/newsfirstlive-kannada/media/post_attachments/wp-content/uploads/2024/07/INDIAN_ARMY.jpg)
ಶ್ರೀನಗರ: ಭಯೋತ್ಪಾದಕರ ವಿರುದ್ಧ ನಡೆದ ಎರಡು ಪ್ರತ್ಯೇಕ ಗುಂಡಿನ ದಾಳಿಯಲ್ಲಿ ನಾಲ್ವರು ಉಗ್ರರನ್ನ ಹೊಡೆದುರುಳಿಸಲಾಗಿದೆ. ಇದೇ ವೇಳೆ ಇಬ್ಬರು ಭಾರತೀಯ ಸೈನಿಕರು ವೀರಮರಣ ಹೊಂದಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಮೊಡೆರ್ಗಾಮ್ ಹಾಗೂ ಫ್ರಿಸಲ್ ಚಿನ್ನಿಗಮ್ ಗ್ರಾಮದಲ್ಲಿ ಗುಂಡಿನ ಚಕಮಕಿ ನಡೆಯುತ್ತಿದೆ.
ಇದನ್ನೂ ಓದಿ:ಧಾರಾಕಾರ ಮಳೆಗೆ 100ಕ್ಕೂ ಹೆಚ್ಚು ರಸ್ತೆಗಳು ಬಂದ್.. ಭಾರೀ ಅನಾಹುತಕ್ಕೆ 13ಕ್ಕೂ ಹೆಚ್ಚು ಜನ ಸಾವು
ಗುಪ್ತಚರ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಕಾರ್ಯಾಚರಣೆ ಪ್ರಾರಂಭಿಸಿ ಭಯೋತ್ಪಾದಕರ ಅಡಗುತಾಣಗಳನ್ನು ನಾಶ ಮಾಡಿದರು. ಭದ್ರತಾ ಪಡೆಗಳು ಗ್ರಾಮಗಳನ್ನು ತಲುಪುತ್ತಿದ್ದಂತೆಯೇ ಭಯೋತ್ಪಾದಕರು ಮನೆಯೊಂದರಲ್ಲಿ ಅಡಗಿಕೊಂಡು ಗುಂಡಿನ ದಾಳಿ ನಡೆಸಲು ಮುಂದಾದರು. ಇದೇ ವೇಳೆ ಮೊಡೆರ್ಗಾಮ್ ಗ್ರಾಮದಲ್ಲಿ ಲ್ಯಾನ್ಸ್ ನಾಯಕ್ ಪ್ರದೀಪ್ ನೈನ್ ಹುತಾತ್ಮರಾಗಿದ್ದಾರೆ.
ಇದನ್ನೂ ಓದಿ: ದರ್ಶನ್ಗಾಗಿ ಶಕ್ತಿ ದೇವತೆಯ ಮೊರೆ ಹೋದ ವಿಜಯಲಕ್ಷ್ಮಿ.. ಬಂಧನಕ್ಕೂ ಮೊದಲು ನಟ ಅದೇ ದೇಗುಲಕ್ಕೆ ಹೋಗಿದ್ದರು..!
#JammuAndKashmir | Encounter underway between terrorists and security forces in Frisal Chinnigam area of Kulgam district@adgpipic.twitter.com/rriouu45ot
— DD News (@DDNewslive)
#JammuAndKashmir | Encounter underway between terrorists and security forces in Frisal Chinnigam area of Kulgam district@adgpipic.twitter.com/rriouu45ot
— DD News (@DDNewslive) July 7, 2024
">July 7, 2024
ಫ್ರಿಸಲ್ ಚಿನ್ನಿಗಮ್ ಗ್ರಾಮದಲ್ಲಿ ಲಷ್ಕರ್ ಸಂಘಟನೆಯ ಭಯೋತ್ಪಾದಕರು ನುಸುಳಿರುವ ಸಾಧ್ಯತೆಯ ಮೇಲೆ ಭದ್ರತಾ ಪಡೆಗಳು 2ನೇ ಬಾರಿಗೆ ಗುಂಡಿನ ದಾಳಿ ನಡೆಸಿದರು. ಈ ವೇಳೆ ನಡೆದ ಎರಡು ಕಡೆಯ ಫೈರಿಂಗ್ನಲ್ಲಿ 1ನೇ ರಾಷ್ಟ್ರೀಯ ರೈಫಲ್ಸ್‌ನ ಹವಾಲ್ದಾರ್ ಒಬ್ಬರು ಹುತಾತ್ಮರಾಗಿದ್ದಾರೆ. ಓರ್ವ ಭಯೋತ್ಪಾದಕನನ್ನು ಭದ್ರತಾ ಪಡೆಗಳು ಜೀವಂತವಾಗಿ ಹಿಡಿದಿದ್ದಾರೆ. ಕುಲ್ಗಾಮ್ ಜಿಲ್ಲೆಯ 2 ಗ್ರಾಮದಲ್ಲಿ ಕಾರ್ಯಾಚರಣೆ ಮುಂದುವರೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ