newsfirstkannada.com

ಕಲಬುರಗಿಯಲ್ಲಿ ಹಾಡಹಗಲೇ ಮಹಿಳೆಯರ ಬರ್ಬರ ಹತ್ಯೆ; ತಲೆ ಮೇಲೆ ಕಲ್ಲು ಎತ್ತು ಹಾಕಿ ಹೋದ ಕಿರಾತಕರು

Share :

Published April 7, 2024 at 4:39pm

Update April 7, 2024 at 4:40pm

  ಕೂಲಿ ಕೆಲಸಕ್ಕೆಂದು ಹೋಗಿದ್ದವರ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ

  ಹೊರ ವಲಯದ ತಾವರಗೇರಾ ಕ್ರಾಸ್ ಬಳಿ ನಡೆದ ಘಟನೆ ಇದು

  ಶರಣಮ್ಮ ಹಾಗೂ ಚಂದಮ್ಮ ಕೊಲೆಯಾದ ಇಬ್ಬರು ಮಹಿಳೆಯರು

ಕಲಬುರಗಿ: ಹಾಡಹಗಲೇ ಇಬ್ಬರು ಮಹಿಳೆಯರನ್ನು ಬರ್ಬರವಾಗಿ ಹತ್ಯೆ ಮಾಡಿರೋ ಘಟನೆ ಹೊರ ವಲಯದ ತಾವರಗೇರಾ ಕ್ರಾಸ್ ಬಳಿ ನಡೆದಿದೆ. ಶರಣಮ್ಮ (51) ಹಾಗೂ ಚಂದಮ್ಮ (53) ಕೊಲೆಯಾದ ಮಹಿಳೆಯುರು.

ಇದನ್ನೂ ಓದಿ: VIDEO: ಮುದ್ದಾದ ಮಕ್ಕಳ ಜೊತೆ ನಂಜನಗೂಡು ದೇವಸ್ಥಾನಕ್ಕೆ ಭೇಟಿ ಕೊಟ್ಟ ಧ್ರುವ ಸರ್ಜಾ ದಂಪತಿ

ಮೃತ ಶರಣಮ್ಮ ಕಲಬುರಗಿಯ ಕೆ.ಕೆ ನಗರ ನಿವಾಸಿ. ಚಂದಮ್ಮ ತಾಜ್ ಸುಲ್ತಾನಪುರ ನಿವಾಸಿ. ಕೂಲಿ ಕೆಲಸಕ್ಕೆಂದು ನಗರದ ಗಂಜ್ ಪ್ರದೇಶ ದಿಂದ ಬಸ್ ನಲ್ಲಿ ಕೆಲಸಕ್ಕೆ ಹೋಗಿದ್ದರು. ಇದೇ ವೇಳೆ ದುಷ್ಕರ್ಮಿಗಳು ಆ ಇಬ್ಬರು ಮಹಿಳೆಯರ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಆದರೆ ಈ ಇಬ್ಬರ ಕೊಲೆಯ ಬಗ್ಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಸದ್ಯ ಈ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಪೊಲೀಸ್​ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ‌ ನಡೆಸುತ್ತಿದ್ದಾರೆ. ಈ ಘಟನೆ ಸಂಬಂಧ ಕಲಬುರಗಿ ಸಬ್ ಅರ್ಬನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಲಬುರಗಿಯಲ್ಲಿ ಹಾಡಹಗಲೇ ಮಹಿಳೆಯರ ಬರ್ಬರ ಹತ್ಯೆ; ತಲೆ ಮೇಲೆ ಕಲ್ಲು ಎತ್ತು ಹಾಕಿ ಹೋದ ಕಿರಾತಕರು

https://newsfirstlive.com/wp-content/uploads/2024/04/kalaburagi-death.jpg

Load More