newsfirstkannada.com

×

ಉಡುಪಿಯಲ್ಲಿ ಪತಿಗೆ ಪಾಯ್ಸನ್​ ಇಟ್ಟ ಪತ್ನಿ ಕೇಸ್‌ಗೆ ಹೊಸ ಟ್ವಿಸ್ಟ್‌.. ಪೊಲೀಸರು ಆ ಒಂದು ‘ವಿಷ‘ಯದ ಹಿಂದೆ ಬಿದ್ದಿದ್ದು ಏಕೆ?

Share :

Published October 28, 2024 at 8:48pm

    ಉಡುಪಿಯಲ್ಲಿ ಪ್ರಿಯಕರನಿಗಾಗಿ ಪತಿಗೆ ವಿಷವಿಟ್ಟಿದ್ದ ಪಾತಕಿ ಪತ್ನಿ

    ಪೊಲೀಸರ ಆ ಒಂದು ವಸ್ತುವನ್ನು ಹುಡುಕುತ್ತಿರುವುದಾದರೂ ಏಕೆ?

    ಬಾಲಕೃಷ್ಣ ಪೂಜಾರಿಯ ಮೂಳೆ ಸಂಗ್ರಹಿಸಿದ್ದು ಏಕೆ ಉಡುಪಿ ಪೊಲೀಸ್?

ಮಳ್ಳಿ ಮಳ್ಳಿ ಮಂಚಕ್ಕೆ ಕಾಲೆಷ್ಟು ಅಂದ್ರೆ ಮೂರು ಮತ್ತೊಂದು ಅಂತ ನೈಸಾಗಿ ಉತ್ತರ ಹೇಳಿದ್ದ ಐನಾತಿ ಪ್ರತೀಮಾ ಲಾಕ್ ಆಗಿದ್ದಾಳೆ. ಆದ್ರೀಗ ಪೊಲೀಸರು ಪಾಯ್ಸನ್‌ ಪತ್ನಿಯ ‘ವಿಷ’ ಮೂಲದ ಹಿಂದೆ ಬಿದ್ದಿದ್ದಾರೆ. ಪತ್ನಿಗೆ ಕುಡಿಸಿ ವಿಷದ ಬಾಟಲಿಯಿಂದ ಹಿಡಿದು ಆತನ ಮೂಳೆ ತನ ಎಲ್ಲವನ್ನೂ ತಲಾಶ್ ಮಾಡ್ತಿದ್ದಾರೆ. ಪಾಯ್ಸ್ ಪ್ರತೀಮಾಳ ಕೇಸ್​ನ ಅಪ್​ಡೇಟ್ ಈ ಲೇಖನದಲ್ಲಿದೆ.

ಹೆಂಡತಿಯೊಬ್ಬಳು ಮನೆಯೊಳಗಿದ್ದರೇ ನನಗದು ಕೋಟಿ ರೂಪಾಯಿ ಅನ್ನೋ ಶ್ರೀರಾಮಚಂದ್ರ. ಗಂಡ ಹೆಂಡ್ತಿಗೆ ಇಬ್ಬರು ಮುದ್ದಾದ ಮಕ್ಕಳು ಸ್ವರ್ಗಕ್ಕೇ ಕಿಚ್ಚು ಹಚ್ಚುವಂತಿದ್ರು. ಬಟ್, ಅದೇ ರೀಲ್ಸ್​ ಇವರ ಬದುಕನ್ನೇ ಬಲಿ ಪಡೆದು ಬಿಟ್ಟಿತ್ತು. ಜಸ್ಟ್ ಜ್ವರ ಅಂತ ಆಸ್ಪತ್ರೆ ಸೇರಿದ್ದ ಬಾಲಕೃಷ್ಣ ಪೂಜಾರಿ ಕಳೆದ ಅಕ್ಟೋಬರ್ 20ನೇ ತಾರೀಖು ಚಿಕಿತ್ಸೆ ಫಲಕಾರಿಯಾಗದೇ ಬಾಲಕೃಷ್ಣ ಸಾವನ್ನಪ್ಪಿದ್ರು.. ಆದ್ರೆ ಪತ್ನಿಯೇ ಮಸಲತ್ತಿನಿಂದಲೇ ತಾನು ಸತ್ತಿದ್ದು ಅಂತ ಬಾಲಕೃಷ್ಣನ ಆತ್ಮಕ್ಕೆ ಗೊತ್ತಾಗುವಂತಿದ್ರೆ ನಿಜಕ್ಕೂ ಆ ಆತ್ಮ ಅದೆಷ್ಟು ಸಂಕಟ ಪಡ್ತಿತ್ತೋ ಏನೋ.. ಭಾವನ ಅನ್ಯಾಯದ ಸಾವು ಕಂಡ ಪ್ರತೀಮಾ ಸಹೋದರ ಅಕ್ಕನನ್ನ ಹಿಡಿದು ಕೊಡುವಲ್ಲಿ ಸಹಾಯ ಮಾಡಿದ್ದ ಪ್ರತೀಮಾಳ ಕರಾಳ ಮುಖ ಬಿಚ್ಚಿಟ್ಟು ಅಂದರ್ ಮಾಡಿಸಿದ್ದ. ಈಗ ಪೊಲೀಸರು ಈ ಪ್ರತೀಮಾ ಗಂಡನಿಗೆ ಉಣಿಸಿದ ವಿಷದ ಮೂಲದ ಹಿಂದೆ ಬಿದ್ದಿದ್ದಾರೆ.

ಪಾಯ್ಸನ್‌ ಪತ್ನಿಯ ‘ವಿಷ’ ಮೂಲದ ಹಿಂದೆ ಬಿದ್ದ ಪೊಲೀಸರು!
ಹೌದು ಪ್ರಿಯಕರನ ಜೊತೆ ಸೇರಿ ಪತಿಯ ಕತೆ ಮುಗಿಸಿದ ಪ್ರತೀಮಾಳನ್ನ ಹೆಡೆಮುರಿ ಕಟ್ಟಿರುವ ಪೊಲೀಸರು ಈಗ ಈ ಕೊಲೆಯ ಜಾಡನ್ನ ಬೇದಿಸೋದಕ್ಕೆ ಮುಂದಾಗಿದ್ದಾರೆ. ಹತ್ಯೆಯಾಗಿರುವ ಬಾಲಕೃಷ್ಣ ಪೂಜಾರಿ ತಂದೆ ಅನುಮತಿ ಪಡೆದು ಬಾಲಕೃಷ್ಣ ಪೂಜಾರಿ ಮೂಳೆಯನ್ನ ಸಂಗ್ರಹಿಸಿಸಿದ್ದಾರೆ.ಉತ್ತರ ಕ್ರಿಯೆ ನಡೆಸಿದ ಜಾಗದಿಂದ ಎರಡು ಮೂಳೆ ತುಂಡಗಳನ್ನ ಸಂಗ್ರಹ ಮಾಡಿದ್ದು ಮೂಳೆಯಲ್ಲಿ ವಿಷದ ರಾಸಾಯನಿಕ ಅಂಶಗಳಿರುವ ಸಾಧ್ಯತೆಯಿದೆ.

ಇನ್ನು ವಿಷದ ಬಾಟಲಿ ಎಸೆದ ಸ್ಥಳದಲ್ಲಿ ಹತ್ಯೆಗೆ ಬಳಸಿದ್ದ ಬಾಟಲಿಯನ್ನ ಸಹ ಪೊಲೀಸರು ಹುಡುಕಾಟ ನಡೆಸ್ತಿದ್ದಾರೆ. ಆರ್ಸೆನಿಕ್ ಟ್ರಯಾಕ್ಸೈಡ್ ಎಂಬಾ ವಿಷದ ಬಾಟಲಿಯ ಶೋಧ ಮಾಡ್ತಿದ್ದಾರೆ. ಕುಕ್ಕುಂದೂರು ಗ್ರಾಮದ ಅಯ್ಯಪ್ಪ ನಗರ ಬಳಿ ಮಹಜರು ನಡೆಸಿದ್ದಾರೆ. ಆರೋಪಿ ದಿಲೀಪ್​ ಪ್ರತಿಮಾ ಬ್ಯೂಟಿ ಪಾರ್ಲರ್ ಬಳಿ ವಿಷದ ಬಾಟಲಿ ನೀಡಿದ್ದ. ಅಜೆಕಾರು ಪೇಟೆ ಬಳಿಯ ಪ್ರತಿಮಾಸ್ ಬ್ಯೂಟಿ ಲಾಂಜ್ ಇತ್ತು. ಈ ಜಾಗದಲ್ಲೂ ಪೊಲೀಸರು ಮಹಜರು ನಡೆಸಿದ್ದಾರೆ.
ಅಜೆಕಾರು ಪೊಲೀಸರು ಸದ್ಯ ಪಾಯಿಸನ್ ಪ್ರತೀಮಾಳ ಕೇಸ್​ನ್ನ ತನಿಖೆ ನಡೆಸ್ತಿದ್ದು, ಸಾಕ್ಷಿಗಳನ್ನ ಕಲೆ ಹಾಕ್ತಿದ್ದಾರೆ. ಕೊಲೆ ಜಾಡು ಬೆನ್ನತ್ತಿರುವ ಪೊಲೀಸರಿಗೆ ಇನ್ನೆಷ್ಟು ಸತ್ಯಗಳ ಪರಿಚಯವಾಗುತ್ತೋ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಉಡುಪಿಯಲ್ಲಿ ಪತಿಗೆ ಪಾಯ್ಸನ್​ ಇಟ್ಟ ಪತ್ನಿ ಕೇಸ್‌ಗೆ ಹೊಸ ಟ್ವಿಸ್ಟ್‌.. ಪೊಲೀಸರು ಆ ಒಂದು ‘ವಿಷ‘ಯದ ಹಿಂದೆ ಬಿದ್ದಿದ್ದು ಏಕೆ?

https://newsfirstlive.com/wp-content/uploads/2024/10/UDP-WIFE-CASE.jpg

Load More