newsfirstkannada.com

ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ; ಅಮ್ಮ, ತಂಗಿ, ಸಹೋದರರ ಮೃತದೇಹ ಕಂಡು ಕಣ್ಣೀರಿಟ್ಟ ಪುತ್ರ

Share :

Published November 13, 2023 at 7:57am

    ಮೃತದೇಹ ಕಾಣಲು ಬೆಂಗಳೂರಿಂದ ಆಗಮಿಸಿದ ಮಗ

    ಪತ್ನಿ, ಮಕ್ಕಳ ಮೃತದೇಹ ಕಾಣಲು ಸೌದಿಯಿಂದ ಆಗಮಿಸಿದ ಗಂಡ

    ಆರೋಪಿ ಪತ್ತೆಗಾಗಿ ನಾಲ್ಕು ತಂಡಗಳನ್ನು ರಚಿಸಿದ ಪೊಲಿಸರು

ಉಡುಪಿ: ನೇಜಾರಿನಲ್ಲಿ ನಡೆದ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ ಪ್ರಕರಣ ಸಂಬಂಧಪಟ್ಟಂತೆ ಮಣಿಪಾಲ ಕೆಎಂಸಿಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ. ಮೃತ ಹಸೀನಾ ಪುತ್ರ, ಹತ್ಯೆಗೀಡಾದ ಮೂವರು ಮಕ್ಕಳ ಸೋದರ ಅಸಾದ್ ಬೆಂಗಳೂರಿನಿಂದ ಆಗಮಿಸಿದ್ದಾರೆ.

ಶವಗಾರಕ್ಕೆ ಬರುತ್ತಿದ್ದಂತೆ ಪುತ್ರ ಕಣ್ಣೀರಿಟ್ಟಿದ್ದಾನೆ. ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿರುವ ಪತಿ ನೂರ್ ಮಹಮದ್ ಮುಂಜಾನೆ ಉಡುಪಿಗೆ ಆಗಮಿಸಲಿದ್ದಾರೆ.

ಬೆಳಗ್ಗೆ ಮೃತದೇಹವನ್ನು ನೇರವಾಗಿ ಉಡುಪಿಯ ಜಾಮಿಯಾ ಮಸೀದಿಗೆ ತಂದು ಅಂತಿಮ ಪೂಜಾ ವಿಧಿ ವಿಧಾನಗಳು ಅಂತ್ಯಸಂಸ್ಕಾರ ಪ್ರಕ್ರಿಯೆ ನಡೆಯಲಿದೆ. ನಂತರ ಕೋಡಿಬೇಂಗ್ರೆ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ನಾಲ್ವರನ್ನು ಹತ್ಯೆ ಗೈದ ಆರೋಪಿಗಾಗಿ ಪೊಲೀಸರು ಹುಡುಕಾಟ ಮಾಡುತ್ತಿದ್ದಾರೆ. ನಾಲ್ಕು ತಂಡಗಳನ್ನು ರಚಿಸಿದ್ದು, ಸುತ್ತಲ ನಾಲ್ಕು ಜಿಲ್ಲೆಗಳಾದ ಉತ್ತರ ಕನ್ನಡ ದಕ್ಷಿಣ ಕನ್ನಡ ಚಿಕ್ಕಮಗಳೂರು ಶಿವಮೊಗ್ಗ ಕ್ಕೆ ಮಾಹಿತಿ ರವಾನಿಸಿದ್ದಾರೆ. ಘಟನೆಯಲ್ಲಿ ಗಾಯಕ್ಕೊಳಗಾದ ಅಜ್ಜಿಗೆ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ; ಅಮ್ಮ, ತಂಗಿ, ಸಹೋದರರ ಮೃತದೇಹ ಕಂಡು ಕಣ್ಣೀರಿಟ್ಟ ಪುತ್ರ

https://newsfirstlive.com/wp-content/uploads/2023/11/Udupi-Murder-1.jpg

Load More