newsfirstkannada.com

ರಾಮರಾಜ್ಯದ ಕನಸು.. ನೊಂದ ವೃದ್ಧನಿಗೆ ಮನೆ ನಿರ್ಮಿಸಿಕೊಟ್ಟು ಬೆಳಕಾದ 30 ರಾಮ ಭಕ್ತರು..!

Share :

Published January 24, 2024 at 10:26am

    ಹೊಸ ಮನೆ ಪಡೆದುಕೊಂಡು ತುಂಬಾ ಖುಷಿ ವ್ಯಕ್ತಪಡಿಸಿದ ವೃದ್ಧ

    ರಾಮರಾಜ್ಯದ ಕನಸು ನನಸು ಮಾಡುವ ಫಲದ ಸುಂದರ ಮನೆ

    ರಾಮನ ಪ್ರಾಣ ಪ್ರತಿಷ್ಠೆ ವೇಳೆ ವೃದ್ಧನ ಕುಟುಂಬಕ್ಕೆ ಮನೆ ಹಸ್ತಾಂತರ

ಉಡುಪಿ: ರಾಮನಿಗೆ ಮಂದಿರ ನಿರ್ಮಾಣವಾಗಿದೆ. ರಾಮರಾಜ್ಯ ಕನಸ್ಸು ನನಸು ಮಾಡುವ ಪ್ರಯತ್ನ ಮಾಡಬೇಕು. ನೊಂದವರ ಪಾಲಿಗೆ ಬೆಳಕು ಆಗಬೇಕು ಅಂತ ಉಡುಪಿ ಪೇಜಾವರ ಮಠ ವಿಶ್ವಪ್ರಸನ್ನ ತೀರ್ಥರು ಕರೆ ನೀಡಿದ್ದರು. ಈ ಕರೆಗೆ ಓಗೋಟ್ಟ ಉಡುಪಿಯ ಮೂಡುತೋನ್ಸೆಯ 30 ರಾಮಭಕ್ತರ ತಂಡ ಕಾರ್ಯ ಪ್ರವೃತ್ತವಾಗಿದೆ. ಉಡುಪಿ ಶಾಸಕ ಯಶ್​ಪಾಲ್ ಸುವರ್ಣ ನೇತೃತ್ವದಲ್ಲಿ ವೃದ್ಧ ಕೂಲಿ ಕಾರ್ಮಿಕನಿಗೆ ಸುಸಜ್ಜಿತ ಮನೆ ನಿರ್ಮಿಸಿ ಕೊಟ್ಟಿದೆ.

ರಾಮ ರಾಜ್ಯದ ಕನಸು ನನಸು ಮಾಡುವ ಪ್ರಯತ್ನದ ಫಲವಾಗಿಯೇ ಈ ಸುಂದರ ಮನೆ ತಲೆ ಎತ್ತಿ ನಿಂತಿದೆ. 10 ಲಕ್ಷ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಮನೆ ನಿರ್ಮಾಣ ಮಾಡಲಾಗಿದೆ. ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆ ಸಮಯದಲ್ಲಿ ಮನೆಯನ್ನು ವೃದ್ಧ ಕೂಲಿ ಕಾರ್ಮಿಕ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.

ಮನೆಯನ್ನು ಪಡೆದುಕೊಂಡಿರುವ ವೃದ್ಧ ಹಾಗೂ ಅವರ ಕುಟುಂಬಸ್ಥರು ತುಂಬಾ ಖುಸಿ ವ್ಯಕ್ತಪಡಿಸಿದ್ದಾರೆ. ಟಿವಿ, ಲೈಟ್ಸ್​ ಸೇರಿದಂತೆ ಮನೆಗೆ ಎಲ್ಲವನ್ನು ನೀಡಲಾಗಿದೆ. ರಾಮಲಲ್ಲಾ ಪ್ರತಿಷ್ಠಾಪನೆ ವೇಳೆ ಮನೆ ಅವರಿಗೆ ನೀಡಲಾಗಿದೆ. ಮನೆಯ ಎಲ್ಲ ಕೆಲಸವನ್ನು 30 ರಾಮಭಕ್ತರು ಮಾಡಿದ್ದೇವೆ. ಲೇಬರಲ್ ಚಾರ್ಜಸ್ ತೆಗೆದುಕೊಂಡಿಲ್ಲ ಎಂದು ರಾಮಭಕ್ತ ನಾಗೇಶ್ ಅವರು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಮರಾಜ್ಯದ ಕನಸು.. ನೊಂದ ವೃದ್ಧನಿಗೆ ಮನೆ ನಿರ್ಮಿಸಿಕೊಟ್ಟು ಬೆಳಕಾದ 30 ರಾಮ ಭಕ್ತರು..!

https://newsfirstlive.com/wp-content/uploads/2024/01/UDP_HOUSE.jpg

Load More