ಒಬ್ಬರಲ್ಲ, ಇಬ್ಬರು ಉಗ್ರರ ಮನೆ ಉಡೀಸ್​.. ಸ್ಫೋಟ ಮಾಡಿ ಧ್ವಂಸಗೊಳಿಸಿದ ಕ್ಷಣ ಹೇಗಿದೆ..? Video

author-image
Veena Gangani
Updated On
ಒಬ್ಬರಲ್ಲ, ಇಬ್ಬರು ಉಗ್ರರ ಮನೆ ಉಡೀಸ್​.. ಸ್ಫೋಟ ಮಾಡಿ ಧ್ವಂಸಗೊಳಿಸಿದ ಕ್ಷಣ ಹೇಗಿದೆ..? Video
Advertisment
  • ಏಪ್ರಿಲ್ 22 ರಂದು ಅಮಾಯಕ ಜೀವ ತೆಗೆದಿರುವ ಉಗ್ರರು
  • ಭಾರತೀಯ ಸೇನೆಯಿಂದ ಪ್ರತೀಕಾರದ ದಾಳಿ ಶುರುವಾಗಿದೆ
  • ಇಂದು ಬೆಳಗ್ಗೆ ಇಬ್ಬರು ಉಗ್ರರ ಮನೆ ಧ್ವಂಸ ಮಾಡಿದ ಸೇನೆ

ಪಹಲ್ಗಾಮ್​ನಲ್ಲಿ ಕುಟುಂಬಸ್ಥರ ಜೊತೆಗೆ ಎಂಜಾಯ್​ ಮಾಡುತ್ತಿದ್ದ 26 ಪ್ರವಾಸಿಗರ ಜೀವವನ್ನು ಬಲಿ ಪಡೆದುಕೊಂಡಿದ್ದ ಇಬ್ಬರು ಉಗ್ರರ ಮನೆಯನ್ನು ಸ್ಫೋಟ ಮಾಡಲಾಗಿದೆ.

ಇದನ್ನೂ ಓದಿ:Big breaking: ಪಹಲ್ಗಾಮ್​​ನಲ್ಲಿ 26 ಅಮಾಯಕ ಜೀವ ತೆಗೆದ ಓರ್ವ ಉಗ್ರನ ಮನೆ ಧ್ವಂಸ


">April 25, 2025

publive-image

ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿದ್ದ ಲಷ್ಕರ್-ಎ-ತೈಬಾ (ಎಲ್‌ಇಟಿ) ಭಯೋತ್ಪಾದಕರಾದ ಆದಿಲ್ ಹುಸೇನ್ ಥೋಕರ್ ಹಾಗೂ ಆಸೀಫ್ ಶೇಖ್ ಇಬ್ಬರ ಮನೆಯ ಒಳಗೆ ಸ್ಫೋಟಕಗಳನ್ನು ಇರಿಸಲಾಗಿತ್ತು. ಸ್ಫೋಟ ಮಾಡಿ ನಾಶ ಮಾಡಲಾಗಿದೆ ಎಂದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಟ್ರಾಲ್​​ನಲ್ಲಿರುವ ಉಗ್ರನ ಮನೆಯನ್ನು ಭಾರತೀಯ ಸೇನೆ ಬ್ಲಾಸ್ಟ್ ಮಾಡಿದೆ.

ಹೇಗೆ ಧ್ವಂಸ ಮಾಡಲಾಗಿದೆ..?

ಸೋಶಿಯಲ್ ಮೀಡಿಯಾದಲ್ಲಿ ಮನೆ ಧ್ವಂಸಕ್ಕೆ ಸಂಬಂಧಿಸಿದ ವಿಡಿಯೋಗಳು ಹರಿದಾಡುತ್ತಿವೆ. ಭಾರತೀಯ ಸೇನೆ ಉಗ್ರರ ಮನೆಯನ್ನು ಸ್ಫೋಟಿಸಿ ನೆಲಕ್ಕೆ ಬೀಳಿಸಿದೆ. ಒಂದು ವಿಡಿಯೋ ಪ್ರಕಾರ, ರಾತ್ರಿ ವೇಳೆ ಮನೆಯನ್ನು ಸ್ಫೋಟ ಮಾಡಿದಂತೆ ಕಾಣುತ್ತಿದೆ. ಸ್ಫೋಟಗೊಂಡ ತೀವ್ರತೆಗೆ ಬೆಂಕಿಯ ಜ್ವಾಲೆ ಏಕಾಏಕಿ ಆವರಿಸಿದೆ. ನಂತರ ಮನೆಯ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಇನ್ನೊಂದು ವಿಡಿಯೋದಲ್ಲಿ ಸ್ಫೋಟದ ನಂತರ ಮನೆಯ ಅವಶೇಷಗಳನ್ನು ತೋರಿಸುತ್ತಿರುವ ಕ್ಲಿಪ್ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment