/newsfirstlive-kannada/media/post_attachments/wp-content/uploads/2025/01/JOBS_CBSCS.jpg)
ಕೃಷಿ ವಿಭಾಗದಲ್ಲಿ ನೀವು ಏನಾದರೂ ಎಂಎಸ್ಸಿ ಸ್ನಾತಕೋತ್ತರ ಪದವಿ ಪಡೆದಿದ್ದರೇ ಇಲ್ಲೊಂದು ಉದ್ಯೋಗಾವಕಾಶ ಇದೆ. ಧಾರವಾಡ ಕೃಷಿ ವಿಶ್ವವಿದ್ಯಾಲಯವು ಒಂದು ಹುದ್ದೆಯನ್ನು ಆಹ್ವಾನ ಮಾಡಿದೆ. ಆಸಕ್ತ, ಅರ್ಹ ಅಭ್ಯರ್ಥಿಗಳು ಈ ಕೆಲಸಕ್ಕೆ ಪ್ರಯತ್ನಿಸಬಹುದು. ಈ ಕೆಲಸಕ್ಕೆ ಯಾವುದೇ ಟೆಸ್ಟ್, ಪರೀಕ್ಷೆಗಳು ಇರುವುದಿಲ್ಲ. ನೇರ ಸಂದರ್ಶನ ಮಾಡುವ ಮೂಲಕ ಅಭ್ಯರ್ಥಿಯ ಆಯ್ಕೆ ನಡೆಯಲಿದೆ.
ಧಾರವಾಡ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ನೇಮಕಾತಿ ಪ್ರಾಧಿಕಾರವು ಸೀನಿಯರ್ ರಿಸರ್ಚ್ ಫೆಲೋ ಹುದ್ದೆಯನ್ನು ಭರ್ತಿ ಮಾಡುತ್ತಿದೆ. ಫೆಬ್ರುವರಿ 24 ರಂದು ಧಾರವಾಡದಲ್ಲಿ ನೇರ ಸಂದರ್ಶನ ನಡೆಯಲಿದೆ. ಈ ಸಂದರ್ಶನದಲ್ಲಿ ಆಯ್ಕೆ ಆದ ಅಭ್ಯರ್ತಿಯನ್ನು ಉದ್ಯೋಗಕ್ಕೆ ನೇಮಕ ಮಾಡಿಕೊಂಡು ಪ್ರತಿ ತಿಂಗಳು 35,000 ಸಂಬಳ ನೀಡಲಾಗುತ್ತದೆ.
ಸಂದರ್ಶನ ನಡೆಯುವ ದಿನಾಂಕ- 24 ಫೆಬ್ರುವರಿ 2025, ಬೆಳಗ್ಗೆ 10-00 ಗಂಟೆ
ಇದನ್ನೂ ಓದಿ:ಕರ್ನಾಟಕದ ಅಂಚೆ ಕಚೇರಿಗಳಲ್ಲಿನ 1,135 ಹುದ್ದೆಗಳಿಗೆ ಅರ್ಜಿ ಆಹ್ವಾನ.. SSLC ಪಾಸ್ ಆಗಿದ್ರೆ ಸಾಕು
ಸಂದರ್ಶನ್ ನಡೆಯುವ ವಿಳಾಸ
ಆಫೀಸ್ ಆಫ್ ಅಸೋಸಿಯೇಟ್,
ಡೈರೆಕ್ಟರ್ ಆಫ್ ರಿಸರ್ಚ್ (ಹೆಚ್‌ಕ್ಯೂ),
ಕೃಷ್ಣನಗರ, ಧಾರವಾಡ- 580005
ಸಂದರ್ಶನದಲ್ಲಿ ಈ ದಾಖಲೆಗಳನ್ನ ಹಾಜರುಪಡಿಸಬೇಕು
- ರೆಸ್ಯೂಮ್
- 10ನೇ ತರಗತಿ ಮಾರ್ಕ್ಸ್ ಕಾರ್ಡ್
- ಆಧಾರ್ ಕಾರ್ಡ್
- ಎಂಎಸ್ಸಿ ಸ್ನಾತಕೋತ್ತರ ಪದವಿಯ ದಾಖಲೆಗಳು
- ಕೆಲಸದ ಅನುನಭದ ದಾಖಲೆ
- ಇತರೆ ದಾಖಲೆಗಳಿಗಾಗಿ ವಿವಿಯ ವೆಬ್ಸೈಟ್ಗೆ ಭೇಟಿ ನೀಡಿ
ಈ ಹುದ್ದೆಗೆ ಆಯ್ಕೆ ಆದ ಅಭ್ಯರ್ಥಿಯನ್ನು ಪರ್ಮನೆಂಟ್ ಉದ್ಯೋಗ ಎಂದು ಪರಿಗಣಿಸಲು ಆಗಲ್ಲ. ಇದರ ಆಧಾರದ ಮೇಲೆ ವಿವಿಯಲ್ಲಿ ಖಾಯಂ ಉದ್ಯೋಗಕ್ಕೆ ಅವಕಾಶ ಇರುವುದಿಲ್ಲ. ಇದಕ್ಕಾಗಿ ಅಭ್ಯರ್ಥಿಯು ಮುಚ್ಚಳಿಕೆ ಪತ್ರ ಬರೆದುಕೊಡಬೇಕಾಗುತ್ತದೆ. ಇತರೆ ಮಾಹಿತಿಗಳಿಗಾಗಿ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್ uasd.edu ಭೇಟಿ ನೀಡಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ