Advertisment

ಪತಿಯನ್ನ ಪತ್ನಿ ಮುಗಿಸಿದ ಕೇಸ್​; ಉಡುಪಿಯ ಈ ಲ್ಯಾಬ್​ನಿಂದ ವಿಷ ತಂದು ಕೊಟ್ಟಿದ್ದ ಪ್ರಿಯಕರ.. ಬಾಟಲಿ ಎಲ್ಲಿ?

author-image
Bheemappa
Updated On
ಪತಿಯನ್ನ ಪತ್ನಿ ಮುಗಿಸಿದ ಕೇಸ್​; ಉಡುಪಿಯ ಈ ಲ್ಯಾಬ್​ನಿಂದ ವಿಷ ತಂದು ಕೊಟ್ಟಿದ್ದ ಪ್ರಿಯಕರ.. ಬಾಟಲಿ ಎಲ್ಲಿ?
Advertisment
  • ಬಾಲಕೃಷ್ಣ ಜೀವ ತೆಗೆಯಲು ಬಳಸಿದ್ದು ಯಾವ ವಿಷ ಗೊತ್ತಾ?
  • ಮಹತ್ವದ ಸಾಕ್ಷ್ಯಗಳನ್ನ ಸಂಗ್ರಹಿಸಲು ಮುಂದಾದ ಪೊಲೀಸರು
  • ಆ ಜಾಗದಲ್ಲಿ ಎಸೆದಿದ್ದ ವಿಷದ ಬಾಟಲಿ ಪೊಲೀಸರಿಗೆ ಸಿಕ್ಕಿತಾ?

ಪ್ರಿಯಕರನ ಜೊತೆ ಪತಿಯನ್ನ ಪತ್ನಿ ಮುಗಿಸಿದ ಪ್ರಕರಣದಲ್ಲಿ ಮಹಜರು ಪ್ರಕ್ರಿಯೆ 3ನೇ ದಿನಕ್ಕೆ ತಲುಪಿದ್ದು ಮಹತ್ವದ ಸಾಕ್ಷ್ಯ ಸಂಗ್ರಹಕ್ಕೆ ಪೊಲೀಸರು ಮುಂದಾಗಿದ್ದಾರೆ‌. ಆರೋಪಿ ದಿಲೀಪ್ ಹೆಗ್ಡೆ ಜೊತೆ ಅಜೆಕಾರು ಪೊಲೀಸರು ಘಟನಾ ಸ್ಥಳ ಸೇರಿದಂತೆ ಬಹಳಷ್ಟು ಸ್ಥಳಗಳಲ್ಲಿ ಸಾಕ್ಷಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

Advertisment

ಜೀವ ತೆಗೆಯಲು ಬಳಸಿದ್ದು ‘ಆರ್ಸೆನಿಕ್ ಟ್ರೈಆಕ್ಸೈಡ್’ ವಿಷ!

ಪ್ರೀತಿ ಮದುರ, ಪ್ರಿಯಕರ ಅಮರ, ಗಂಡ ಹರೋಹರ. ಉಡುಪಿಯಲ್ಲಿ ನಡೆದ ಬಾಲಕೃಷ್ಣ ಪೂಜಾರಿ ಪ್ರಕರಣದಲ್ಲಿ ಸ್ಲೋ ಪಾಯ್ಸನ್ ಕೊಟ್ಟು ಜೀವ ತೆಗೆಯಲು ವಿಫಲವಾದ ಹಿನ್ನೆಲೆ ಉಸಿರುಗಟ್ಟಿಸಿ ಕೊಲೆ ಮಾಡಿರೋದನ್ನ ಸ್ವತಃ ಮುಖ್ಯ ಆರೋಪಿ ಪ್ರತಿಮಾ ಒಪ್ಪಿಕೊಂಡಿದ್ದಳು. ಈ ಸಂಬಂಧ, ಆ ಪಾಯಿಸನ್ ತಂದುಕೊಟ್ಟ ದಿಲೀಪ್ ಹೆಗ್ಡೆ ವಿಚಾರಣೆಯಲ್ಲಿ ಆರ್ಸೆನಿಕ್ ಟ್ರೈಆಕ್ಸೈಡ್ ಅನ್ನ ಉಡುಪಿಯ ರಮನ್ಸ್ ಲ್ಯಾಬ್​ನಿಂದ ತಂದುಕೊಟ್ಟಿರುವುದಾಗಿ ಒಪ್ಪಿಕೊಂಡಿದ್ದಾನೆ.

publive-image

ಹೀಗಾಗಿ ಬಾಲಕೃಷ್ಣ ಪೂಜಾರಿ ದೇಹದಲ್ಲಿ ಆರ್ಸೆನಿಕ್ ಟ್ರೈಆಕ್ಸೈಡ್ ಅಂಶ ಸಾಕ್ಷ್ಯ ಪತ್ತೆ ಹಚ್ಚಲು ಬಾಲಕೃಷ್ಣ ಪೂಜಾರಿಯ ಮೂಳೆಯನ್ನ ಸಂಗ್ರಹಿಸಿದ್ದಾರೆ ಪೊಲೀಸರು. ಮೃತರ ತಂದೆ ಸಂಜೀವ ಸಾಲ್ಯಾನ್ ಒಪ್ಪಿಗೆ ಪಡೆದು ಸಂಗ್ರಹ ಮಾಡಲಾಗಿದೆ. ಇನ್ನು ಮೃತರ ಮೂಳೆಯಲ್ಲಿ ವಿಷದ ರಾಸಾಯನಿಕ ಅಂಶಗಳಿರುವ ಸಾಧ್ಯತೆ ಇರುವುದರಿಂದ ಮನೆಯ ಪಕ್ಕದಲ್ಲಿರುವ ಸ್ಥಳದಲ್ಲಿ ಉತ್ತರಕ್ರಿಯೆ ನಡೆಸಿದ ಜಾಗದಿಂದ 2 ಮೂಳೆ ತುಂಡುಗಳ ಸಂಗ್ರಹ ಮಾಡಲಾಗಿದೆ.

ಗ್ರಾಮದ ಅಯ್ಯಪ್ಪ ನಗರ ಸುತ್ತಲೂ ಹುಡುಕಾಟ

ಇನ್ನೂ, ಆರೋಪಿ ದಿಲೀಪ್ ಹೆಗ್ಡೆ.. ಪ್ರತಿಮಾಗೆ ಆಕೆ ನಡೆಸುತ್ತಿದ್ದ ಪ್ರತಿಮಾಸ್ ಬ್ಯೂಟಿ ಲಾಂಜ್ ಎಂಬ ಬ್ಯೂಟಿ ಪಾರ್ಲರ್ ಬಳಿ ವಿಷದ ಬಾಟಲಿ ನೀಡಿದ್ದ ಎನ್ನಲಾಗಿದೆ. ಈ ಹಿನ್ನೆಲೆ ಪಾರ್ಲರ್ ಸುತ್ತಮುತ್ತ ಹಾಗೂ ಕುಕ್ಕುಂದೂರು ಗ್ರಾಮದ ಅಯ್ಯಪ್ಪ ನಗರ ಸುತ್ತಲೂ ಹುಡುಕಾಟ ನಡೆಸಿ ಮಹಜರು ಪ್ರಕಿಯೆ ನಡೆಸಲಾಗಿದೆ. ಎಷ್ಟು ಹುಡುಕಾಟ ನಡೆಸಿದರೂ ವಿಷದ ಬಾಟಲಿ ಸಿಗದ ಹಿನ್ನೆಲೆ ಪೋಲೀಸರು ವಾಪಸ್ಸಾಗಿದ್ದಾರೆ.

Advertisment

ಪ್ರಕರಣ ದಿನೇ ದಿನೇ ಟ್ವಿಸ್ಟ್ ಮೇಲೆ ಟ್ವಿಸ್ಟ್ ಅನ್ನ ಪಡೆದುಕೊಳ್ಳುತ್ತಿದೆ. ಈಗಾಗಲೇ ಪ್ರತಿಮಾ ನ್ಯಾಯಾಂಗ ಬಂಧನದಲ್ಲಿದ್ದರೆ. ಇತ್ತ ದಿಲೀಪ್ ಹೆಗ್ಡೆ ಪೊಲೀಸ್ ಕಸ್ಟಡಿ ಮುಗಿದಿದ್ದು, ನವೆಂಬರ್‌ 7ರ ವರೆಗೆ ನ್ಯಾಯಾಂಗ ಬಂಧನಕ್ಕೆ ನ್ಯಾಯಾಧೀಶರು ಆದೇಶ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment