Advertisment

ಉಡುಪಿ ಬೋಟ್ ಬಿಲ್ಡಿಂಗ್ ಯಾರ್ಡ್​ನಿಂದ ಹೊಸ ಸಮಾಚಾರ.. 2000 ಕೋಟಿ ಬಿಗ್ ಡೀಲ್..!

author-image
Ganesh
Updated On
ಉಡುಪಿ ಬೋಟ್ ಬಿಲ್ಡಿಂಗ್ ಯಾರ್ಡ್​ನಿಂದ ಹೊಸ ಸಮಾಚಾರ.. 2000 ಕೋಟಿ ಬಿಗ್ ಡೀಲ್..!
Advertisment
  • ಭಾರತದ ಹಡಗು ನಿರ್ಮಾಣ ಸಂಸ್ಥೆ ಹೊಸ ಮೈಲಿಗಲ್ಲು
  • ನರೇಂದ್ರ ಮೋದಿ ಆತ್ಮ ನಿರ್ಭರ್ ಕನಸು ನನಸು
  • ಉಡುಪಿಯಿಂದ ನಾರ್ವೆಗೆ ಹೊರಟ ಬೃಹತ್ ಟಗ್

ಉಡುಪಿ: ಭಾರತದಿಂದ ನಾರ್ವೆ ದೇಶಕ್ಕೆ ಬೃಹತ್ ಶಿಪ್ ರವಾನೆ ಸಿದ್ಧವಾಗಿದೆ. ಭಾರತ ಮತ್ತು ನಾರ್ವೆ ನಡುವೆ ಸುಮಾರು 2000 ಕೋಟಿ ರೂಪಾಯಿ ಒಪ್ಪಂದ ನಡೆದಿದೆ. ಆ ಮೂಲಕ ದೇಶದ ಪ್ರಮುಖ ಹಡಗು ನಿರ್ಮಾಣ ಸಂಸ್ಥೆ ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್ (Udupi cochin shipyard limited) ಮಹತ್ವದ ಮೈಲಿಗಲ್ಲು ಸಾಧಿಸಿದೆ.

Advertisment

publive-image

ನಾರ್ವೆ ದೇಶಕ್ಕೆ 3800 TDW ಸಾಮರ್ಥ್ಯದ ಬೃಹತ್ ಹಡಗನ್ನು ಪೂರೈಕೆ ಮಾಡಿದೆ. ನಾರ್ವೆಯ ರಾಯಭಾರ ಕಚೇರಿಯ ಅಧಿಕಾರಿಗಳು ಮತ್ತು ನಾರ್ವೆ ವಿಲ್ಸನ್ ಕಂಪನಿಯ ಸಿಬ್ಬಂದಿ ಉಡುಪಿಯ ಮಲ್ಪೆ ಸಮೀಪದ ಬೋಟ್ ಬಿಲ್ಡಿಂಗ್ ಯಾರ್ಡ್​​ಗೆ ಬಂದು ಖರೀದಿ ಪ್ರಕ್ರಿಯೆಯನ್ನು ಪೂರೈಸಿದರು. ಒಪ್ಪಂದಕ್ಕೆ ಸಹಿ ಹಾಕುವ ಜೊತೆ ಭಾರತೀಯ ಸಂಸ್ಕೃತಿಯ ಪ್ರಕಾರ ಪೂಜೆ ನೆರವೇರಿಸಲಾಯಿತು. ಹಡಗಿಗೆ ಕಾಯಿ ಒಡೆದು, ಮಾಲೆ ಹಾಕಿ ಪ್ರಸಾದ ಹಚ್ಚಿ ಆರತಿ ಎತ್ತಿ ಪೂಜೆ ಮಾಡಲಾಯ್ತು.

ಇದನ್ನೂ ಓದಿ:ಮಿಸೆಸ್ ಅರ್ಥ್ ಕಿರೀಟ ಮುಡಿಗೇರಿಸಿಕೊಂಡ ಡಾ.ಶೃತಿ ಬಲ್ಲಾಳ್.. ಉಡುಪಿಯ ವೈದ್ಯೆಗೆ ಪ್ರತಿಷ್ಠಿತ ಗರಿ

publive-image

ಹಡಗು 89.43 ಮೀಟರ್ ಉದ್ದ, 13.2 ಮೀಟರ್ ಅಗಲ ಹೊಂದಿದೆ. 4.2 ಮೀಟರ್ ಡ್ರಾಫ್ಟ್ ಹೊಂದಿದ್ದು, ಸರಕು ಸಾಗಾಣಿಕೆ ಮಾಡುವ ಪರಿಸರ ಸ್ನೇಹಿ ಹಡಗು ಇದಾಗಿದೆ. ನಿನ್ನೆಯ ಒಪ್ಪಂದಲ್ಲಿ ಒಟ್ಟು ವಿಲ್ಸನ್ ಎಎಸ್​ಎಯಿಂದ 14 ಹಡಗುಗಳಿಗೆ ಬೇಡಿಕೆ ಇಡಲಾಗಿದೆ.
ಆತ್ಮ ನಿರ್ಭರ ಮತ್ತು ಮೇಕ್ ಇನ್ ಇಂಡಿಯಾ ಕಾನ್ಸೆಪ್ಟ್​ನಲ್ಲಿ ಈ ಬೃಹತ್ ಶಿಪ್ ತಯಾರಾಗಿದೆ. ಕೊಚ್ಚಿನ್ ಶಿಪ್ ಯಾರ್ಡ್​ನಲ್ಲಿ ಸ್ಥಳೀಯರು ಸೇರಿದಂತೆ ರಾಜ್ಯದ ವಿವಿಧ ಭಾಗದ 1000ಕ್ಕೂ ಹೆಚ್ಚು ಜನಕ್ಕೆ ಈಗಾಗಲೇ ಉದ್ಯೋಗ ಪಡೆದಿದ್ದಾರೆ. ಕಾರ್ಗೋ ಹಡಗುಗಳ ನಿರ್ಮಾಣದಲ್ಲಿ ಭಾರತ ಪ್ರಪಂಚದಲ್ಲೇ ಸದ್ಯ 17ನೇ ಸ್ಥಾನದಲ್ಲಿದೆ. 2030ರ ವೇಳೆಗೆ ಟಾಪ್ ಟೆನ್ ಆಗುವ ಗುರಿಯನ್ನು ಹೊಂದಿದೆ. 2047ರ ವೇಳೆಗೆ ಟಾಪ್ 5ರ ಗುರಿಮುಟ್ಟುವ ಟಾರ್ಗೆಟನ್ನು ಭಾರತ ಸರಕಾರ ನೀಡಿದೆ.

Advertisment

ಇದನ್ನೂ ಓದಿ:ಶಿವಣ್ಣನ ತಬ್ಬಿಕೊಂಡು ಭಾವುಕರಾದ ಕಿಚ್ಚ ಸುದೀಪ್.. ದಿಗ್ಗಜರ ಸಮಾಗಮ; ಫೋಟೋಗಳು ಇಲ್ಲಿವೆ!

publive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment