newsfirstkannada.com

ಪಾನಿಪುರಿ, ಎಗ್ ಬುರ್ಜಿ ತಿಂದ 20 ಹಾಸ್ಟೆಲ್‌ ವಿದ್ಯಾರ್ಥಿನಿಯರು ಅಸ್ವಸ್ಥ; ಆಸ್ಪತ್ರೆಗೆ ದಾಖಲು

Share :

Published June 6, 2024 at 4:07pm

    ವಸತಿ ನಿಲಯದಲ್ಲಿ ವಾಸವಾಗಿದ್ದ ಪಿಜಿ ಮತ್ತು ಪಿ.ಎಚ್.ಡಿ ವಿದ್ಯಾರ್ಥಿನಿಯರು

    ಪಾನಿಪುರಿ, ಎಗ್​ ಬುರ್ಜಿ ತಿಂದು ವಾಂತಿಯಿಂದ ಬಳಲುತ್ತಿದ್ದ ವಿದ್ಯಾರ್ಥಿನಿಯರು

    ಕೃಷಿ ವಿವಿ ವೈದ್ಯರು ಮತ್ತು ಹಿರಿಯ ಅಧಿಕಾರಿಗಳು ದೌಡಾಯಿಸಿ ಸ್ಥಳ ಪರಿಶೀಲನೆ

ರಾಯಚೂರು: ಪಾನಿಪುರಿ ಎಂದರೆ ಯಾರಿಗೇ ತಾನೇ ಇಷ್ಟ ಇಲ್ಲ ಹೇಳಿ. ಹೆಣ್ಣು ಮಕ್ಕಳಿಗಂತೂ ಪಾನಿಪುರಿ ಎಂದರೆ ಪಂಚಪ್ರಾಣ. ಹೀಗೆ ಪಾನಿಪುರಿ ಹಾಗೂ ಎಗ್ ಬುರ್ಜಿ ಸೇವಿಸಿದ 20 ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿರೋ ಘಟನೆ ರಾಯಚೂರು ಕೃಷಿ ವಿವಿಯ ಉದಯ ವಸತಿ ನಿಲಯದಲ್ಲಿ ನಡೆದಿದೆ.

ಇದನ್ನೂ ಓದಿ: ಮುಳುಗುತ್ತಿದ್ದ ಹಡಗಿಗೆ ಸಾರಥಿ ಆದ್ಮೇಲೆ ಹಣೆಬರಹ ಚೇಂಜ್​.. ಕನ್ನಡಿಗ​ ಖರ್ಗೆ ಕಾಂಗ್ರೆಸ್​​ಗೆ ಬಲ ತುಂಬಿದ್ದೇಗೆ?

ಹೌದು, 20ಕ್ಕೂ ಹೆಚ್ಚು ವಿದ್ಯಾರ್ಥಿನಿಯರ ಪೈಕಿ ಇಬ್ಬರು ವಾಂತಿಯಿಂದ ‌ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಸ್ವಸ್ಥಗೊಂಡಿರೋ ಪಿಜಿ ಮತ್ತು ಪಿ.ಎಚ್.ಡಿ ವಿದ್ಯಾರ್ಥಿನಿಯರು ಉದಯ ವಸತಿ ನಿಲಯದಲ್ಲಿ ವಾಸವಾಗಿದ್ದರು. ಆದರೆ ಹೀಗೆ ಪಾನಿಪುರಿ ಹಾಗೂ ಎಗ್ ಬುರ್ಜಿ ಸೇವಿಸಿ ಆಸ್ಪತ್ರೆ ಸೇರಿದ್ದಾರೆ.

ಇದನ್ನೂ ಓದಿ: ಫ್ಯಾನ್ಸ್​ಗೆ ಗುಡ್​ನ್ಯೂಸ್​​; ಸ್ಟಾರ್​ ನಟನ ಜತೆ ಸ್ಕ್ರೀನ್ ಶೇರ್ ಮಾಡ್ತಾರಾ ನಟಿ ಮೇಘಾ ಶೆಟ್ಟಿ

ಈ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಕೃಷಿ ವಿವಿ ವೈದ್ಯರು ಮತ್ತು ಅಧಿಕಾರಿಗಳು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ವೈದ್ಯರು 95 ವಿದ್ಯಾರ್ಥಿನಿಯರ ಆರೋಗ್ಯ ತಪಾಸಣೆ ಮಾಡಿದ್ದಾರೆ. ಸದ್ಯ ವೈದ್ಯರು ಮಾಹಿತಿ ಪ್ರಕಾರ, ಎಲ್ಲಾ ವಿದ್ಯಾರ್ಥಿನಿಯರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆಯಂತೆ. ವಿದ್ಯಾರ್ಥಿನಿಯರು ಎಗ್ ಬುರ್ಜಿ ಸೇವನೆಯಿಂದ ಹೊಟ್ಟೆ ನೋವು ಬಂದಿತ್ತು. ಈಗ ನಮ್ಮ ವೈದ್ಯರ ತಂಡ ವಿದ್ಯಾರ್ಥಿನಿಯ ಆರೋಗ್ಯ ತಪಾಸಣೆ ಮಾಡಿದೆ. ಎಲ್ಲಾ ವಿದ್ಯಾರ್ಥಿನಿಯರು ಆರೋಗ್ಯವಾಗಿದ್ದಾರೆ ಅಂತ ರಾಯಚೂರು ಕೃಷಿ ವಿವಿ ಕುಲಪತಿ ಡಾ.ಎಂ ಹನುಮಂತಪ್ಪ ಸ್ಪಷ್ಟನೆ ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪಾನಿಪುರಿ, ಎಗ್ ಬುರ್ಜಿ ತಿಂದ 20 ಹಾಸ್ಟೆಲ್‌ ವಿದ್ಯಾರ್ಥಿನಿಯರು ಅಸ್ವಸ್ಥ; ಆಸ್ಪತ್ರೆಗೆ ದಾಖಲು

https://newsfirstlive.com/wp-content/uploads/2024/03/pani-puri-2.jpg

Load More