Advertisment

ಲವ್ವರ್ ಜೊತೆ ಸೇರಿ ಗಂಡನ ಉಸಿರು ನಿಲ್ಲಿಸಿದ ಹೆಂಡತಿ.. ಸುಂದರಿ ಡ್ರಾಮಾ ಮಾಡಿ ಸಿಕ್ಕಿಬಿದ್ದಿದ್ದು ಹೇಗೆ?

author-image
admin
Updated On
ಗಂಡನ ಎದೆ ಮೇಲೆ ಕೂತು ಕೊ* ಮಾಡಿದ್ದ ಪ್ರತಿಮಾ; ರೀಲ್ಸ್​ ರಾಣಿಯ ಹೇಳಿಕೆ ಕೇಳಿ ಬೆಚ್ಚಿಬಿದ್ದ ಉಡುಪಿ ಪೊಲೀಸರು
Advertisment
  • 25 ದಿನಗಳಿಂದ ಆಸ್ಪತ್ರೆಯಿಂದ ಆಸ್ಪತ್ರೆಗಳಿಗೆ ಗಂಡನ ಜೊತೆ ಅಲೆದಾಟ
  • ಗಂಡನ ಸಾವಿನ ಬಳಿಕ ಸಹೋದರನ ಬಳಿ ಸತ್ಯ ಬಾಯ್ಬಿಟ್ಟ ಮಹಿಳೆ
  • ಪ್ರಿಯಕರನ ಜೊತೆ ಸೇರಿ ಡ್ರಾಮಾ ಮಾಡಿದ ಚೆಲುವೆ ಪೊಲೀಸರ ಅತಿಥಿ

ಉಡುಪಿ: ಪ್ರಿಯಕರನ ಜೊತೆ ಸೇರಿ ಪತ್ನಿಯೇ ಪತಿಯ ಹ*ತ್ಯೆ ಮಾಡಿರುವ ಘಟನೆ ಕಾರ್ಕಳ ತಾಲೂಕು ಅಜೆಕಾರಿನಲ್ಲಿ ನಡೆದಿದೆ. 44 ವರ್ಷದ ಬಾಲಕೃಷ್ಣ ಪೂಜಾರಿ ಮೃತ ವ್ಯಕ್ತಿ.

Advertisment

publive-image

ಬಾಲಕೃಷ್ಣ ಪೂಜಾರಿ ಅವರು ಕಳೆದ 25 ದಿನಗಳಿಂದ ಜ್ವರ, ವಾಂತಿ ಅನಾರೋಗ್ಯದಿಂದ ಬಳಲುತ್ತಿದ್ದರು. ಕಾಮಾಲೆ ರೋಗ ಇದೆ ಎಂದು ಹೇಳಿ ಬಾಲಕೃಷ್ಣ ಅವರನ್ನು ಕಾರ್ಕಳದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಮಣಿಪಾಲ ಕೆಎಂಸಿ, ಬೆಂಗಳೂರಿನ ನಿಮಾನ್ಸ್, ವಿಕ್ಟೋರಿಯಾ, ಮಂಗಳೂರಿನ ವೆಲ್ಲಾಕ್ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಕೂಡ ನೀಡಲಾಗಿತ್ತು. ಆದರೆ ಕಳೆದ ಅಕ್ಟೋಬರ್ 20 ರಂದು ಚಿಕಿತ್ಸೆ ಫಲಕಾರಿಯಾಗದೇ ಬಾಲಕೃಷ್ಣ ಸಾವನ್ನಪ್ಪಿದ್ದಾರೆ.

publive-image

ಬಾಲಕೃಷ್ಣ ಪೂಜಾರಿ ಅವರ ಸಾವು ಅನುಮಾನಸ್ಪದವಾಗಿದ್ದು, ಕುಟುಂಬಸ್ಥರು ಪತ್ನಿ ಪ್ರತಿಮಾ ಮೇಲೆ ಸಂಶಯ ವ್ಯಕ್ತಪಡಿಸಿದ್ದರು. ಬಾಲಕೃಷ್ಣ ಸಹೋದರ ರಾಮಕೃಷ್ಣ ಎಂಬುವವರು ಅಜೆಕಾರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರತಿಮಾಳ ಸಹೋದರ ಸಂದೀಪ್‌ಗೂ ತನ್ನ ಬಾವನ ಸಾವಿನ ಬಗ್ಗೆ ಸಂಶಯ ಇತ್ತು. ಪ್ರತಿಮಾ ಮತ್ತು ಆಕೆಯ ಪ್ರಿಯಕರ ದಿಲೀಪ್ ಹೆಗ್ಡೆಯ ನಡೆ ಸಾಕಷ್ಟು ಅನುಮಾನ ಮೂಡಿಸಿತ್ತು.

Advertisment

ಇದನ್ನೂ ಓದಿ: ಮರಕುಂಬಿ ಪ್ರಕರಣದ ತೀರ್ಪು ಬೆನ್ನಲ್ಲೇ ಎದೆ ನೋವು.. ಅಪರಾಧಿ ಹೃದಯಾಘಾತಕ್ಕೆ ಸಾ*ವು 

ಪ್ರತಿಮಾ ಸಾಯಿಸಿದ್ದು ಹೇಗೆ?
ಬಾಲಕೃಷ್ಣ ಪೂಜಾರಿ ಅವರ ಸಾವಿನ ಬಳಿಕ ಪ್ರತಿಮಾ ತನ್ನ ಸಹೋದರ ಸಂದೀಪ ಜೊತೆ ಮಾಹಿತಿ ಬಾಯಿ ಬಿಟ್ಟಿದ್ದರು. ಪ್ರಿಯಕರ ದಿಲೀಪ್ ಜೊತೆ ಸೇರಿ ಬೆಡ್ ಶೀಟ್‌ನಿಂದ ಮುಖ ಒತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಗಿ ಪ್ರತಿಮಾ ಒಪ್ಪಿಕೊಂಡಿದ್ದಾರೆ. ಬಾಲಕೃಷ್ಣ ಪೂಜಾರಿ ಅವರಿಗೆ ಊಟದಲ್ಲಿ ವಿಷ ಬೆರೆಸಿರುವ ಅನುಮಾನವೂ ಇದೆ. ಅಜೆಕಾರು ಪೊಲೀಸರು ಪ್ರತಿಮಾ ಹಾಗೂ ದಿಲೀಪ್ ಹೆಗ್ಡೆಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment