ಆಸ್ಟ್ರೇಲಿಯಾ ಪ್ರವಾಸದ ನಂತರ ಟೀಮ್​ ಇಂಡಿಯಾದಲ್ಲಿ ಮೇಜರ್​ ಸರ್ಜರಿ; ಇಬ್ಬರಿಗೆ ಗೇಟ್​​ಪಾಸ್​​

author-image
Ganesh Nachikethu
Updated On
ಟೀಮ್​​ ಇಂಡಿಯಾಗೆ ಭರ್ಜರಿ ಗುಡ್​ನ್ಯೂಸ್​​; 1 ವರ್ಷದ ಬಳಿಕ ಸ್ಟಾರ್​ ಪ್ಲೇಯರ್​ ಎಂಟ್ರಿ
Advertisment
  • ಟೀಮ್​ ಇಂಡಿಯಾ, ಆಸ್ಟ್ರೇಲಿಯಾ ಮಧ್ಯೆ 5 ಟೆಸ್ಟ್​ಗಳ ಸರಣಿ!
  • ಆಸ್ಟ್ರೇಲಿಯಾ ಪ್ರವಾಸದ ನಂತರ ಟೀಮ್​ ಇಂಡಿಯಾದಲ್ಲಿ ಸರ್ಜರಿ
  • ಮೇಜರ್​ ಸರ್ಜರಿಗೆ ಮುಂದಾದ ಬಿಸಿಸಿಐ ಹಿರಿಯ ಅಧಿಕಾರಿಗಳು

ಬರೋಬ್ಬರಿ 24 ವರ್ಷಗಳ ಬಳಿಕ ಟೀಮ್​​ ಇಂಡಿಯಾ ನ್ಯೂಜಿಲೆಂಡ್​​ ವಿರುದ್ಧ ತವರಿನಲ್ಲೇ ಹೀನಾಯ ಸೋಲು ಕಂಡಿದೆ. ಇಷ್ಟು ವರ್ಷಗಳ ನಂತರ ನ್ಯೂಜಿಲೆಂಡ್​​ ವಿರುದ್ಧ ಟೀಮ್​ ಇಂಡಿಯಾ ಸೋತ ಮೊದಲ ಟೆಸ್ಟ್​ ಸರಣಿ ಆಗಿದೆ. ಹೀಗಾಗಿ ಟೀಮ್​ ಇಂಡಿಯಾದ ಸ್ಟಾರ್​​ ಆಟಗಾರರ ವಿರುದ್ಧ ಹಲವು ಟೀಕೆಗಳು ಕೇಳಿ ಬಂದಿವೆ.

ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿ ಸೋಲಿಕ ಬಳಿಕ ಟೀಮ್ ಇಂಡಿಯಾಗೆ ಬಿಗ್​ ಶಾಕ್​​ ಕಾದಿದೆ. ಆಸ್ಟ್ರೇಲಿಯಾ ಸೀರೀಸ್​​ ನಂತರ ಟೀಮ್​ ಇಂಡಿಯಾದ ಹಲವು ಹಿರಿಯ ಆಟಗಾರರಿಗೆ ತಂಡದಿಂದಲೇ ಗೇಟ್​ಪಾಸ್​ ನೀಡುವ ಸಾಧ್ಯತೆ ಇದೆ. ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಬಳಿಕ ಭಾರತ ತಂಡದ ಕೆಲವು ಅನುಭವಿ ಆಟಗಾರರ ಭವಿಷ್ಯ ನಿರ್ಧಾರವಾಗಲಿದೆ.

ಬಿಸಿಸಿಐನಿಂದ ಮಹತ್ವದ ನಿರ್ಧಾರ

ತವರಿನಲ್ಲೇ ನ್ಯೂಜಿಲೆಂಡ್​ ವಿರುದ್ಧ 0-3 ಅಂತರದ ಹೀನಾಯ ಸೋಲು ಕಂಡಿದ್ದು, ಟೀಮ್​ ಇಂಡಿಯಾಗೆ ಭಾರೀ ಮುಖಭಂಗ ಆಗಿದೆ. ಹೀಗಾಗಿ ಬಿಸಿಸಿಐ ಮಹತ್ವದ ನಿರ್ಧಾರ ಕೈಗೊಳ್ಳಲು ಮುಂದಾಗಿದೆ. ಟೆಸ್ಟ್​​ ಸರಣಿ ಸೋಲಿಗೆ ಕಾರಣ ಯಾರು? ಎಂದು ಪರಿಶೀಲಿಸಲಿದೆ.

ಇಬ್ಬರಿಗೆ ಗೇಟ್​ಪಾಸ್​​

ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿ ಭಾರತ ತಂಡ ಆಡಲಿದೆ. ಕ್ಯಾಪ್ಟನ್​​ ರೋಹಿತ್​ ಶರ್ಮಾ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಈ ಸರಣಿ ಭಾಗವಾಗಿದ್ದಾರೆ. ಈ ನಾಲ್ವರು ಆಟಗಾರರಲ್ಲಿ ಇಬ್ಬರಿಗೆ ಗೇಟ್​ಪಾಸ್​ ತಂಡದಿಂದ ನೀಡಲಾಗುವುದು.

ಅಜಿತ್​ ಅಗರ್ಕರ್​​, ರೋಹಿತ್​​ ಮತ್ತು ಗಂಭೀರ್​ ಮಧ್ಯೆ ಚರ್ಚೆ

ಬಿಸಿಸಿಐ ಸೆಲೆಕ್ಷನ್​ ಕಮಿಟಿ ಅಧ್ಯಕ್ಷ ಅಜಿತ್ ಅಗರ್ಕರ್ ನೇತೃತ್ವದಲ್ಲಿ ಈ ಸಭೆ ನಡೆಯಲಿದೆ. ಹಿರಿಯ ಬಿಸಿಸಿಐ ಅಧಿಕಾರಿಗಳು, ಕ್ಯಾಪ್ಟನ್​ ರೋಹಿತ್​ ಶರ್ಮಾ, ಮುಖ್ಯ ಕೋಚ್​ ಗೌತಮ್​ ಗಂಭೀರ್​ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿ ಸೋಲಿಗೆ ಕಾರಣವೇನು? ಆಸ್ಟ್ರೇಲಿಯಾ ವಿರುದ್ಧ ಪ್ರವಾಸಕ್ಕೆ ಪ್ಲಾನ್​ ಏನು? ಅನ್ನೋ ಕುರಿತು ಚರ್ಚೆ ಆಗಲಿದೆ.

ಆಸ್ಟ್ರೇಲಿಯಾ ಪ್ರವಾಸಕ್ಕೆ ಟೀಮ್​ ಇಂಡಿಯಾ ಹೀಗಿದೆ..!

ರೋಹಿತ್ ಶರ್ಮಾ (ಕ್ಯಾಪ್ಟನ್​), ಜಸ್ಪ್ರೀತ್ ಬುಮ್ರಾ (ವೈಸ್​ ಕ್ಯಾಪ್ಟನ್​), ಯಶಸ್ವಿ ಜೈಸ್ವಾಲ್, ಅಭಿಮನ್ಯು ಈಶ್ವರನ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ರಿಷಬ್ ಪಂತ್ (ವಿಕೆಟ್‌ಕೀಪರ್), ಸರ್ಫರಾಜ್ ಖಾನ್, ಧ್ರುವ್ ಜುರೆಲ್ (ವಿಕೆಟ್‌ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಪ್ರಸಿದ್ಧ್ ಕೃಷ್ಣ, ಹರ್ಷಿತ್ ರಾಣಾ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್.

ಇದನ್ನೂ ಓದಿ: ದಾಖಲೆ ಬರೆದ ಹಾಸನಾಂಬೆ ತಾಯಿ; ಈ ಸಲ ಬರೋಬ್ಬರಿ 12 ಕೋಟಿಗೂ ಹೆಚ್ಚು ಆದಾಯ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment