UAE ಅಲ್ಲಿ ಶಾಶ್ವತವಾಗಿ ನೆಲೆಸಬೇಕಾ..? ಗೋಲ್ಡನ್​ ವೀಸಾ ಪಡೆಯಲು ಈಗ ಸುವರ್ಣ ಅವಕಾಶ..!

author-image
Bheemappa
Updated On
UAE ಅಲ್ಲಿ ಶಾಶ್ವತವಾಗಿ ನೆಲೆಸಬೇಕಾ..? ಗೋಲ್ಡನ್​ ವೀಸಾ ಪಡೆಯಲು ಈಗ ಸುವರ್ಣ ಅವಕಾಶ..!
Advertisment
  • ಕಡಿಮೆ ವೆಚ್ಚದಲ್ಲೇ ಯುಎಇನಲ್ಲಿ ಜೀವನ ಪೂರ್ತಿ ಇರಬಹುದು
  • ಯಾವ ಯಾವ ದೇಶಗಳಿಗೆ ಈ ಗೋಲ್ಡನ್​ ವೀಸಾ ನೀಡಲಾಗಿದೆ?
  • ಮೂರು ತಿಂಗಳಲ್ಲಿ ಕೇವಲ ಎಷ್ಟು ಸಾವಿರ ಜನರಿಗೆ ಇದು ಸಿಗುತ್ತೆ?

ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಹೊಸ ನಾಮನಿರ್ದೇಶನ ಆಧಾರಿತ ಗೋಲ್ಡನ್ ವೀಸಾ ಪರಿಚಯಿಸಿದೆ. ಇದು ಭಾರತೀಯರಿಗೆ ಯುಎಇ ದೇಶದಲ್ಲಿ ಜೀವನ ಪೂರ್ತಿ ವಾಸಿಸುವ ಹಕ್ಕು ಅನ್ನು ನೀಡುತ್ತದೆ. ಸಂಪ್ರದಾಯಿಕ ಮಾರ್ಗದ ಮೂಲಕ ಗೋಲ್ಡನ್ ವೀಸಾ ಪಡೆಯಬೇಕಾದರೇ, ಯುಎಇನಲ್ಲಿ ಆಸ್ತಿಗಳ ಮೇಲೆ 4.66 ಕೋಟಿ ರೂಪಾಯಿ ಹಣವನ್ನ ಹೂಡಿಕೆ ಮಾಡಬೇಕಾಗಿತ್ತು. ಇಲ್ಲವೇ ದೊಡ್ಡ ಪ್ರಮಾಣದಲ್ಲಿ ಬ್ಯುಸಿನೆಸ್ ಅನ್ನು ಯುಎಇನಲ್ಲಿ ನಡೆಸಬೇಕಾಗಿತ್ತು. ಆದರೇ ಈ ಹೊಸ ಸ್ಕೀಮ್ ನಡಿ ಕಡಿಮೆ ವೆಚ್ಚದಲ್ಲಿ ಯುಎಇ ದೇಶದ ಗೋಲ್ಡನ್ ವೀಸಾ ಸಿಗಲಿದೆ.

publive-image

ಹೊಸ ಸ್ಕೀಮ್ ನಡಿ ಗೋಲ್ಡನ್ ವೀಸಾ ಪಡೆಯಲು ಕನಿಷ್ಠ 23 ಲಕ್ಷ ರೂಪಾಯಿ ಇದ್ದರೇ ಸಾಕು. ಇದರಿಂದಾಗಿ ಕಡಿಮೆ ವೆಚ್ಚದಲ್ಲಿ ಯುಎಇ ದೇಶದ ಗೋಲ್ಡನ್ ವೀಸಾ ಪಡೆದು ಯುಎಇಗೆ ಹೋಗಿ ಅಲ್ಲೇ ಸೆಟಲ್ ಆಗಬಹುದು. ಭಾರತದಲ್ಲಿ ಶ್ರೀಮಂತರು, ಮಧ್ಯಮ ಮೇಲ್ವರ್ಗದ ಜನರಲ್ಲಿ ವಿದೇಶಗಳ ಆಕರ್ಷಣೆ ಹೆಚ್ಚಾಗುತ್ತಿದೆ. ಭಾರತದಲ್ಲಿ ಸರಿಯಾದ ಮೂಲಸೌಕರ್ಯಗಳಿಲ್ಲ. ವೈದ್ಯಕೀಯ, ಶಿಕ್ಷಣ ಸೌಲಭ್ಯಗಳಿಲ್ಲ. ಹೀಗಾಗಿ ವಿದೇಶಗಳಿಗೆ ಹೋಗಿ ಸೆಟ್ಲ್ ಆಗಬೇಕೆಂದು ಅನೇಕರು ಕನಸು ಕಾಣುತ್ತಿದ್ದಾರೆ. ಅಂಥವರಿಗಾಗಿ ಯುಎಇ ಗೋಲ್ಡನ್ ವೀಸಾ ಸ್ಕೀಮ್ ಜಾರಿಗೆ ತಂದಿದೆ.

ಯುಎಇ ಎಲ್ಲ ಭಾರತೀಯರಿಗೂ ಈ ವೀಸಾವನ್ನು ನೀಡುತ್ತಿಲ್ಲ. ಬದಲಾಗಿ ಶಿಕ್ಷಕರು, ಇಂಜಿನಿಯರ್​ಗಳು, ಎಐ ಎಕ್ಸ್​ಪರ್ಟ್​ಗಳು, ತಂತ್ರಜ್ಞರು, ವೈದ್ಯರು, ಆಳವಾದ ಕಂಪ್ಯೂಟರ್​ ಜ್ಞಾನ ಹೊಂದಿರುವವರು, ಕೌಶಲ್ಯಯುತವಾದ ವ್ಯಕ್ತಿಗಳು ಹಾಗೂ ಉದ್ಯಮದಲ್ಲಿ ಹೆಚ್ಚು ಸಾಧನೆ ಮಾಡಿದವರಿಗೆ ಈ ವೀಸಾ ನೀಡಲಾಗುತ್ತಿದೆ. ಏಕೆಂದರೆ ಯುಎಇನಲ್ಲಿ ಇಂಜಿನಿಯರ್​ಗಳಂತ ಹುದ್ದೆಗಳ ನಿರ್ವಹಿಸುವವರ ಸಂಖ್ಯೆ ಕಡಿಮೆ ಇದೆ. ಹೀಗಾಗಿ ಅವರ ದೇಶದ ಅಭಿವೃದ್ಧಿಯೂ ಒಂದು ಕಾರಣದಿಂದ ಈ ಗೋಲ್ಡನ್​ ವೀಸಾ ಭಾರತೀಯರಿಗೆ ನೀಡಲಾಗುತ್ತಿದೆ.

ಶಾಶ್ವತವಾಗಿ ನೆಲೆಸುವವರಿಗೆ ಹೆಚ್ಚಿನ ಸಹಾಯ

ಭಾರತ ಮತ್ತು ಬಾಂಗ್ಲಾದೇಶಿಯರಿಗೆ ಪೈಲಟ್ ಯೋಜನೆಯಾಗಿ ಈ ಗೋಲ್ಡನ್ ವೀಸಾ ಸ್ಕೀಮ್ ಅನ್ನು ಆರಂಭಿಸಲಾಗಿದೆ. ಸದ್ಯದಲ್ಲೇ ಈ ಪೈಲಟ್ ಯೋಜನೆಯು ಚೀನಾ ಮತ್ತು ಇತರ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ (ಸಿಇಪಿಎ) ದೇಶಗಳಿಗೆ ವಿಸ್ತರಿಸಲಾಗುತ್ತೆ. ಈ ವೀಸಾವನ್ನು ಆಯ್ಕೆ ಮಾಡಿಕೊಳ್ಳುವವರು ಯುಎಇಯಲ್ಲಿ ಯಾವುದೇ ವ್ಯವಹಾರ ಅಥವಾ ವೃತ್ತಿಪರ ಕೆಲಸವನ್ನು ಮಾಡಬಹುದು.

publive-image

1 ಕೋಟಿಗೂ ಹೆಚ್ಚು ಭಾರತೀಯರು ಈಗಾಗಲೇ ಯುಎಇಯನ್ನು ತಮ್ಮ ತವರು ಎಂದು ಕರೆದುಕೊಳ್ಳುತ್ತಿದ್ದು, ಬಲವಾದ ಸಂಬಂಧಗಳನ್ನು ಹೊಂದಿರುವುದರಿಂದ, ಗೋಲ್ಡನ್ ವೀಸಾ ಅರೇಬಿಯನ್ ರಾಷ್ಟ್ರದಲ್ಲಿ ಶಾಶ್ವತವಾಗಿ ನೆಲೆಸಲು ಬಯಸುವವರಿಗೆ ಹೆಚ್ಚಿನ ಸಹಾಯ ಮಾಡುತ್ತದೆ. ಈ ಪ್ರಕ್ರಿಯೆಯನ್ನು ನಡೆಸಲು ಸೂಚಿಸಿರುವ ರಾಯಾದ್ ಗ್ರೂಪ್‌ನ ರಾಯಾದ್ ಕಮಲ್ ಅಯೂಬ್, ಭಾರತೀಯರಿಗೆ ಇದು ಒಂದು ಸುವರ್ಣ ಅವಕಾಶ ಎಂದು ಬಣ್ಣಿಸಿದ್ದಾರೆ. ಆದರೇ, ಮುಂದಿನ ಮೂರು ತಿಂಗಳಲ್ಲಿ ಸುಮಾರು 5,000 ಭಾರತೀಯರು ಮಾತ್ರ ಈ ನಾಮನಿರ್ದೇಶನ ಆಧಾರಿತ ವೀಸಾಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತದೆ. ಭಾರತೀಯರು, ಬಾಂಗ್ಲಾದೇಶಿಗಳು ಮೊದಲ ಹಂತದಲ್ಲಿ ಅರ್ಜಿ ಸಲ್ಲಿಸಬಹುದು.

ಮೊದಲ ಹಂತದಲ್ಲಿ ಭಾರತ, ಬಾಂಗ್ಲಾ ಆಯ್ಕೆ

ಈ ವೀಸಾವನ್ನು ಪರೀಕ್ಷಿಸುವ ಮೊದಲ ಹಂತಕ್ಕೆ ಭಾರತ ಮತ್ತು ಬಾಂಗ್ಲಾದೇಶವನ್ನು ಆಯ್ಕೆ ಮಾಡಲಾಗಿದೆ. ಗೋಲ್ಡನ್ ವೀಸಾದ ಆರಂಭಿಕ ಅನುಷ್ಠಾನವನ್ನು ಪರೀಕ್ಷಿಸಲು ಸಲಹಾ ಸಂಸ್ಥೆಗಳಾದ ರಾಯಾದ್ ಗ್ರೂಪ್ ಮತ್ತು ವಿಎಫ್‌ಎಸ್ ಅನ್ನು ಆಯ್ಕೆ ಮಾಡಲಾಗಿದೆ. ನಂತರ ಈ ಸಂಸ್ಥೆಗಳು ಅರ್ಜಿಗಳನ್ನು ಯುಎಇ ಅಧಿಕಾರಿಗಳಿಗೆ ರವಾನಿಸುತ್ತವೆ. ಯುಎಇಗೆ ಭೇಟಿ ನೀಡದೇ, ಭಾರತೀಯರು ಗೋಲ್ಡನ್ ವೀಸಾದ ಅಪ್ರೂವಲ್ ಪಡೆಯಬಹುದು.

ಇದನ್ನೂ ಓದಿ:ವಿಮಾನದ ಇಂಜಿನ್​ಗೆ ಸಿಲುಕಿ ಜೀವ ಬಿಟ್ಟ ವ್ಯಕ್ತಿ.. ದೊಡ್ಡ ಪ್ರಮಾದದಿಂದ 154 ಪ್ರಯಾಣಿಕರು ಸೇಫ್​​!

publive-image

ಗೋಲ್ಡನ್ ವೀಸಾ ಪಡೆದವರು, ತಮ್ಮ ಕುಟುಂಬದ ಸದಸ್ಯರನ್ನು ದುಬೈಗೆ ಕರೆದೊಯ್ಯಬಹುದು. ಈ ಗೋಲ್ಡನ್ ವೀಸಾದಡಿಯಲ್ಲಿ ಮನೆ ಕೆಲಸದವರು, ಡ್ರೈವರ್​ಗಳನ್ನು ಕರೆದೊಯ್ಯಬಹುದು. ಇನ್ನೂ ಪ್ರಾಪರ್ಟಿ ಖರೀದಿಸಿ, ಗೋಲ್ಡನ್ ವೀಸಾ ಪಡೆದಿದ್ದರೇ, ಆಸ್ತಿ ಮಾರಾಟದಿಂದ ಅಥವಾ ಆಸ್ತಿ ಇಬ್ಬಾಗದಿಂದ ಗೋಲ್ಡನ್ ವೀಸಾ ಅಂತ್ಯವಾಗುತ್ತೆ. ನಾಮನಿರ್ದೇಶನ ಆಧಾರಿತ ವೀಸಾವು ಜೀವನ ಪೂರ್ತಿ ಇದ್ದೇ ಇರುತ್ತೆ. ಗೋಲ್ಡನ್ ವೀಸಾ ಜಾರಿಗೆ ಯುಎಇ, ಭಾರತವನ್ನೇ ಮೊದಲಿಗೆ ಆಯ್ಕೆ ಮಾಡಿಕೊಂಡಿರುವುದು ವಿಶೇಷ.

ವಿಶೇಷ ವರದಿ:ಚಂದ್ರಮೋಹನ್,ನ್ಯೂಸ್ ಫಸ್ಟ್ (ನ್ಯಾಷನಲ್​ ಬ್ಯೂರೋ)

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment