ಲಾರಿ-ಲಾರಿ ಡಿಕ್ಕಿ, ಹೊತ್ತಿಕೊಂಡ ಬೆಂಕಿ.. ಚಾಲಕ ಸಜೀವ ದಹನ

author-image
AS Harshith
Updated On
ಲಾರಿ-ಲಾರಿ ಡಿಕ್ಕಿ, ಹೊತ್ತಿಕೊಂಡ ಬೆಂಕಿ.. ಚಾಲಕ ಸಜೀವ ದಹನ
Advertisment
  • ಅಪಘಾತದ ವೇಳೆ ಹೊತ್ತಿ ಉರಿದ ಎರಡು ಲಾರಿಗಳು
  • ಲಾರಿಗೆ ಹಿಂದಿನಿಂದ ಬಂದು ಡಿಕ್ಕಿ ಹೊಡೆದ ಮತ್ತೊಂದು ಲಾರಿ
  • ಬೆಂಕಿಯ ಕೆನ್ನಾಲಿಗೆಗೆ ಓರ್ವ ಲಾರಿ ಚಾಲಕ ಅಲ್ಲೇ ಸಾವು

ಬಾಗಲಕೋಟೆ: ಅಪಘಾತದ ವೇಳೆ ಎರಡು ಲಾರಿಗಳು ಹೊತ್ತಿ ಉರಿದ ಘಟನೆ ಬೆಳಗಲ್ ಕ್ರಾಸ್ ಬಳಿಯ NH50ರಲ್ಲಿ ತಡರಾತ್ರಿ ನಡೆದಿದೆ. ಪರಿಣಾಮ ಓರ್ವ ಲಾರಿ ಚಾಲಕ ಸಾವನ್ನಪ್ಪಿದ್ದಾನೆ.

ಬೆಳಗಲ್ ಕ್ರಾಸ್ ಬಳಿ ಒಂದು ಲಾರಿಗೆ ಇನ್ನೊಂದು ಲಾರಿ ಹಿಂದಿನಿಂದ ಬಂದು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಕಾಣಿಸಿಕೊಂಡಿದೆ. ಹಿಂದಿನ ಲಾರಿಯಲ್ಲಿ ಕಾಟನ್ ಇದ್ದ ಕಾರಣ ಬೆಂಕಿ ಹೊತ್ತಿಕೊಂಡಿದೆ.

ಇದನ್ನೂ ಓದಿ: ರಾಜ್ಯದಲ್ಲೇ ಮೊದಲು ಭರ್ತಿಯಾದ ಕಬಿನಿ ಡ್ಯಾಂ! ನದಿ ಪಾತ್ರದ ಜನರಿಗೆ ಎಚ್ಚರಿಕೆ

ಬೆಂಕಿ ಎರಡು ಲಾರಿಗೆ ಆವರಿಸಿದ್ದು, ಬೆಂಕಿಯ ಕೆನ್ನಾಲಿಗೆಗೆ ಓರ್ವ ಲಾರಿ ಚಾಲಕ ಸಾವನ್ನಪ್ಪಿದ್ದಾನೆ. ಒಂದು ಲಾರಿ ರಾಜಸ್ಥಾನ ಮೂಲದ್ದಾಗಿದ್ದು, ಇನ್ನೊಂದು ಲಾರಿ ಮಹಾರಾಷ್ಟ್ರ ಮೂಲದೆಂಬ ಮಾಹಿತಿ ಲಭಿಸಿದೆ. ಸ್ಥಳಕ್ಕೆ ಹುನಗುಂದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಸ್ಟೇರಿಂಗ್​ ಕಟ್​​! ಸರ್ಕಾರಿ ಬಸ್​ ಪಲ್ಟಿ; 30ಕ್ಕೂ ಹೆಚ್ಚು ಶಾಲಾ ಮಕ್ಕಳಿಗೆ ಗಾಯ, ಓರ್ವ ವಿದ್ಯಾರ್ಥಿನಿ ಗಂಭೀರ

ಸಾವನ್ನಪ್ಪಿದ ಮೃತ ಚಾಲಕನ ಹೆಸರು ಪತ್ತೆಯಾಗಬೇಕಿದೆ. ಸದ್ಯ ಪೊಲೀಸರು ಪರಿಶೀಲನೆಯಲ್ಲಿ ತೊಡಗಿದ್ದು, ತನಿಖೆಯಿಂದ ಹೆಚ್ಚಿನ ಮಾಹಿತಿ ಸಿಗಬೇಕಿದೆ. ಹುನಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment