/newsfirstlive-kannada/media/post_attachments/wp-content/uploads/2025/07/PUNE-AND-BELAGAVI-CASE.jpg)
ಕಂಪನಿಯ ಸಭೆಯಿಂದ ಅರ್ಧಕ್ಕೆ ಎದ್ದು ಹೋದ ಇಂಜಿನಿಯರ್ ಒಬ್ಬರು ಕಚೇರಿ ಕಟ್ಟಡದಿಂದ ಹೊರಗೆ ಜಂಪ್ ಮಾಡಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಮಹಾರಾಷ್ಟ್ರದ ಪುಣೆಯ ಹಿಂಜೆವಾಡಿ ಐ.ಟಿ. ಹಬ್ನಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಪಿಯೂಶ್ ಅಶೋಕ್ ಕವಾಡೆ ಆತ್ಮ*ಹತ್ಯೆಗೆ ಶರಣಾಗಿದ್ದಾರೆ.
ಪುಣೆಯ ಅಟ್ಲಾಸ್ ಕಪಕೋ(ಇಂಡಿಯಾ) ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಪಿಯೂಶ್ ಅಶೋಕ್ ಕವಾಡೆ ಉದ್ಯೋಗದಲ್ಲಿದ್ದರು. ಫೋನ್ ಬಂತೆಂದು ಸಭೆಯಿಂದ ಅರ್ಧಕ್ಕೆ ಎದ್ದು ಹೊರಗೆ ಹೋದವರು ಸೀದಾ ಕಟ್ಟಡದಿಂದ ಜಂಪ್ ಮಾಡಿ ಆತ್ಮ*ಹತ್ಯೆಗೆ ಶರಣಾಗಿದ್ದಾರೆ. 23 ವರ್ಷದ ಪಿಯೂಶ್ ಅಶೋಕ್ ಡೆ*ತ್ ನೋಟ್ ಬರೆದಿಟ್ಟಿದ್ದು, ಅದನ್ನು ಈಗ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಇದರಲ್ಲಿ ತಮ್ಮ ತಂದೆಗೆ ಕ್ಷಮೆ ಕೇಳಿದ್ದಾರೆ. ಜೀವನದಲ್ಲಿ ನಾನು ವಿಫಲನಾಗಿದ್ದೇನೆ ಎಂದು ಪಿಯೂಶ್ ಅಶೋಕ್ ಬರೆದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕಳೆದ ವರ್ಷದ ಜುಲೈನಿಂದ ಪಿಯೂಶ್ ಅಶೋಕ್ ಪುಣೆಯ ಅಟ್ಲಾಸ್ ಕಪಕೋ(ಇಂಡಿಯಾ) ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದರು.
ಇದನ್ನೂ ಓದಿ: ದರ್ಶನ್ ಅಭಿಮಾನಿಗಳ ವಿರುದ್ಧದ ತನಿಖೆ ಹೇಗೆ ನಡೆಯುತ್ತದೆ? ಕಮಿಷನರ್ ಹೇಳಿದ್ದೇನು..?
ಇಂಜಿನಿಯರ್ ಪಿಯೂಶ್ ಅಶೋಕ್ಗೆ ಏನಾದರೂ ಕೆಲಸದ ಒತ್ತಡ ಇತ್ತೆ ಎಂಬ ಪ್ರಶ್ನೆಗೆ ಉತ್ತರಿಸಿದ ಪುಣೆ ಎಸಿಪಿ ಸುನೀಲ್ ಕುರಾಡೆ, ಡೆ*ತ್ ನೋಟ್ ಅನ್ನು ಮೊದಲ ನೋಟದಲ್ಲಿ ನೋಡಿದರೆ ಆ ರೀತಿಯ ಯಾವುದೇ ಅಂಶವೂ ನನಗೆ ಕಂಡು ಬಂದಿಲ್ಲ. ತನಿಖೆ ಇನ್ನೂ ನಡೆಯುತ್ತಿದೆ. ಡೆ*ತ್ ನೋಟ್ ನಲ್ಲಿ ಬರೆದಿರುವುದನ್ನು ಸಂಪೂರ್ಣವಾಗಿ ತನಿಖೆ ಮಾಡಲಾಗುವುದು. ಸಂಬಂಧಿಕರು ಮತ್ತಿತ್ತರ ವಿಷಯಗಳು ತನಿಖೆ ವೇಳೆ ಬರುತ್ತವೆ ಎಂದು ಹೇಳಿದ್ದಾರೆ. ಪಿಯೂಶ್ ಅಶೋಕ್ ಆಕಸ್ಮಿಕವಾಗಿ ಕಟ್ಟಡದ ಮೇಲಿಂದ ಬಿದ್ದು ಸಾ*ವನ್ನಪ್ಪಿದ್ದಾರೆ ಎಂದು ಕೇಸ್ ದಾಖಲಿಸಿಕೊಂಡು ಪುಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕೆಲಸದಿಂದ ವಜಾ ಆಗಿದ್ದಕ್ಕೆ ಬೆಳಗಾವಿ ಯುವಕ ಆತ್ಮ*ಹತ್ಯೆ
ಇತ್ತ ನಮ್ಮ ಕರ್ನಾಟಕದ ಬೆಳಗಾವಿ ಜಿಲ್ಲೆಯಲ್ಲೂ ಯುವಕನೋರ್ವ ಆತ್ಮ*ಹತ್ಯೆಗೆ ಶರಣಾಗಿದ್ದಾನೆ. ಕಂಪನಿಯು ತನ್ನನ್ನು ಕೆಲಸದಿಂದ ವಜಾ ಮಾಡಿದಕ್ಕೆ ಮನನೊಂದು ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ರವಿ ವೀರನಗೌಡ ಹಟ್ಟಿಹೊಳಿ (24) ಆತ್ಮಹತ್ಯೆಗೆ ಶರಣಾದ ದುರ್ದೈವಿ. ರವಿ ಹಟ್ಟಿಹೊಳಿ, ಬೆಳಗಾವಿ ತಾಲೂಕಿನ ಮೋದಗಾ ಗ್ರಾಮದ ನಿವಾಸಿ. ಎಂಸಿಎ ಪದವೀಧರನಾಗಿದ್ದ ರವಿ ವೀರನಗೌಡ ಹಟ್ಟಿಹೊಳಿ, ಕಳೆದೊಂದು ವರ್ಷದಿಂದ ಪುಣೆಯ ಗ್ಲೋಬಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. 15 ದಿನಗಳ ಹಿಂದೆ ಉದ್ಯೋಗದಿಂದ ತೆಗೆದುಹಾಕಿದ್ದಕ್ಕೆ ರವಿ ನೊಂದಿದ್ದರು. ಸ್ವಗ್ರಾಮಕ್ಕೆ ಮರಳಿ ಮನೆಯಲ್ಲೇ ನೇಣುಬಿಗಿದುಕೊಂಡು ರವಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಾರಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ: ಹೆಣ್ಮಕ್ಕಳಿಗೆ ಅಶ್ಲೀಲ ಮೆಸೇಜ್ ವಿರುದ್ಧ ಶಿವಣ್ಣ ಆಕ್ರೋಶ.. ರಮ್ಯಾ ಪರ ನಿಂತು ಏನಂದ್ರು ಹ್ಯಾಟ್ರಿಕ್ ಹೀರೋ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ