/newsfirstlive-kannada/media/post_attachments/wp-content/uploads/2024/07/Udupi-2.jpg)
ಉಡುಪಿ: ಬಬ್ಬು ಸ್ವಾಮಿ ದೈವದ ಕಾರ್ಣಿಕ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಕಾಣಿಕೆ ಡಬ್ಬಿ ಕದ್ದ ಕಳ್ಳನನ್ನು ದೈವ 24 ಗಂಟೆಯೊಳಗೆ ಹುಡುಕಿಕೊಟ್ಟ ಅಚ್ಚರಿಯ ಘಟನೆ ಉಡುಪಿಯಲ್ಲಿ ನಡೆದಿದೆ.
ಚಿಟ್ಪಾಡಿ ಕಸ್ತೂರ್ಬಾ ನಗರದ ಬಬ್ಬು ಸ್ವಾಮಿ ಸನ್ನಿಧಾನದಲ್ಲಿ ಕಳ್ಳತನ ನಡೆದಿತ್ತು. ಕಳ್ಳನೊಬ್ಬ ಜು.4 ರ ನಡುರಾತ್ರಿ ದೈವಸ್ಥಾನದ ಕಾಣಿಕೆ ಡಬ್ಬಿ ಒಡೆದು ಕಳ್ಳತನ ಮಾಡಿದ್ದನು. ಜು.5 ರಂದು ಕಳ್ಳತನ ಪ್ರಕರಣ ಬೆಳಕಿಗೆ ಬಂದಿತ್ತು.
ಸಾಮೂಹಿಕ ಪ್ರಾರ್ಥನೆ
ಕಳ್ಳತನ ಬೆಳಕಿಗೆ ಬರುತ್ತಿದ್ದಂತೆ ಭಕ್ತರು ಸಾಮೂಹಿಕ ಪ್ರಾರ್ಥನೆ ಮಾಡಿದ್ದರು. ಸನ್ನಿಧಾನದಲ್ಲಿ ಕಳ್ಳತನ ಮಾಡಿದರೆ ಅಪಚಾರವಾಗುವುದಿಲ್ಲವೇ ಎಂದು ದೈವಕ್ಕೆ ಪ್ರಶ್ನಿಸಿದ್ದರು. ಮಾತ್ರವಲ್ಲದೆ, ಊರಿನ ಸಂಕಷ್ಟ ಬಗೆಹರಿಸುವ ದೈವದ ಸನ್ನಿಧಾನದಲ್ಲಿ ಕಳ್ಳತನವಾಗಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದರು.
/newsfirstlive-kannada/media/post_attachments/wp-content/uploads/2024/07/Udupi-3.jpg)
ಭಕ್ತರ ಪ್ರಾರ್ಥನೆಯಿಂದ ಕಳ್ಳನನ್ನು 24 ಗಂಟೆಯೊಳಗೆ ಹುಡುಕಿ ಕೊಡುವುದಾಗಿ ದೈವ ಅಭಯ ನೀಡಿತ್ತು. ಅಚ್ಚರಿ ಎಂಬಂತೆ ಜು. 6ರಂದು ಬೆಳಗ್ಗೆ ಕಳ್ಳನನ್ನು ಸಿಕ್ಕಿದ್ದಾನೆ.
ಎಲ್ಲಿದ್ದ ಗೊತ್ತಾ ಕಳ್ಳ?
ನಗರದ ಕೆಎಸ್ಆರ್​​ಟಿಸಿ ಬಸ್ ನಿಲ್ದಾಣದಲ್ಲಿ ಕಳ್ಳ ಮಲಗಿರೋದು ಗೊತ್ತಾಗಿದೆ. ಬಸ್ ನಿಲ್ದಾಣ ಪರಿಸರದಲ್ಲಿ ಆಟೋ ಚಾಲಕರು ಕಳ್ಳನ ಗುರುತು ಪತ್ತೆ ಹಚ್ಚಿದ್ದಾರೆ. ಸಿಸಿಟಿವಿಯಲ್ಲಿ ಕಳ್ಳನ ವಿಡಿಯೋ ನೋಡಿದ್ದ ಆಟೋ ಚಾಲಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
/newsfirstlive-kannada/media/post_attachments/wp-content/uploads/2024/07/babbu-sawamy.jpg)
ಇದನ್ನೂ ಓದಿ: ಬೆಳಗಿನ ಜಾವ ನಡೆಯಿತು ದುರಂತ.. ಹಾಸಿಗೆಯಿಂದ ಎದ್ದೇಳ್ತಿದ್ದಂತೆ ಯುವಕ ದಾರುಣ ಸಾವು.. ಆಗಿದ್ದೇನು
ಬಾಗಲಕೋಟೆ ಮೂಲದ ಮುದುಕಪ್ಪ ಕಾಣೆಕೆ ಡಬ್ಬಿ ಕದ್ದು ಸಿಕ್ಕಿಬಿದ್ದ ಕಳ್ಳ. ಈತ ಬಾಗಲಕೋಟೆಗೆ ಹೋಗಬೇಕಾದವನು ಬಸ್​ ನಿಲ್ದಾಣದಲ್ಲಿಯೇ ನಿದ್ದೆ ಮಾಡಿ ಬಾಕಿಯಾಗಿದ್ದನು. ಬೆಳಿಗ್ಗೆ ಎಂಟು ಗಂಟೆಯಾದರೂ ನಿದ್ದೆ ಮಂಪರಿನಲ್ಲಿ ಮಲಗಿದ್ದನು.
ಕಳ್ಳತನವೇ ಈತನ ಚಾಳಿ
ಮುದುಕಪ್ಪ ದೈವಸ್ಥಾನಗಳಲ್ಲಿ ಕಳ್ಳತನ ಮಾಡುವ ಚಾಳಿಯನು ಹೊಂದಿದ್ದನು. ಚಿಟ್ಪಾಡಿಯ ನಂತರ ಉದ್ಯಾವರ ಪರಿಸರದಲ್ಲೂ ಕಳ್ಳತನ ಮಾಡಿದ್ದನು. ದೋಚಿದ ಹಣದೊಂದಿಗೆ ಬಾಗಲಕೋಟೆಗೆ ಹೋಗಲು ತಯಾರಿ ನಡೆಸಿದ್ದನು. ಬಸ್ ಸಿಗದ ಕಾರಣ ಮಲಗಿದ್ದಲ್ಲೇ ಬಾಕಿಯಾಗಿದ್ದನು. ಆದರೀಗ ಕಳ್ಳ ಸಿಕ್ಕಿಬಿದ್ದಿದ್ದಾನೆ. ಇತ್ತ ಭಕ್ತರು ಬಬ್ಬು ಸ್ವಾಮಿ ದೈವದ ಕಾರ್ಣಿಕಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.
/newsfirstlive-kannada/media/post_attachments/wp-content/uploads/2024/07/Udupi-4.jpg)
ಇದನ್ನೂ ಓದಿ: ಬಂದಿತ್ತೊಂದು ಕರೆ, ಬದಲಾಯ್ತು ದಿಕ್ಕು.. ಇದು ಸಿನಿಮಾ ಪತ್ರಕರ್ತನ ಮಗಳು ‘ಅಪರ್ಣಾ’ಳ ಜೀವನಗಾಥೆ
ಮತ್ತೊಂದು ಪವಾಡ
ಇನ್ನು ವರ್ಷದ ಹಿಂದೆ ಸನ್ನಿಧಾನದಲ್ಲಿ ಇದೇ ರೀತಿಯ ಪವಾಡ ನಡೆದಿತ್ತು. ಸನ್ನಿಧಾನದ ಬೋರ್​ವೆಲ್ ನಲ್ಲಿ ನೀರು ಸಿಗದೇ ಹೋದಾಗ ಸಾಮೂಹಿಕ ಪ್ರಾರ್ಥನೆ ನಡೆದಿತ್ತು. ಪ್ರಾರ್ಥನೆ ನಡೆದ ಬೆನ್ನಲ್ಲೇ ನೀರು ಆಕಾಶದೆತ್ತರಕ್ಕೆ ಚಿಮ್ಮಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us