ಮಧ್ಯರಾತ್ರಿ ಹೆಣ್ಣುಮಕ್ಕಳಿಗೆ ಲಿಫ್ಟ್​​ ಕೊಡೋ ಮುನ್ನ ಎಚ್ಚರ! ಪುರುಷರು ಓದಲೇಬೇಕಾದ ಸ್ಟೋರಿ

author-image
Gopal Kulkarni
Updated On
ಮಧ್ಯರಾತ್ರಿ ಹೆಣ್ಣುಮಕ್ಕಳಿಗೆ ಲಿಫ್ಟ್​​ ಕೊಡೋ ಮುನ್ನ ಎಚ್ಚರ! ಪುರುಷರು ಓದಲೇಬೇಕಾದ ಸ್ಟೋರಿ
Advertisment
  • ರಾತ್ರಿ ಮಾತ್ರ ಲಿಪ್​ಸ್ಟಿಕ್ಕು, ಕಲರ್​ಫುಲ್ ಡ್ರೆಸ್ಸು, ರಸ್ತೆ ಬದಿ ಪ್ಲಾನು!
  • ತೀರಾ ಯಾಮಾರಿ ಟ್ರಕ್ ಡ್ರೈವರ್​ ಗಾಡಿ ನಿಲ್ಲಿಸಿಬಿಟ್ರೆ ಮುಗೀತು!
  • ಕತ್ತಲ ರಾತ್ರಿಯಲ್ಲಷ್ಟೇ ಹುಡುಗಿಯರು ಬೆಳಕು ಹರಿದರೇ ಚಿತ್ರಾನ್ನ

ತುಟಿಗೆ ಲಿಪ್​ಸ್ಟಿಕ್, ಕಿವಿಗೆ ಆಕರ್ಷಕ ಓಲೆ, ಕಲರ್​ಫುಲ್ ಡ್ರೆಸ್ಸು. ಕತ್ತಲಲ್ಲಿ ನೋಡಿದ್ರೆ ಒಂದು ಕ್ಷಣಕ್ಕೇ ಆಕರ್ಷಿಸೋ ಮೈಮಾಟ. ಹಾಗಾಗಿಯೇ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿಗಳಲ್ಲಿ ನಿಲ್ಲುತ್ತಿದ್ದರು. ಟ್ರಕ್ ಡ್ರೈವರ್​ಗಳ ಬಳಿ ಡ್ರಾಪ್ ಕೇಳುತ್ತಿದ್ದರು. ಈ ಸಂದರ್ಭ ಟ್ರಕ್ ಡ್ರೈವರ್ ಯಾಮಾರಿದ್ರೆ ಕಥೆ ಮುಗೀತಿತ್ತು. ಖತರ್ನಾಕ್ ಗ್ಯಾಂಗ್ ಇದೀಗ ಪೊಲೀಸರ ಅತಿಥಿಗಳಾಗಿದ್ದಾರೆ.

ರಾತ್ರಿ ಮಾತ್ರ ಹುಡುಗೀರು ಬೆಳಗ್ಗೆ ರಾಬರ್ಸ್
ರಾಜಸ್ಥಾನದ ಕರ್ಣಿ ವಿಹಾರದ ರಸ್ತೆ ಅಕ್ಷರಶಃ ಡ್ರಕ್ ಡ್ರೈವರ್ಗಳನ್ನು ಬೆಚ್ಚಿಬೀಳಿಸುತ್ತಿದೆ. ಇದೇ ಡಿಸೆಂಬರ್ 16ರಂದು ಮಹೇಂದ್ರ ಸೋಡಿಯಾ ಅನ್ನೋ ಟ್ರಕ್ ಡ್ರೈವರ್​​ ಕಂಗಾಲಾಗಿದ್ದಾನೆ. ಇಲ್ಲಿನ ಗೋಪಾಲಪುರ ಬ್ರಿಡ್ಜ್ ಸನಿಹ ಕತ್ತಲಲ್ಲಿ ಇಬ್ಬರು ಯುವತಿಯರು ಡ್ರಾಪ್ ಕೇಳಿದ್ದಾರೆ. ಗಾಡಿ ನಿಲ್ಲಿಸಿ ಡ್ರಾಪ್ ಕೊಡಲು ಮುಂದಾದಾಗ ಏಕಾಏಕಿ ಗಾಡಿ ಹತ್ತಿದ್ದ ಆ ಇಬ್ಬರು ಮಹೇಂದ್ರನನ್ನ ಬೆದರಿಸಿ ₹41,000 ಹಣವನ್ನು ದೋಚಿದ್ದಾರೆ. ಮಧ್ಯಪ್ರದೇಶ ಮೂಲದ ಮಹೇಂದ್ರ ಸೋಡಿಯಾ ಕೂಡಲೇ ಕರ್ಣಿ ವಿಹಾರ ಪೊಲೀಸರಿಗೆ ದೂರು ನೀಡಿದ್ದಾನೆ. ಅಷ್ಟೇ, ಅಲ್ಲ ಆ ಇಬ್ಬರು ಇದೇ ರಸ್ತೆಯಲ್ಲಿ ಹೋಗುತ್ತಿದ್ದಾರೆ ಅನ್ನೋ ಸುಳಿವು ನೀಡಿದ್ದ.

ಇದನ್ನೂ ಓದಿ:ಅವಳು ‘ಅವಳ’ ಜೊತೆ ಓಡಿ ಹೋದಳು -ಗರ್ಭಿಣಿ ಪತ್ನಿಗಾಗಿ ಹೈಕೋರ್ಟ್​ ಮೆಟ್ಟಿಲೇರಿದ ಪತಿ

ಬೆಚ್ಚಿಬೀಳಿಸೋ ಟ್ವಿಸ್ಟ್​ ಕೊಟ್ರು ಪೊಲೀಸರು!
ಟ್ರಕ್ ಡ್ರೈವರ್​ ಮಹೇಂದ್ರ ಜೊತೆ ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರಿಗೆ ಒಂದೇ ಗಂಟೆಯಲ್ಲಿ ಆ ಇಬ್ಬರು ಯುವತಿಯರು ಸಿಕ್ಕಿಬಿದ್ರು. ನೋಡೋದಕ್ಕೆ ಥೇಟ್​ ಯುವತಿಯರಂತೆಯೇ ಡ್ರೆಸ್​ ಮಾಡಿಕೊಂಡಿದ್ದರಷ್ಟೇ. ಅಸಲಿಗೆ ಅವರಿಬ್ಬರೂ ಹುಡುಗಿಯರಲ್ಲವೇ ಅಲ್ಲ. ಪ್ರತೀ ಸಲ ಇದೇ ರೀತಿ ಹೆಣ್ಣಿನ ವೇಷ ಧರಿಸಿ ಈ ರಸ್ತೆಯಲ್ಲಿ ರಾಬರಿ ಮಾಡ್ತಿದ್ದರು. ರಾತ್ರಿ ಚಮಕ್ ಚಲ್ಲೋ, ಬೆಳಗ್ಗೆ ರಾಕಿಂಗ್ ರಾಬರ್ಸ್​ ಆಗಿದ್ದರು. ಕರ್ಣಿ ವಿಹಾರ ಪೊಲೀಸರು ಅಶೋಕ್ ಹಾಗೂ ತೃತೀಯ ಲಿಂಗಿ ಪೂಜಾರನ್ನ ಬಂಧಿಸಿದ್ದಾರೆ. ಇದೇ ರೀತಿ ಹಲವು ಪ್ರಕರಣಗಳನ್ನು ಮಾಡಿ ಪೊಲೀಸರಿಗೆ ಸಿಗದೇ ಪರಾರಿ ಆಗ್ತಿದ್ರು. ಇದೀಗ ಕರ್ಣಿ ವಿಹಾರ ಪೊಲೀಸರ ಅತಿಥಿಗಳಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment