ.

ಚನ್ನರಾಯಪಟ್ಟಣ ತಾಲ್ಲೂಕಿನ ಚಿಕ್ಕತಾರಹಳ್ಳಿ ಗ್ರಾಮದ ಪವನ್ (24), ಟಿ.ನರಸೀಪುರ ಮೂಲದ ಸಂತೋಷ್ (30) ಮೃತರು. ಬೈಕ್ ಸವಾರ ಪವನ್‌ ಅವರ ಎರಡು ವರ್ಷದ ಮಗುವಿಗೆ ಚೇಳು ಕಡಿದಿತ್ತು. ಹೀಗಾಗಿ KA-01-ED-1114 ನಂಬರ್‌ನ ಹೀರೋ ಹೋಂಡಾ ಸ್ಪೆಂಡರ್‌ ಬೈಕ್‌ನಲ್ಲಿ ಪತ್ನಿ ರಂಜಿತಾ, ಎರಡು ವರ್ಷದ ಮಗುವಿನ ಜೊತೆ ಚನ್ನರಾಯಪಟ್ಟಣದ ಆಸ್ಪತ್ರೆಗೆ ಹೋಗಿದ್ದರು. ಚಿಕ್ಕತಾರಹಳ್ಳಿ ಗ್ರಾಮಕ್ಕೆ ವಾಪಸ್ ಆಗುತ್ತಿದ್ದಾಗ ಅಪಘಾತ ಸಂಭವಿಸಿದೆ.

ಇದನ್ನೂ ಓದಿ: ತೀವ್ರ ಹೃದಯಾಘಾತ.. ಗಂಡನ ಸಾವಿಗೆ 7ನೇ ಮಹಡಿಯಿಂದ ಹಾರಿ ಪ್ರಾಣ ಬಿಟ್ಟ ನವವಧು; ಆಗಿದ್ದೇನು?

ಮತ್ತೊಬ್ಬ ಸಂತೋಷ್, ತಂಗಿ ಮದುವೆಯ ಲಗ್ನಪತ್ರಿಕೆ ಕೊಡಲು ಮೈಸೂರು ಕಡೆಯಿಂದ ಚನ್ನರಾಯಪಟ್ಟಣಕ್ಕೆ ಬರುತ್ತಿದ್ದರು. KA-55-EC-7935 ಹೀರೋ ಹೋಂಡಾ ಸ್ಪೆಂಡರ್ ಬೈಕ್‌ನಲ್ಲಿ ಚನ್ನರಾಯಪಟ್ಟಣಕ್ಕೆ ಸ್ನೇಹಿತ ದೇವರಾಜು ಜೊತೆ ಸಂತೋಷ್ ಬರುತ್ತಿದ್ದರು. ಅಡಗೂರು ಬಳಿ ಎರಡು ಬೈಕ್‌ಗಳ ನಡುವೆ ಅಪಘಾತ ನಡೆದಿದ್ದು, ಗಾಯಾಳುಗಳಿಗೆ ಚನ್ನರಾಯಪಟ್ಟಣ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭೀಕರ ಅಪಘಾತ.. ಎರಡು ಬೈಕ್‌ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸವಾರರು ಸ್ಥಳದಲ್ಲೇ ಸಾವು

https://newsfirstlive.com/wp-content/uploads/2024/02/Hassan-Bike-Accident.jpg

Load More