/newsfirstlive-kannada/media/post_attachments/wp-content/uploads/2023/07/SMG_SHARAT_KUMAR_FALLS.jpg)
ಉಡುಪಿ: ಬೈಂದೂರು ತಾಲೂಕಿನ ಕೊಲ್ಲೂರು ಬಳಿಯ ಅರಿಶಿನಗುಂಡಿ ಫಾಲ್ಸ್ನಲ್ಲಿ ಬಿದ್ದು ನಾಪತ್ತೆಯಾಗಿದ್ದ ಯುವಕ ಶರತ್ ಕುಮಾರ್ ಮೃತದೇಹ ಕೊನೆಗೂ ಪತ್ತೆಯಾಗಿದೆ. ಸತತ 7 ದಿನಗಳ ಶೋಧದ ಬಳಿಕ ಜಲಪಾತದಿಂದ 200 ಅಡಿ ಕೆಳಗಡೆ ಶರತ್ ಶವವಾಗಿ ಪತ್ತೆಯಾಗಿದ್ದಾರೆ.
ಕಳೆದ ಜುಲೈ 23 ರಂದು ಶರತ್ ಕುಮಾರ್ ಅರಿಶಿನಗುಂಡಿ ಫಾಲ್ಸ್ಗೆ ಪ್ರವಾಸಕ್ಕೆಂದು ತೆರಳಿದ್ದರು. ಆಗ ರೀಲ್ಸ್ ಮಾಡಲೆಂದು ಜಲಪಾತದ ಸಮೀಪಕ್ಕೆ ತೆರಳಿದ್ದರು. ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿದ್ದನು. ಫಾಲ್ಸ್ಗೆ ಬಿದ್ದ ದಿನದಿಂದ ಶರತ್ಗಾಗಿ ಹುಡುಕಾಟ ಮಾಡಲಾಗುತ್ತಿತ್ತು. ಸದ್ಯ ಇಂದು ಮೃತದೇಹ ಪತ್ತೆಯಾಗಿದೆ. ಯುವಕ ಬಿದ್ದ ರಭಸಕ್ಕೆ ಜಲಪಾತದಿಂದ 200 ಅಡಿ ಕೆಳಗಡೆ ಬಂಡೆ ಕಲ್ಲಿನ ಒಳಗಡೆ ಸಿಲುಕಿಕೊಂಡಿದ್ದನು. ಹೀಗಾಗಿ ಮೇಲಕ್ಕೆ ಬರಲು ಆಗದೇ ನೀರಿನಲ್ಲೇ ಒಳಗೆ ಮೃತಪಟ್ಟಿದ್ದನು. ಕೊಲ್ಲೂರು ಪೊಲೀಸರು, ಅಗ್ನಿಶಾಮಕ ದಳ ಹಾಗೂ ಸ್ಥಳೀಯರ ನಿರಂತರ ಕಾರ್ಯಾಚರಣೆಯಿಂದ ಕೊನೆಗೂ ಮೃತದೇಹ ಪತ್ತೆ ಹಚ್ಚಲಾಗಿದೆ.
[caption id="attachment_9800" align="aligncenter" width="800"] ಶರತ್ ಕುಮಾರ್[/caption]
ಇದನ್ನೂ ಓದಿ: ಮನೆಗೆ ಆಸರೆಯಾಗಿದ್ದ ಒಬ್ಬನೇ ಮಗ ಅರಿಶಿನಗುಂಡಿ ಪಾಲಾದನು.. ದುಃಖದ ಮಡುವಿನಲ್ಲಿ ಶರತ್ ಕುಟುಂಬ
ಇನ್ನು ಫಾಲ್ಸ್ನಲ್ಲಿ ಬಿದ್ದು ನಾಪತ್ತೆಯಾಗಿದ್ದ ಶರತ್ ಕುಮಾರ, ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಕೆ ಎಚ್ ನಗರದ ನಿವಾಸಿಯಾಗಿದ್ದನು. ಮುನಿಸ್ವಾಮಿ ಮತ್ತು ರಾಧಾ ದಂಪತಿಯ ಏಕೈಕ ಪುತ್ರನಾಗಿದ್ದು ಕುಟುಂಬಕ್ಕೆ ಆಸರೆಯಾಗಿದ್ದನು. ಕಳೆದ ಭಾನುವಾರ ಅಂದರೆ ಜುಲೈ 23 ರಂದು ಬೆಳಗ್ಗೆ ಶರತ್, ಭದ್ರಾವತಿಯ ಕಡದಕಟ್ಟೆಯ ಸ್ನೇಹಿತರೊಂದಿಗೆ ಕಾರಿನಲ್ಲಿ ಪ್ರವಾಸಕ್ಕೆ ಹೊಗಿದ್ದನು. ಈ ವೇಳೆಯೇ ಈ ದುರ್ಘಟನೆ ನಡೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ