newsfirstkannada.com

×

ಅದ್ಧೂರಿಯಾಗಿ ಜರುಗಿದ ಪುತ್ತಿಗೆ ಶ್ರೀಗಳ ಪರ್ಯಾಯ; ಶ್ರೀಗಳ ದರ್ಬಾರ್​​ನಲ್ಲಿ ದೇಶ, ವಿದೇಶದ ಗಣ್ಯರು ಭಾಗಿ

Share :

Published January 18, 2024 at 6:46am

    ಪಲ್ಲಕ್ಕಿಯಲ್ಲಿ ಸಾಗಿ ಬಂದ ಪುತ್ತಿಗೆ ಸುಗುಣೇಂದ್ರ ತೀರ್ಥರು

    ಎರಡು ವರ್ಷಗಳ ಕಾಲ ಶ್ರೀಕೃಷ್ಣನ ಪೂಜಾ ಕೈಂಕರ್ಯ

    ರಾಜಾಂಗಣದಲ್ಲಿ ಅರಮನೆ ಮಾದರಿಯಲ್ಲಿ ದರ್ಬಾರ್​​​​

ಎರಡು ವರ್ಷಕ್ಕೊಮ್ಮೆ ನಡೆಯುವ ಉಡುಪಿ ಪರ್ಯಾಯ ಮಹೋತ್ಸವ ಸಂಪನ್ನಗೊಂಡಿದೆ. ಪುತ್ತಿಗೆ ಸುಗುಣೇಂದ್ರ ತೀರ್ಥರಿಗೆ ಕೃಷ್ಣನ ಪೂಜಾಧಿಕಾರ ಹಸ್ತಾಂತರಗೊಂಡಿದೆ. ಜೋಡುಕಟ್ಟೆಯಿಂದ ಕೃಷ್ಣಮಠದವರೆಗೆ ಪಲ್ಲಕ್ಕಿ ಮೂಲಕ ಮೆರವಣಿಗೆಯಲ್ಲಿ ಸಾಗಿಬಂದ ಸುಗುಣೇಂದ್ರ ತೀರ್ಥರು ಕನಕನ ಕಿಂಡಿ ಮೂಲಕ ಕೃಷ್ಣನ ದರ್ಶನ ಪಡೆದ್ರು. ಬಳಿಕ ಅನಂತೇಶ್ವರ ಚಂದ್ರ ಮೌಳೇಶ್ವರ ದೇವರ ದರ್ಶನ ಪಡೆದು ಕೀಲಿ ಕೈ ಸಟ್ಟುಗ ಹೀಗೆ ಧಾರ್ಮಿಕ ಕೈಂಕರ್ಯ ಮೂಲಕ ಪೂಜಾಧಿಕಾರ ಪಡೆದ್ರು.

ಬಡಗುಮಾಳಿಗೆಯಲ್ಲಿ ಮೂಲ ಸ್ವರೂಪದ ಅರಳು ಗದ್ದುಗೆ ಮೂಲಕ ದರ್ಬಾರ್ ನಡೆಯಿತು. ಆ ಬಳಿಕ ರಾಜಾಂಗಣದಲ್ಲಿ ಸಾರ್ವಜನಿಕ ದರ್ಬಾರ್ ಮೂಲಕ ಪರ್ಯಾಯ ಧಾರ್ಮಿಕ ವಿಧಿವಿಧಾನ ಸಂಪನ್ನಗೊಂಡಿತು. ರಾಜಾಂಗಣದಲ್ಲಿ ಅರಮನೆ ಮಾದರಿಯಲ್ಲಿ ತಯಾರು ಮಾಡಿದ ಸಾರ್ವಜನಿಕ ದರ್ಬಾರ್​ನಲ್ಲಿ ವಿರಾಜಮಾನರಾದ ಸುಗುಣೇಂದ್ರ ತೀರ್ಥರು ಶಿಷ್ಯ ಸುಶ್ರೀಂದ್ರ ತೀರ್ಥರು ದರ್ಬಾರ್ ನಡೆಸಿದ್ರು. ದರ್ಬಾರ್​​ನಲ್ಲಿ ದೇಶ, ವಿದೇಶದ ಗಣ್ಯರು ಭಾಗಿ ಆಗಿ ಗಮನ ಸೆಳೆದ್ರು.

ಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ವೇದಿಕೆಯಲ್ಲಿದ್ರು. ಇನ್ನು, ಆಸ್ಟ್ರೇಲಿಯಾದ ಮಾಜಿ ಸಚಿವ ಲ್ಯೂಕ್ ಡನೆಲನ್, ಅಮೆರಿಕಾದ ವಿಶ್ವ ಧಾರ್ಮಿಕ ಮತ್ತು ಅಧ್ಯಾತ್ಮಿಕ ಸಂಸ್ಥೆ ಉಪಾಧ್ಯಕ್ಷ ಡಾ. ವಿಲಿಯಂ ವೆಂಡ್ಲೆ, ಜಪಾನಿನ ರಿಶೋ ಕೋಶಿ ಕ್ಯಾಯಾದ ಸಂಘಟನೆಯ ನಿಯೋಜಿತ ಅಧ್ಯಕ್ಷೆ ರೆವರೆಂಡ್ ಕೋಶೋ ನಿವಾನೋ ದರ್ಬಾರ್​ನಲ್ಲಿ ಗಮ‌ನ ಸೆಳೆದ್ರು.

ಒಟ್ಟಾರೆ, 2 ವರ್ಷಗಳ ಪರ್ಯಾಯ ಅದ್ದೂರಿಯಾಗಿ ಸಂಪನ್ನಗೊಂಡು ಮೊದಲ ಮಹಾಪೂಜೆ ಸುಗುಣೇಂದ್ರ ತೀರ್ಥರು ನಡೆಸಿದ್ರೆ, ಮೊದಲ ಬಾರಿ ಪರ್ಯಾಯ ಮೆರವಣಿಗೆ ಹಾಗೂ ದರ್ಬಾರ್​ನಲ್ಲಿ ಪುತ್ತಿಗೆ ಯತಿ ಶಿಷ್ಯರೊಂದಿಗೆ ಏಕಾಂಗಿ ಆಗಿ ನಡೆಸಿರುವುದು ಬಿನ್ನಮತ ಇರೋದಂತು ಖಚಿತವಾಗಿದೆ.. ಮುಂದಿನ ದಿನಗಳಲ್ಲಿ ಪರ್ಯಾಯ ಶ್ರೀಗಳು ಭಿನ್ನಮತ ಹೇಗೆ ಶಮನ ಮಾಡ್ತಾರೆ ಕಾದು ನೋಡಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅದ್ಧೂರಿಯಾಗಿ ಜರುಗಿದ ಪುತ್ತಿಗೆ ಶ್ರೀಗಳ ಪರ್ಯಾಯ; ಶ್ರೀಗಳ ದರ್ಬಾರ್​​ನಲ್ಲಿ ದೇಶ, ವಿದೇಶದ ಗಣ್ಯರು ಭಾಗಿ

https://newsfirstlive.com/wp-content/uploads/2024/01/Udupi-3.jpg

Load More