Advertisment

ಆಪರೇಷನ್​ ‘ಸಿಂಧೂರ’ ಲೋಗೋ ರೆಡಿ ಮಾಡಿದ್ದು ಯಾರು? ಕೊನೆಗೂ ಆ ರಹಸ್ಯ ರಿವೀಲ್‌!

author-image
admin
Updated On
ಆಪರೇಷನ್​ ‘ಸಿಂಧೂರ’ ಲೋಗೋ ರೆಡಿ ಮಾಡಿದ್ದು ಯಾರು? ಕೊನೆಗೂ ಆ ರಹಸ್ಯ ರಿವೀಲ್‌!
Advertisment
  • ಪಾಕಿಸ್ತಾನ ಈ ಲೋಗೋ ಅರ್ಥ ತಿಳಿಯೋಕೆ ಗೂಗಲ್ ಹುಡುಕಾಡಿತ್ತು
  • ಈ ಲೋಗೋವನ್ನ ವಿನ್ಯಾಸ ಮಾಡಿದ್ದು ಯಾವ ಜಾಹೀರಾತು ಕಂಪನಿ ಅಲ್ಲ
  • ಸಿಂಧೂರ್ ಪದದ ‘ಓ’ ನಲ್ಲಿ ಕುಂಕುಮ ಹಾಕಿ ಡಿಸೈನ್ ಮಾಡಿದ್ದು ಯಾರು?

ನವದೆಹಲಿ: ಲೋಗೋ ರಿಲೀಸ್​ ಮಾಡಿ, ಆ ಲೋಗೋ ಅರ್ಥವಾಗುವಷ್ಟರಲ್ಲಿ, ಪಾಕಿಸ್ತಾನದಲ್ಲಿ ವಿಧ್ವಂಸ ಸೃಷ್ಟಿಸಿದ್ದು ಆಪರೇಷನ್​ ‘ಸಿಂಧೂರ’​​​​. ಇಡೀ ಪ್ರಪಂಚಕ್ಕೆ ಈ ಲೋಗೋ ತಲೆಗೆ ಹುಳ ಬಿಟ್ಟಿದ್ದಂತೂ ಸುಳ್ಳಲ್ಲ.

Advertisment

ಪಾಕಿಸ್ತಾನವಂತೂ ಈ ಲೋಗೋ ಅರ್ಥ ತಿಳಿಯೋಕೆ ಗೂಗಲ್​ನಲ್ಲೆಲ್ಲಾ ಹುಡುಕಾಡಿತ್ತು. ಆದರೆ ಅದರ ಅರ್ಥ ತಿಳಿಯುವಷ್ಟರಲ್ಲಿ ಪೆಹಲ್ಗಾಮ್​​ನ ನರಮೇಧಕ್ಕೆ ಪ್ರತ್ಯುತ್ತರ ಕೊಟ್ಟಾಗಿತ್ತು. ಅಷ್ಟಕ್ಕೂ ಇಷ್ಟೊಂದು ಕುತೂಹಲ ಮೂಡಿಸಿದ ಈ ಆಪರೇಷನ್​ ಸಿಂಧೂರ್​ ಲೋಗೋವನ್ನ ಕ್ರಿಯೇಟ್​ ಮಾಡಿದ್ದು ಯಾವುದೋ ಜಾಹೀರಾತು ಕಂಪನಿಯಂತೂ ಅಲ್ಲ. ಲೋಗೋ ಕ್ರಿಯೇಟರ್ಸ್​ ಕೂಡ ಅಲ್ಲ. ಈ ಲೋಗೋವನ್ನ ವಿನ್ಯಾಸ ಮಾಡಿದ್ದು, ಲೋಗೋ ತಕ್ಕಂತೆ ಪಾಕ್​ನಲ್ಲಿ ವಿಧ್ವಂಸ ನಡೆಸಿದ್ದು ನಮ್ಮ ಸೈನಿಕರೇ.

publive-image

ಇಬ್ಬರು ಯೋಧರಿಂದ ವಿನ್ಯಾಸಗೊಂಡಿತ್ತು ಆಪರೇಷನ್​ ಸಿಂಧೂರ್​ ಲೋಗೋ!
ಭಾರತೀಯ ಸೇನೆಯ ಯೋಧರಾದ, ಲೆಫ್ಟಿನೆಂಟ್ ಕರ್ನಲ್ ಹರ್ಷಾ ಗುಪ್ತಾ, ಹವಾಲ್ದಾರ್ ಸುರೀಂದರ್ ಸಿಂಗ್ ರಿಂದ ‘ಸಿಂಧೂರ್‌’​​ ಲೋಗೋ ವಿನ್ಯಾಸಗೊಂಡಿತ್ತು. ಸಿಂಧೂರ್ ಪದದ ‘ಓ’ ನಲ್ಲಿ ಕುಂಕುಮ ಹಾಕಿ ಡಿಸೈನ್ ಮಾಡಿ, ಪೆಹಲ್ಗಾಮ್​ನಲ್ಲಿ ಕುಂಕುಮ ಕಳೆದುಕೊಂಡವರ ಪ್ರತೀಕವಾಗಿ ಹರ್ಷಾ ಗುಪ್ತಾ, ಸುರೀಂದರ್ ಸಿಂಗ್ ಈ ಲೋಗೋ ಡಿಸೈನ್​ ಮಾಡಿದ್ದರು.

ಇದನ್ನೂ ಓದಿ: ಜೈ ಹಿಂದ್.. ಯೋಧರ ಕುಟುಂಬ, ನಿವೃತ್ತ ಯೋಧರ ಕಲ್ಯಾಣಕ್ಕೆ ಸಿದ್ದರಾಮಯ್ಯ ಮಹತ್ವದ ಘೋಷಣೆ 

Advertisment

ಇವರಿಬ್ಬರು ಸೇನೆಯ ಅಡಿಷನಲ್ ಡೈರೆಕ್ಟರೇಟ್ ಜನರಲ್ ಆಫ್ ಸ್ಟ್ರಾಟಜಿಕ್ ಕಮ್ಯೂನಿಕೇಷನ್ ವಿಭಾಗದವರು. ಮೇ,7 ರ ಬೆಳಗ್ಗೆ 1.51ಕ್ಕೆ ಈ ಲೋಗೋ ಸಹಿತ ಟ್ವೀಟ್ ಮಾಡಿದ್ದ ಭಾರತೀಯ ಸೇನೆ. ಪಾಕಿಗರನ್ನ ದಿಕ್ಕೆಡಿಸಿತ್ತು. ಆಪರೇಷನ್​ ನಂತರ ಪಹಲ್ಗಾಮ್ ಟೆರರ್ ಅಟ್ಯಾಕ್​ನಿಂದ ಜೀವ ಬಿಟ್ಟಿವರಿಗೆ, ನ್ಯಾಯ ನೀಡಲಾಗಿದೆ. ಜೈ ಹಿಂದ್ ಎಂದು ಈ ಲೋಗೋ ಸಹಿತ ಭಾರತೀಯ ಸೇನೆ ಟ್ವೀಟ್ ಮಾಡಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment