/newsfirstlive-kannada/media/post_attachments/wp-content/uploads/2024/08/RCB-2.jpg)
ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಇನ್ನೇನು 5 ತಿಂಗಳು ಮಾತ್ರ ಬಾಕಿ ಇದೆ. ಇನ್ನೆರಡು ತಿಂಗಳಲ್ಲಿ ಐಪಿಎಲ್ ಮೆಗಾ ಹರಾಜು ನಡೆಯಲಿದೆ. ಇದಕ್ಕಾಗಿ ಎಲ್ಲಾ ಐಪಿಎಲ್ ಫ್ರಾಂಚೈಸಿ ತಂಡಗಳು ಭರ್ಜರಿ ತಯಾರಿ ಮಾಡಿಕೊಂಡಿವೆ. ಈಗಾಗಲೇ ಪ್ರತಿ ಐಪಿಎಲ್ ತಂಡಕ್ಕೆ 6 ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಇದರ ಮಧ್ಯೆ ಆರ್‌ಸಿಬಿ ಫ್ಯಾನ್ಸ್ಗೆ ಶಾಕಿಂಗ್ ನ್ಯೂಸ್ ಒಂದಿದೆ.
ಐಪಿಎಲ್ ಮೆಗಾ ಹರಾಜಿಗೆ ಮೊದಲು ಆರ್‌ಸಿಬಿ ಅಗತ್ಯವಿರೋ ಆಟಗಾರರನ್ನು ಉಳಿಸಿಕೊಳ್ಳಲು ಪ್ಲಾನ್ ಮಾಡಿಕೊಂಡಿದೆ. ಇದಕ್ಕೆ ಕಾರಣ ಅಕ್ಟೋಬರ್ 31ನೇ ತಾರೀಕಿನ ಒಳಗೆ ರೀಟೈನ್ ಲಿಸ್ಟ್ ಬಿಸಿಸಿಐಗೆ ಸಲ್ಲಿಸಬೇಕಿದೆ. ಸದ್ಯಕ್ಕೆ ಸಿಕ್ಕಿರೋ ಮಾಹಿತಿ ಪ್ರಕಾರ ಆರ್‌ಸಿಬಿ ಇಬ್ಬರು ಆಟಗಾರರನ್ನು ರೀಟೈನ್ ಲಿಸ್ಟ್ನಿಂದ ಹೊರಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಹಾಗಾಗಿ ಆರ್‌ಸಿಬಿ ತಂಡದ ಇಬ್ಬರು ಆನ್‌ಕ್ಯಾಪ್ಡ್ ಆಟಗಾರರ ಮೇಲೆ ಬೇರೆ ಐಪಿಎಲ್ ತಂಡಗಳು ಕಣ್ಣಿಟ್ಟಿವೆ.
ರಾವತ್, ಮಹಿಪಾಲ್ಗೆ ಗೇಟ್ಪಾಸ್
ಮುಂದಿನ ಐಪಿಎಲ್ 2025ರ ಹರಾಜು ಪ್ರಕ್ರಿಯೆಯಲ್ಲಿ ಆರ್‌ಸಿಬಿ ವಿಕೆಟ್ ಕೀಪರ್-ಬ್ಯಾಟರ್ ಅನುಜ್ ರಾವತ್ ಮತ್ತು ಬ್ಯಾಟಿಂಗ್ ಆಲ್‌ರೌಂಡರ್ ಮಹಿಪಾಲ್ ಲೊಮ್ರೋರ್ ಭಾಗಿಯಾಗುವ ಸಾಧ್ಯತೆ ಇದೆ. ಆರ್‌ಸಿಬಿ ಅನುಜ್ ರಾವತ್ ಮತ್ತು ಮಹಿಪಾಲ್ ಲೊಮ್ರೋರ್ ಇಬ್ಬರನ್ನು ಕೈ ಬಿಡುವ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.
ಆರ್‌ಸಿಬಿ ಪ್ಲೇಯರ್ಸ್ ಬೇರೆ ಫ್ರಾಂಚೈಸಿಗಳ ಕಣ್ಣು
ರಾವತ್ ಮತ್ತು ಲೊಮ್ರೊರ್ ಅವರನ್ನು ಬಿಡ್ ಮಾಡಲು ಹಲವು ಐಪಿಎಲ್ ತಂಡಗಳು ತಯಾರಿ ನಡೆಸಿವೆ. ಇದಕ್ಕೆ ಕಾರಣ ಇಬ್ಬರು ಪ್ರತಿಭಾವಂತ ಆಟಗಾರರು. ಯಾವುದೇ ಐಪಿಎಲ್ ತಂಡದ ದೀರ್ಘಾವಧಿಯ ಕಾರ್ಯತಂತ್ರದ ಭಾಗವಾಗಿಸಲು ಇಬ್ಬರು ಆಟಗಾರರು ಅರ್ಹರು. ಹಾಗಾಗಿ ಇಬ್ಬರ ಮೇಲೆ ಮೆಗಾ ಹರಾಜಿನಲ್ಲಿ ಹಣ ಸುರಿಯಲು ಐಪಿಎಲ್ ತಂಡಗಳು ಹಿಂದೇಟು ಹಾಕುವುದಿಲ್ಲ.
ಇದನ್ನೂ ಓದಿ: ಮೆಗಾ ಆಕ್ಷನ್ಗೆ ಮುನ್ನವೇ ಬಿಗ್ ಟ್ರೇಡ್.. ಆರ್ಸಿಬಿಗೆ ಸ್ಟಾರ್ ಪ್ಲೇಯರ್ ರೀ ಎಂಟ್ರಿ!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್