ಡಿವೈಡರ್​ ದಾಟಿ ಬಸ್​ಗೆ ಭೀಕರವಾಗಿ ಕಾರು ಡಿಕ್ಕಿ.. ಸ್ಥಳದಲ್ಲೇ ಸಾಫ್ಟ್​​ವೇರ್​ ಉದ್ಯೋಗಿಗಳು ಸಾವು

author-image
Bheemappa
Updated On
ಡಿವೈಡರ್​ ದಾಟಿ ಬಸ್​ಗೆ ಭೀಕರವಾಗಿ ಕಾರು ಡಿಕ್ಕಿ.. ಸ್ಥಳದಲ್ಲೇ ಸಾಫ್ಟ್​​ವೇರ್​ ಉದ್ಯೋಗಿಗಳು ಸಾವು
Advertisment
  • ವೇಗವಾಗಿ ಬರುತ್ತಿದ್ದಾಗ ಕಾರಿನ ನಿಯಂತ್ರ ತಪ್ಪಿ ಅಪಘಾತ
  • ನಡು ರಸ್ತೆಯಲ್ಲೇ ಜೀವ ಕಳೆದುಕೊಂಡ ಉದ್ಯೋಗಿಗಳು
  • ಬಸ್​ನ ಮುಂಭಾಗ ಹಾನಿ, ಗಾಯಗೊಂಡ ಪ್ರಯಾಣಿಕರು

ಹೈದರಾಬಾದ್​: ಕಾರೊಂದು ನಿಯಂತ್ರಣ ತಪ್ಪಿ ಡಿವೈಡರ್‌ ದಾಟಿ ಎದುರಿಗೆ ಬರುತ್ತಿದ್ದ ಬಸ್​ಗೆ ಭೀಕರವಾಗಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾಫ್ಟ್​ವೇರ್​ ಉದ್ಯೋಗಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆ ತೆಲಂಗಾಣದ ಮೇಡ್ಚಲ್‌-ಸಮೀರ್‌ ಪೇಟೆಯ ರಾಜೀವ್‌ ರಸ್ತೆಯಲ್ಲಿ ನಡೆದಿದೆ.

ಇದನ್ನೂ ಓದಿ: ಬೆಂಗಳೂರು ಮಂದಿಗೆ ಕೊನೆಗೂ ಗುಡ್​ ನ್ಯೂಸ್​​.. ವಾಹನ ಸವಾರರು ಓದಲೇಬೇಕಾದ ಸ್ಟೋರಿ ಇದು..!

ಸಾಫ್ಟ್​ವೇರ್​ ಉದ್ಯೋಗಿಗಳಾದ ಮೋಹನ್ (25) ಮತ್ತು ದೀಪಿಕಾ (25) ಮೃತಪಟ್ಟವರು. ಇವರು ಮೇಡ್ಚಲ್‌-ಸಮೀರ್‌ಪೇಟೆಯ ರಾಜೀವ್‌ ರಸ್ತೆಯಲ್ಲಿ ಕಾರಿನಲ್ಲಿ ವೇಗವಾಗಿ ಬರುತ್ತಿದ್ದರು. ಈ ವೇಳೆ ನಿಯಂತ್ರಣ ತಪ್ಪಿದ ಕಾರು ಡಿವೈಡರ್​ ದಾಟಿ ಇನ್ನೊಂದು ರಸ್ತೆಯಲ್ಲಿ ಎದುರಿಗೆ ಬರುತ್ತಿದ್ದ ಬಸ್​ಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಸ್​ನ ಹಿಂದೆ ಇನ್ನೊಂದು ಬಸ್​ ಬರುತ್ತಿತ್ತು. ಸ್ವಲ್ಪದರಲ್ಲೇ ದೊಡ್ಡ ಅನಾಹುತವೊಂದು ತಪ್ಪಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:ಶೂಟಿಂಗ್ ಸ್ಪರ್ಧೆಯಲ್ಲಿ ಭಾರತಕ್ಕೆ ಮೊಟ್ಟ ಮೊದಲ ಪದಕ.. ಮನು ಭಾಕರ್​ಗೆ ಅಭಿನಂದನೆಗಳ ಸುರಿಮಳೆ

ರಂಗಾರೆಡ್ಡಿ ಜಿಲ್ಲೆಯಲ್ಲಿನ ಗಚ್ಚಿಬೌಲಿಯ ಸಾಫ್ಟ್‌ವೇರ್ ಕಂಪನಿಯಲ್ಲಿ ಸಾವನ್ನಪ್ಪಿದ ಇಬ್ಬರು ಉದ್ಯೋಗಿಗಳು ಆಗಿದ್ದರು ಎನ್ನಲಾಗಿದೆ. ಕಾರು ಬಸ್​ಗೆ ಡಿಕ್ಕಿ ಹೊಡೆದಿದ್ದರಿಂದ ಬಸ್​ನ ಮುಂಭಾಗವೆಲ್ಲ ಹಾನಿಯಾಗಿದ್ದು ಪ್ರಯಾಣಿಕರಿಗೂ ಸಣ್ಣಪುಟ್ಟ ಗಾಯಗಳು ಆಗಿವೆ. ಸದ್ಯ ಈ ಭೀಕರ ದೃಶ್ಯಗಳು ಬಸ್ಸಿನ ಹಿಂದೆ ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಸದ್ಯ ವಿಡಿಯೋ ಫುಲ್ ವೈರಲ್ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment