newsfirstkannada.com

ಉಡುಪಿ: ಕಾರು ಮಾರಾಟ ವಿಚಾರವಾಗಿ ಗಲಾಟೆ.. ನಡು ರಸ್ತೆಯಲ್ಲಿ ತಲವಾರು ಹಿಡಿದುಕೊಂಡು ದಾಳಿ, ಓರ್ವ ಗಂಭೀರ

Share :

Published May 25, 2024 at 9:41am

Update May 25, 2024 at 3:04pm

  ಕಾರು ಮಾರಾಟ ವಿಚಾರವಾಗಿ ಎರಡು ತಂಡಗಳ ನಡುವೆ ಮಾರಾಮಾರಿ

  ತಲವಾರು ಹಿಡಿದುಕೊಂಡು ನಡು ರಸ್ತೆಯಲ್ಲಿ ಹೊಡೆದಾಟ

  ಅಡ್ಡಾದಿಡ್ಡಿ ಕಾರು ಚಲಾಯಿಸಿ ಡಿಕ್ಕಿ ಹೊಡೆದುಕೊಂಡು ಬಡಿದಾಟ

ಉಡುಪಿ: ಕಾರು ಮಾರಾಟ ವಿಚಾರವಾಗಿ ಎರಡು ತಂಡಗಳ ತಲವಾರು ಹಿಡಿದುಕೊಂಡು ಹೊಡೆದಾಡಿಕೊಂಡ ಘಟನೆ ನಗರದ ಕುಂಜಿಬೆಟ್ಟು ರಸ್ತೆಯಲ್ಲಿ ನಡೆದಿದೆ. ಈ ಭಯಾನಕ ಗ್ಯಾಂಗ್ ವಾರ್ ವಿಡಿಯೋ ಮೊಬೈಲ್​ನಲ್ಲಿ ಸೆರೆಯಾಗಿದ್ದು ಸದ್ಯ ವೈರಲ್ ಆಗಿದೆ.

ತಲವಾರು ಹಿಡಿದುಕೊಂಡು ದಾಳಿ

ಮೇ 18ರಂದು ರಾತ್ರಿ ನಡೆದ ಹೊಡೆದಾಟದ ದೃಶ್ಯ ಇದಾಗಿದೆ. ಕಾಪು ತಾಲೂಕಿನ ಎರಡು ತಂಡಗಳು ತಲವಾರು ಹಿಡಿದುಕೊಂಡು ನಡು ರಸ್ತೆಯಲ್ಲಿ ಹೊಡೆದಾಡಿದ್ದಾರೆ.

ಪುಡಿರೌಡಿಗಳನ್ನ ಹೆಡೆಮುರಿ ಕಟ್ಟಿದ ಪೊಲೀಸರು

ಮೊದಲಿಗೆ ಅಡ್ಡಾದಿಡ್ಡಿ ಕಾರು ಚಲಾಯಿಸಿ ಡಿಕ್ಕಿ ಹೊಡೆದು ಬಡಿದಾಡಿಕೊಂಡಿದ್ದಾರೆ. ಸದ್ಯ ಈ ಪ್ರಕರಣ ಸಂಬಂಧ ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಎರಡು ತಂಡಗಳ ಪುಡಿರೌಡಿಗಳನ್ನ ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ನ್ಯಾಯಾಂಗ ಬಂಧನ

ಘಟನೆ ಸಂಬಂಧ ಪೊಲೀಸರು ಎಂಟು ಮಂದಿ ಪುಡಿರೌಡಿಗಳನ್ನ ಬಂಧಿಸಿದ್ದಾರೆ. ನ್ಯಾಯಾಲಯವು ಜೂನ್ 1ರವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

ಇದನ್ನೂ ಓದಿ: Rain Alert: ಇಂದು ಈ ಭಾಗಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ.. ಯೆಲ್ಲೋ ಅಲರ್ಟ್ ಘೋಷಣೆ

ಓರ್ವ ಗಂಭೀರ

ಕಾರು ಮಾರಾಟ ವಿಚಾರದಲ್ಲಿ ಎರಡು ತಂಡಗಳು ಹೊಡೆದಾಡಿಕೊಂಡಿದ್ದಾರೆ. ಗರುಡ ಗ್ಯಾಂಗ್ ಎಂಬ ಹೆಸರಿಟ್ಟುಕೊಂಡಿದ್ದ ಯುವಕರ ತಂಡದಲ್ಲಿ ಶುರುವಾದ ಭಿನ್ನಮತದಿಂದ ಹೊಡೆದಾಡಿಕೊಂಡಿದ್ದಾರೆ. ಇನ್ನು ಈ ದಾಳಿಯಲ್ಲಿ ಓರ್ವನಿಗೆ ಗಂಭೀರ ಗಾಯವಾಗಿದೆ. ಪೊಲೀಸರು ಈಗಾಗಲೇ ಚಿಕಿತ್ಸೆ ಕೊಟ್ಟು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಉಡುಪಿ: ಕಾರು ಮಾರಾಟ ವಿಚಾರವಾಗಿ ಗಲಾಟೆ.. ನಡು ರಸ್ತೆಯಲ್ಲಿ ತಲವಾರು ಹಿಡಿದುಕೊಂಡು ದಾಳಿ, ಓರ್ವ ಗಂಭೀರ

https://newsfirstlive.com/wp-content/uploads/2024/05/Udupi-case.jpg

Load More