ಕುತೂಹಲಕಾರಿ ಅಂಶಗಳನ್ನು ಪೊಲೀಸರ ಮುಂದೆ ಬಿಚ್ಚಿಟ್ಟ ಪ್ರತಿಮಾ
ಅಕ್ಟೋಬರ್ 20ರಂದು ಮಧ್ಯರಾತ್ರಿ ಪ್ರತಿಮಾ ಮನೆಗೆ ಬಂದಿದ್ದ ಪ್ರಿಯಕರ
ಬಾಲಕೃಷ್ಣ ಪೂಜಾರಿಯನ್ನ ಕೊಲ್ಲಲು ಖತರ್ನಾಕ್ ಪ್ಲಾನ್ ಮಾಡಿದ್ದ ಪ್ರೇಮಿಗಳು
ಉಡುಪಿ: ಆ ಗಂಡನಿಗೆ ಆ ರೀಲ್ಸ್ ಮಾಡಿದಾಗಲೇ ಗೊತ್ತಾಗಬೇಕಿತ್ತು. ಹೆಂಡ್ತಿ ಏನೋ ರೀಲ್ಸ್ ಮೂಲಕ ಹಿಂಟ್ ಕೊಡ್ತಿದ್ದಾಳೆ ಅಂತಾ. ಪಾಪಾ ಅವನಿಗೆ ಅದೆಲ್ಲಾ ಅರ್ಥನೇ ಆಗಿರಲಿಲ್ಲ. ಅರ್ಥವಾಗೋಥರ ಇದ್ದಿದ್ರೆ, ಆತ ಇವನ ಜೊತೆ ಇಷ್ಟು ವರ್ಷ ಜೀವನವನ್ನೇ ಮಾಡ್ತಿರಲಿಲ್ಲವೇನೋ. ಆಶ್ಚರ್ಯವಾಗೋ ವಿಚಾರ ಏನೂ ಗೊತ್ತಾ? ಪಾರ್ಲರ್ ಪ್ರತಿಮಾ ಪೊಲೀಸರ ಮುಂದೆ ನೀಡಿರೋ ಹೇಳಿಕೆಗಳು. ಸ್ವತಃ ಆಕೆಯೇ ಗಂಡನ ಎದೆಯ ಮೇಲೆ ಕೂತು ಕೈ ಕಾಲು ಹಿಡಿದುಕೊಂಡಳಂತೆ. ಇದೊಂದೇ ಅಲ್ಲ, ಇಂತಹ ಅನೇಕ ಅಘಾತಕಾರಿ ಹೇಳಿಕೆಗಳು ವಿಚಾರಣೆ ವೇಳೆ ದಾಖಲಾಗಿವೆ.
ಇದನ್ನೂ ಓದಿ: BBK11: ಅಮ್ಮನ ಅಗಲಿಕೆಯ ನೋವಲ್ಲಿ ಕಿಚ್ಚ ಸುದೀಪ್.. ಈ ವಾರ ಇಬ್ಬರಿಂದ ಬಿಗ್ ಬಾಸ್ ನಿರೂಪಣೆ; ಯಾರವರು?
ಉಡುಪಿ ಜಿಲ್ಲೆಯ ಕಾರ್ಕಳದ ಅಜೆಕಾರುವಿನ ಮರ್ಡರ್ ಸ್ಟೋರಿ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ರೀಲ್ಸ್ ರಾಣಿ, ಪಾರ್ಲರ್ ಪ್ರತಿಮಾ ಗಂಡನನ್ನ ಕೊಂದಿರೋ ಬಗ್ಗೆ ಸಾಕಷ್ಟು ಚರ್ಚೆಯಾಗ್ತಿದೆ. ಗಂಡ ಕುಡುಕನೋ, ದುರುಳನೋ ಆಗಿ, ಆಕೆ ಆತನನ್ನ ಕೊಂದಿದ್ದರೆ ಬಹುಶಃ ಆಕೆಯ ಮೇಲೆ ಜನರಿಗೆ ಅನುಕಂಪ ಅಂತೂ ಇರ್ತಿತ್ತು. ಆದ್ರೆ, ಯಾವನೋ ಬಾಯ್ ಫ್ರೆಂಡ್‌ಗೋಸ್ಕರ ಗಂಡನಿಗೆ ಚಟ್ಟ ಕಟ್ಟಿದ ಈ ಕಿಲ್‌ಲೇಡಿ ಮೇಲೆ ಜನರು ಸಿಡಿಸಿಡಿಯಾಗಿರೋದು ಸುಳ್ಳಲ್ಲ.
ಈ ಸ್ಟೋರಿಯಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸೋದೇ ಪ್ರತಿಮಾ ಸಹೋದರ ಸಂದೀಪ್. ಆತನೊಬ್ಬ ಇಲ್ಲದಿದ್ದಿದ್ರೆ, ಬಹುಶಃ ಈ ಕೇಸ್ ಹೊರಬರ್ತಾನೆ ಇರ್ಲಿಲ್ಲ. ದೇವರಂಥಾ ಭಾವನನ್ನ ಈಕೆಯೇ ಕೊಂದಿರಬಹುದು ಅನ್ನೋ ಸಣ್ಣ ಸುಳಿವು, ಆಕೆಯ ಜೊತೆಗಿನ ಮಾತುಕತೆ, ಆ ನಂತರ ಸತ್ಯ ಗೊತ್ತಾಗಿ, ಬಯಲು ಮಾಡಿದ್ದು ನಿಜಕ್ಕೂ ಮೆಚ್ಚುವಂತದ್ದು. ರಕ್ತ ಸಂಬಂಧಕ್ಕಿಂತ ಸತ್ಯಕ್ಕೆ ಗೆಲುವಾಗಬೇಕು, ದೇವರಂಥಾ ಭಾವನ ಆತ್ಮಕ್ಕೆ ಶಾಂತಿ ಸಿಗ್ಬೇಕು ಅಂತಾ ಸಂದೀಪ್ ಒಳ್ಳೆ ನಿರ್ಧಾರವನ್ನೇ ತೆಗೆದುಕೊಂಡಿದ್ದ. ನಿನ್ನೆ ನಡೆದಿರೋ ಅಷ್ಟು ವಿಚಾರಗಳು ನಿಮಗೆ ತಿಳಿದಿರಬಹುದು.
ಆದ್ರೆ, ಇವತ್ತು ಅದಕ್ಕಿಂತ ಕುತೂಹಲಕಾರಿ ಅಂಶಗಳು ಪೊಲೀಸರ ವಿಚಾರಣೆ ವೇಳೆ ಬಯಲಾಗಿದೆ. ಅದರಲ್ಲೂ ಸ್ವತಃ ಪತಿಯ ಕೊಲೆ ಆರೋಪಿ ಪ್ರತಿಮಾ, ವಿಚಾರಣೆ ವೇಳೆ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾಳೆ ಅನ್ನೋ ಮಾಹಿತಿ ಸಿಕ್ಕಿದೆ. ಜೊತೆಗೆ ಗಂಡನ ಕೊಲ್ಲಲು ತಾನು ಏನೇನೂ ಮಾಡಿದೆ ಅನ್ನೋದನ್ನ ಇಂಚಿಂಚೂ ವಿವರಿಸಿದ್ದಾಳೆ. ಅಂದ್ಹಾಗೇ, ಪತ್ನಿ ಪ್ರತಿಮಾ ಪತಿ ಬಾಲಕೃಷ್ಣ ಪೂಜಾರಿಯನ್ನ ಕೊಲ್ಲಲು ಖತರ್ನಾಕ್ ಪ್ಲಾನ್ ಮಾಡಿಕೊಂಡಿದ್ದಳು. ನಿತ್ಯವೂ ವಿಷವುಣಿಸಿ ಸಾಯಿಸೋಣ ಅಂತಾ ಡಿಸೈಡ್ ಮಾಡಿದವಳಿಗೆ ಪಾಯ್ಸನ್ ಸಪ್ಲೈ ಮಾಡಿದವನು ಬಾಯ್‌ಫ್ರೆಂಡ್ ದಿಲೀಪ್ ಹೆಗ್ಡೆ. ಆಕೆ ತಂದುಕೊಟ್ಟ ವಿಷವನ್ನ ಹಂತ ಹಂತವಾಗಿ ಊಟದಲ್ಲಿ ಬೆರೆಸಿದ್ದಾಳೆ ಈಕೆ.
ಈಕೆಯ ಪ್ಲಾನ್ ಕೂಡ ಅದೇ ಆಗಿತ್ತು. ಒಂದೇ ಬಾರಿ ಕೊಂದರೇ, ಡೌಟ್ ಬರುತ್ತೆ ಅನ್ನೋ ಕಾರಣಕ್ಕೆ ಹಂತ ಹಂತವಾಗಿ ವಿಷವುಣಿಸಿದರೇ, ಅಂಗಾಂಗಳಿಗೆ ಡ್ಯಾಮೇಜ್ ಆಗಿ, ಗಂಡ ಸಾಯುತ್ತಾನೆ. ನಂತರ ನ್ಯಾಚುರಲ್ ಡೆತ್ ಅಂತಾ ಬಿಂಬಿಸೋಣ ಅಂತಾ ಪತ್ನಿ ಪ್ರತಿಮಾ ದೂರಾಲೋಚನೆ ಮಾಡಿದ್ದಳು. ಆಕೆ ಅಂದುಕೊಂಡಂತೆಯೇ ಪತಿ ಬಾಲಕೃಷ್ಣ ಪೂಜಾರ್ ಕಿಡ್ನಿ ಮತ್ತು ಲಿವರ್ ಡ್ಯಾಮೇಜ್ ಆಗಿತ್ತು. ದೇಹದ ನರಗಳು ಸಂವೇದನೆ ಕಳೆದುಕೊಂಡಿತ್ತು.
ಬಾಲಕೃಷ್ಣ ಪೂಜಾರಿ ಕಳೆದ 25 ದಿನಗಳಿಂದ ಜ್ವರ, ವಾಂತಿ ಅಂತ ಬಳಲುತ್ತಿದ್ರು. ಹಾಗಾಗಿಯೇ ಗಂಡನಿಗೆ ಕಾಮಾಲೆ ರೋಗ ಬಂದಿದೆ ಅಂತ ಇದೇ ಪ್ರತಿಮಾ ಹಲವು ಆಸ್ಪತ್ರೆಗಳಿಗೆ ತಿರುಗಾಡಿದ್ದಳು. ಮಣಿಪಾಲ ಕೆಎಂಸಿ, ಬೆಂಗಳೂರಿನ ನಿಮಾನ್ಸ್, ವಿಕ್ಟೋರಿಯಾ, ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಕೂಡ ನೀಡಲಾಗಿತ್ತು. ಒಟ್ಟು 6 ಆಸ್ಪತ್ರೆಗಳಲ್ಲಿ ಗಂಡನಿಗೆ ಈಕೆ ಚಿಕಿತ್ಸೆ ಕೊಡಿಸಿದ್ದಳು. ಆದ್ರೆ, ಆಕೆಯ ಪ್ಲಾನ್ ವರ್ಕ್ ಆಗ್ತಿರಲಿಲ್ಲ. ಆ ನಂತರವೇ ಆಕೆಯೇ ಬಾಯ್‌ಫ್ರೆಂಡ್ ಸಹಾಯದೊಂದಿಗೆ, ಗಂಡನನ್ನ ಕೊಂದಿದ್ದಾಳೆ. ಅಕ್ಟೋಬರ್ 20ರಂದು ಬಾಲಕೃಷ್ಣ ಮನಯೆಲ್ಲಿಯೇ ಸಾವನ್ನಪ್ಪಿದ್ದಾರೆ.
ಅಂದ್ಹಾಗೇ, ಪೊಲೀಸರ ವಿಚಾರಣೆ ವೇಳೆ ಪ್ರತಿಮಾ ತಪ್ಪೊಪ್ಪಿಕೊಂಡಿದ್ದಾಳೆ. ಪ್ರಿಯಕರ ತಂದುಕೊಟ್ಟ ವಿಷವನ್ನ ಪ್ರತಿ ನಿತ್ಯ ಪತಿಗೆ ಊಟದಲ್ಲಿ ಸೇರಿಸಿ ಕೊಡುತ್ತಿದ್ದೆ. ಅನಾರೋಗ್ಯ ಆದಾಗ ಆಸ್ಪತ್ರೆಯಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೆ. ರಿಪೋರ್ಟ್ ಬರುವ ಮೊದಲೇ ಬೇರೆ ಆಸ್ಪತ್ರೆಗೆ ಕರೆದುಕೊಂಡು ಅಡ್ಮಿಟ್ ಮಾಡಿಸ್ತಿದ್ದೆ. ಒಟ್ಟು ಏಳು ಆಸ್ಪತ್ರೆಗೆ ದಾಖಲಿಸಿ ಡಿಸ್ಚಾರ್ಜ್ ಮಾಡಿಸಿದ್ದೇನೆ. ಆದರೆ ವಿಷದಿಂದ ಪಾರಾದ ಹಿನ್ನೆಲೆಯಲ್ಲಿ ಉಸಿರುಗಟ್ಟಿಸಿ ಕೊಲೆ ಮಾಡಿದೆ ಅಂತಾ ಪತ್ನಿ ಪ್ರತಿಮಾ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಹಸುವಿನ ಸಗಣಿಯಿಂದ ತಯಾರಿಸಲಾದ ಗಡಿಯಾರವಿದು.. ವಿದೇಶದಲ್ಲಿ ಇದಕ್ಕೆ ಡಿಮ್ಯಾಂಡಪ್ಪೋ ಡಿಮ್ಯಾಂಡ್
ಅಕ್ಟೋಬರ್ 20ರಂದು, ತಡರಾತ್ರಿ ಮೂರು ಗಂಟೆಗೆ ಪ್ರಿಯಕರ ಮನೆಗೆ ಬಂದ. ಬೈಕ್ ದೂರದಲ್ಲಿ ನಿಲ್ಲಿಸಿ ಮನೆಗೆ ಆತ ನಡೆದುಕೊಂಡು ಬಂದಿದ್ದ. ಆ ಬಳಿಕ ದಿಲೀಪ್ ಶೌಚಾಲಯದಲ್ಲಿ ಅಡಗಿದ್ದನು. ನಾನು ಅವನು ಇಬ್ಬರು ಚರ್ಚೆ ಮಾಡಿ ಕೊಲೆ ಯಾವ ರೀತಿ ಮಾಡಬೇಕು ಎಂದು ಪ್ಲಾನ್ ಮಾಡಿದ್ವಿ. ಉಸಿರುಗಟ್ಟಿಸಿ ಕೊಲ್ಲೋಣ ಅಂತಾ ನಿರ್ಧಾರ ಮಾಡಿಕೊಂಡ್ವಿ. ಆ ಬಳಿಕ ಆತ ಹಿಂದೆಯಿಂದ ಬಂದು ಬೆಡ್ ಶಿಟ್ ದಿಂಬಿನಿಂದ ಮುಖಕ್ಕೆ ಒತ್ತಿ ಹಿಡಿದ. ನಾನು ಗಂಡನ ಎದೆ ಮೇಲೆ ಕೂತು ಕೈ ಕಾಲು ಹಿಡಿದೆ. ಹೀಗಾಗಿ ಗಂಡ ಬಾಲಕೃಷ್ಷ ಕೆಲವೇ ನಿಮಿಷದಲ್ಲಿ ಪ್ರಾಣ ಬಿಟ್ಟ. ಆ ಬಳಿಕ ಸಂಬಂಧಿಕರು, ಅತ್ತೆ ಮಾವನಿಗೆ ಕರೆ ಮಾಡಿ, ಉಸಿರಾಡಲು ಸಮಸ್ಯೆಯಾಗಿ ಸಾವನ್ನಪ್ಪಿದರು ಅಂತಾ ಹೇಳಿದೆ ಎಂದು ಪ್ರತಿಮಾ ತಪ್ಪೊಪ್ಪಿಕೊಂಡಿದ್ದಾಳೆ.
ಅಂದ್ಹಾಗೇ, ಬಾಲಕೃಷ್ಣ ಪೂಜಾರಿ ಅವರ ಮೃತದೇಹ ಪೋಸ್ಟ್ ಮಾರ್ಟಂ ರಿಪೋರ್ಟ್ ಇನ್ನೂ ಬಂದಿಲ್ಲ. ಅದಕ್ಕೂ ಮುಂಚೆಯೇ ಪತ್ನಿ ಪ್ರತಿಮಾ ಪೊಲೀಸರ ಮುಂದೆ ಎಲ್ಲವನ್ನೂ ಕಕ್ಕಿದ್ದಾಳೆ. ಆದ್ರೆ, ಬಾಯ್‌ಫ್ರೆಂಡ್ ನೀಡುತ್ತಿದ್ದ ಪಾಯ್ಸನ್‌ನ ಮೂಲ ಇನ್ನೂ ತಿಳಿದುಬಂದಿಲ್ಲ. ಪೊಲೀಸರು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸ್ತಿದ್ದಾರೆ. ಬಾಲಕೃಷ್ಣ ಸಾವಿನಿಂದ ಸಹೋದರರಿಗೆ ಆಘಾತವಾಗಿದೆ. ಸಂಸಾರಕ್ಕಾಗಿ ಸರ್ವಸ್ವವನ್ನ ತ್ಯಾಗ ಮಾಡಿದ್ದ ನಮ್ಮ ಸಹೋದರನಿಗೆ ಹೀಗಾಯ್ತಲ್ಲ ಅಂತಾ ಕೊರಗುತ್ತಿದ್ದಾರೆ. ಇನ್ನೊಂದೆಡೆ, ಬಾಲಕೃಷ್ಣ ಸಾವನ್ನಪ್ಪಿದ ದಿನ ಪ್ರತಿಮಾ ಕರೆ ಮಾಡಿ, ಏನೆಲ್ಲಾ ಹೇಳಿದಳು ಅನ್ನೋದರ ಬಗ್ಗೆಯೂ ರಾಮಕೃಷ್ಣ ಹೇಳಿದ್ದಾರೆ. ಅದೇನೇ ಇರಲಿ, ಇದೊಂದು ಕೆಟ್ಟ ಚಾಳಿ. ಯಾವುದೋ ಕಾರಣಕ್ಕೇ, ಗಂಡನನ್ನೇ ಕೊಲ್ಲುವ ಪ್ರವೃತ್ತಿ ಸಮಾಜಕ್ಕೆ ಕಂಟಕ. ಇಂತವರಿಗೆ ತಕ್ಕಾ ಶಿಕ್ಷೆಯಾದಾಗ ಮಾತ್ರ ಇಂತಹ ಕೆಟ್ಟ ಚಾಳಿ ನಿಲ್ಲೋದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ