/newsfirstlive-kannada/media/post_attachments/wp-content/uploads/2024/07/1.jpg)
ಉಡುಪಿ: ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ವರುಣನ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತವಾಗಿದೆ.
ಉಡುಪಿಯಲ್ಲಂತೂ ರಣ ಮಳೆಯಿಂದಾಗಿ ನೆರೆ ಉಂಟಾಗಿದೆ. ಈಗಾಗಲೇ ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ರಕ್ಷಣಾ ತಂಡ ಕಾರ್ಯಪ್ರವೃತ್ತರಾಗಿದ್ದು, ಸುಮಾರು 20 ಜನರನ್ನು ರಕ್ಷಣೆ ಮಾಡಿದೆ.
ಕಲ್ಸಂಕ, ಬೈಲಕೆರೆ, ಮಠದಬೆಟ್ಟು ವ್ಯಾಪ್ತಿ, ಗುಂಡಿಬೈಲು, ಪಾಡಿಗಾರು, ಸಗ್ರಿ ವ್ಯಾಪ್ತಿಯಿಂದ ಜನರನ್ನು ರಕ್ಷಣೆ ಮಾಡಲಾಗಿದೆ. ಅಗ್ನಿಶಾಮಕ ದಳದ ಬೋಟ್ ಟ್ಯೂಬ್ ಬಳಸಿ ಜನರ ರಕ್ಷಿಸುವ ಮಹಾತ್ಕಾರ್ಯ ಮಾಡಿದ್ದಾರೆ.
ಉಡುಪಿ ಕೆಲವೆಡೆ ಮಳೆಯಿಂದ ಮನೆಗಳು ಜಲಾವೃತವಾಗಿವೆ. ಗುಂಡಿಬೈಲು ಸಮೀಪ ಐದಾರು ಮನೆಯವರ ರಕ್ಷಣೆ ಮಾಡಲಾಗಿದೆ.
ಅಗ್ನಿಶಾಮಕದಳ ಒಂದು ಮನೆಯ ಮೂವರನ್ನು ರಕ್ಷಣೆ ಮಾಡಿದೆ. ಇನ್ನು ಪಾಡಿಗಾರು ಸಮೀಪ ನಾಲ್ಕು ಮನೆಗಳಿಂದ ಜನರನ್ನು ಶಿಫ್ಟ್ ಮಾಡಲಾಗಿದೆ.ಪೊಲೀಸ್, ಅಗ್ನಿಶಾಮಕದಳ, ಸಾರ್ವಜನಿಕರಿಂದ ರಕ್ಷಣಾ ಕಾರ್ಯ ಮುಂದುವರೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ