/newsfirstlive-kannada/media/post_attachments/wp-content/uploads/2024/06/CKM_ARRESTED.jpg)
ಚಿಕ್ಕಮಗಳೂರು: ನಮ್ಮನ್ನು ನೋಡಿ ಜನ ಹೆದರಬೇಕೆಂದು ಇನ್ಸ್ಟಾದಲ್ಲಿ ಲಾಂಗ್ ಹಿಡಿದಿರೋ ವಿಡಿಯೋ ಪೋಸ್ಟ್ ಹಾಕ್ತಿದ್ದ ಇಬ್ಬರು ಕಿಡಿಗೇಡಿಗಳನ್ನ ಸಿನಿಮೀಯಾ ರೀತಿಯಲ್ಲಿ ಕಾರು ಅಡ್ಡಗಟ್ಟಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಎನ್ಆರ್ ಪುರ ತಾಲೂಕಿನ ಸೌತಿಕೆರೆ ಗ್ರಾಮದ ಬಳಿ ಈ ಘಟನೆ ನಡೆದಿದೆ.
ಇದನ್ನೂ ಓದಿ: 50 ವಯಸ್ಸಿನ ವ್ಯಕ್ತಿ ಜೊತೆ ಕಾಲೇಜು ವಿದ್ಯಾರ್ಥಿನಿ ನಾಪತ್ತೆ ಕೇಸ್.. ಇಬ್ಬರ ಮೃತದೇಹಗಳು ಪತ್ತೆ
ಎನ್.ಆರ್ ಪುರ ಪಟ್ಟಣದ ಮೆಕ್ಯಾನಿಕ್ ಸೈಯದ್ ಸಲ್ಮಾನ್ (22), ಮೊಹಮ್ಮದ್ ಸಾಧಿಕ್ (25) ಬಂಧಿತ ಯುವಕರು. ನಮ್ಮನ್ನು ನೋಡಿ ಜನರು ಹೆದರಬೇಕೆಂದು ಈ ಇಬ್ಬರು ಲಾಂಗ್ ಅನ್ನು ತೋರಿಸುತ್ತಿದ್ದರು. ಜನರಿಗೆ ಹೆದರಿಕೆ ಬರೋ ರೀತಿ ತಲ್ವಾರ್ ಹಿಡಿದು ಸುತ್ತಾಡುತ್ತಿದ್ದರು. ಎಲ್ಲಿಗಾದರು ಕಾರಿನಲ್ಲಿ ಹೋಗುವಾಗ ಲಾಂಗ್ಗಳ ಸಮೇತ ಹೋಗುತ್ತಿದ್ದರು.
ಇದನ್ನೂ ಓದಿ:ಗಿಲ್ಕ್ರಿಸ್ಟ್ರಂತೆ ಮೋಸ್ಟ್ ಡೇಂಜರಸ್ ಪಂತ್.. ರಿಷಬ್ ಡೈನಾಮಿಕ್ ಬ್ಯಾಟಿಂಗ್, ಕೀಪಿಂಗ್ ಹೇಗಿರುತ್ತೆ?
ಈ ಸಂಬಂಧ ಸಾರ್ವಜನಿಕರ ಮಾಹಿತಿ ಮೇರೆಗೆ ಎನ್.ಆರ್ ಪುರ ಠಾಣೆಯ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು. ಕಾರಿನಲ್ಲಿ ಲಾಂಗ್ಗಳನ್ನ ಇಟ್ಟುಕೊಂಡು ಓಡಾಟ ನಡೆಸುವಾಗ ಪೊಲೀಸರು ಸಿನಿಮೀಯ ರೀತಿ ಕಾರನ್ನು ಅಡ್ಡ ಗಟ್ಟಿದ್ದಾರೆ. ಬಳಿಕ ಇಬ್ಬರನ್ನು ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ