newsfirstkannada.com

×

ಸ್ಲೋ ಪಾಯಿಸನ್‌ ಕೊಟ್ಟರೂ ಸಾಯಲಿಲ್ಲ.. ಬದುಕಿದ್ದ ಗಂಡನ ಉಸಿರು ನಿಲ್ಲಿಸಿದ ಪಾಪಿ ಹೆಂಡತಿ; ಕಂಪ್ಲೀಟ್ ಸ್ಟೋರಿ ಇಲ್ಲಿದೆ!

Share :

Published October 26, 2024 at 8:27pm

    ಪ್ರತಿನಿತ್ಯ ಪತಿಗೆ ಊಟದಲ್ಲಿ ವಿಷ ಸೇರಿಸಿ ಕೊಡುತ್ತಿದ್ದಳು ಈಕೆ

    ಗಂಡನನ್ನ 6-7 ಆಸ್ಪತ್ರೆಗೆ ದಾಖಲಿಸಿ ಡಿಸ್ಚಾರ್ಜ್ ಮಾಡಿಸಿದ್ದಳು

    ಗಂಡನ ಎದೆ ಮೇಲೆ ಕೂತು ಕೈ-ಕಾಲು ಹಿಡಿದು ಉಸಿರು ನಿಲ್ಲಿಸಿದ ಕ್ರೂರಿ

ಸುರಸುಂದರಾಂಗ, ಸಕಲಗುಣ ಸಂಪನ್ನ ಪತಿ.. ಬೇಕಾದಷ್ಟು ಆಸ್ತಿ ಇದ್ರೂ ಪತ್ನಿಯೊಬ್ಳು ಪರಸಂಗದ ಆಸೆಗೆ ಬಿದ್ದು ಪತಿಯ ಜೀವನವನ್ನೇ ನಿಲ್ಲಿಸಿದ್ದಾಳೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ಖತರ್ನಾಕ್ ಸಂಚು ಮಾಡಿ ಕೊನೆಗೂ ಸಿಕ್ಕಿಬಿದ್ದಿದ್ದಾಳೆ. ಆದ್ರೆ ಆಕೆ ಪೊಲೀಸರ ಮುಂದೆ ಹೇಳಿದ್ದನ್ನು ಕೇಳಿ ಅವರೇ ದಂಗಾಗಿದ್ದಾರೆ.

ಇದನ್ನೂ ಓದಿ: ಗಂಡನ ಎದೆ ಮೇಲೆ ಕೂತು ಕೊ* ಮಾಡಿದ್ದ ಪ್ರತಿಮಾ; ರೀಲ್ಸ್​ ರಾಣಿಯ ಹೇಳಿಕೆ ಕೇಳಿ ಬೆಚ್ಚಿಬಿದ್ದ ಉಡುಪಿ ಪೊಲೀಸರು 

ಗಂಡನ ಎದೆಯ ಮೇಲೆ ಎರಗಿದ್ಲು ಪಾಯಿಸನ್ ಪತ್ನಿ
ಕೈ ಕಾಲು ಹಿಡಿದು, ಪತಿಯ ಉಸಿರು ನಿಲ್ಲಿಸಿದ್ದ ಕಿರಾತಕಿ
ಉಡುಪಿಯ ಕಾರ್ಕಳದ ಅಜೆಕಾರುವಿನ ಮರ್ಡರ್‌ ಸ್ಟೋರಿ ಕರಾವಳಿಯನ್ನ ಮಾತ್ರವಲ್ಲ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ರೀಲ್ಸ್ ರಾಣಿ, ಪಾರ್ಲರ್ ಪ್ರತಿಮಾ ಗಂಡನನ್ನ ಕೊಂದಿದ್ದೇ ಎಲ್ಲೆಡೆ ಚರ್ಚೆಯಾಗ್ತಿದೆ. ಆದ್ರೆ ಪತಿ ಬಾಲಕೃಷ್ಣ ಪೂಜಾರಿಯನ್ನ ಕೊಂದಿದ್ದೇಗೆ ಅನ್ನೋದನ್ನ ಆಕೆಯೇ ಪೊಲೀಸರ ವಿಚಾರಣೆಯಲ್ಲಿ ತಪ್ಪೊಪ್ಪಿಕೊಂಡಿದ್ದಾಳೆ. ಜೊತೆಗೆ ಗಂಡನ ಕೊಲ್ಲಲು ತಾನು ಏನೇನೂ ಮಾಡಿದೆ ಅನ್ನೋದನ್ನ ವಿವರಿಸಿದ್ದಾಳೆ. ಪತ್ನಿ ಪ್ರತಿಮಾ ಪತಿ ಬಾಲಕೃಷ್ಣ ಪೂಜಾರಿಯನ್ನ ಕೊಲ್ಲಲು ಖತರ್ನಾಕ್ ಪ್ಲಾನ್ ಮಾಡಿಕೊಂಡಿದ್ದಳು. ನಿತ್ಯವೂ ಸ್ಲೋ ಪಾಯ್ಸನ್ ಕೊಟ್ಟು ಸಾಯಿಸೋಣ ಅಂತ ಡಿಸೈಡ್ ಮಾಡಿದವಳಿಗೆ ಪಾಯ್ಸನ್‌ ಸಪ್ಲೈ ಮಾಡಿದವನು ಬಾಯ್‌ಫ್ರೆಂಡ್‌ ದಿಲೀಪ್ ಹೆಗ್ಡೆ.

ಗಂಡನ ಎದೆಯ ಮೇಲೆ ಎರಗಿದ್ಲು ಪಾಯಿಸನ್ ಪತ್ನಿ!
ಕೈ ಕಾಲು ಹಿಡಿದು, ಪತಿಯ ಉಸಿರು ನಿಲ್ಲಿಸಿದ್ದ ಕಿರಾತಕಿ!
ಒಂದೇ ಬಾರಿ ಕೊಂದರೇ ಡೌಟ್ ಬರುತ್ತೆ ಅಂತ ಹಂತ ಹಂತವಾಗಿ ವಿಷವುಣಿಸಿದರೆ ಅಂಗಾಂಗಳಿಗೆ ಡ್ಯಾಮೇಜ್ ಆಗಿ, ಗಂಡ ಸಾಯುತ್ತಾನೆ. ನಂತರ ನ್ಯಾಚುರಲ್ ಡೆತ್ ಅಂತ ಬಿಂಬಿಸೋಣ ಅಂತಾ ಪತ್ನಿ ಪ್ರತಿಮಾ ದುರಾಲೋಚನೆ ಮಾಡಿದ್ದಳು. ಆಕೆ ಅಂದುಕೊಂಡಂತೆ ವಿಷದಿಂದ ಪತಿ ಬಾಲಕೃಷ್ಣ ಪೂಜಾರ್‌ ಕಿಡ್ನಿ ಮತ್ತು ಲಿವರ್ ಡ್ಯಾಮೇಜ್ ಆಗಿತ್ತು. ದೇಹದ ನರಗಳು ಸಂವೇದನೆ ಕಳೆದುಕೊಂಡಿದ್ದವು. ಬಾಲಕೃಷ್ಣ ಪೂಜಾರಿ ಕಳೆದ 25 ದಿನಗಳಿಂದ ಜ್ವರ, ವಾಂತಿ ಅಂತ ಬಳಲುತ್ತಿದ್ರು. ಗಂಡನಿಗೆ ಕಾಮಾಲೆ ರೋಗ ಬಂದಿದೆ ಅಂತ ಇದೇ ಪ್ರತಿಮಾ ಹಲವು ಆಸ್ಪತ್ರೆಗಳಿಗೆ ತಿರುಗಾಡಿದ್ಲು. ಮಣಿಪಾಲ ಕೆಎಂಸಿ, ಬೆಂಗಳೂರಿನ ನಿಮಾನ್ಸ್, ವಿಕ್ಟೋರಿಯಾ, ಮಂಗಳೂರಿನ ವೆನ್​ಲಾಕ್ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಕೂಡ ನೀಡಲಾಗಿತ್ತು. ಒಟ್ಟು 6 ಆಸ್ಪತ್ರೆಗಳಲ್ಲಿ ಗಂಡನಿಗೆ ಈಕೆ ಚಿಕಿತ್ಸೆ ಕೊಡಿಸಿದ್ದಳು. ಆದ್ರೆ, ಆಕೆಯ ಪ್ಲಾನ್ ವರ್ಕ್ ಆಗ್ತಿರಲಿಲ್ಲ. ಆ ನಂತರವೇ ಆಕೆಯೇ ಬಾಯ್‌ಫ್ರೆಂಡ್ ಸಹಾಯದೊಂದಿಗೆ, ಗಂಡನನ್ನ ಕೊಂದಿದ್ದಾಳೆ. ಅಕ್ಟೋಬರ್ 20ರಂದು ಬಾಲಕೃಷ್ಣ ಮನಯೆಲ್ಲಿಯೇ ಸಾವನ್ನಪ್ಪಿದ್ದಾರೆ. ಆ ಬಳಿಕ ಸಂಬಂಧಿಕರಿಗೆ, ಅತ್ತೆ ಮಾವನಿಗೆ ಕರೆ ಮಾಡಿ ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆಂದು ಕಥೆ ಕಟ್ಟಿದ್ದಳು.

ಬಾಲಕೃಷ್ಣ ಸಾವಿನಿಂದ ಸಹೋದರರಿಗೆ ಆಘಾತವಾಗಿದೆ. ಸಂಸಾರಕ್ಕಾಗಿ ಸರ್ವಸ್ವವನ್ನ ತ್ಯಾಗ ಮಾಡಿದ್ದ ನಮ್ಮ ಸಹೋದರನಿಗೆ ಹೀಗಾಯ್ತಲ್ಲ ಅಂತಾ ಕೊರಗುತ್ತಿದ್ದಾರೆ. ಬಾಲಕೃಷ್ಣ ಪೂಜಾರಿ ಮೃತದೇಹ ಪೋಸ್ಟ್ ಮಾರ್ಟಂ ರಿಪೋರ್ಟ್ ಇನ್ನೂ ಬಂದಿಲ್ಲ. ಅದಕ್ಕೂ ಮುಂಚೆಯೇ ಪತ್ನಿ ಪ್ರತಿಮಾ ಪೊಲೀಸರ ಮುಂದೆ ಎಲ್ಲವನ್ನೂ ಕಕ್ಕಿದ್ದಾರೆ. ಆದ್ರೆ, ಬಾಯ್‌ಫ್ರೆಂಡ್‌ ನೀಡುತ್ತಿದ್ದ ಪಾಯ್ಸನ್‌ನ ಮೂಲ ಇನ್ನೂ ತಿಳಿದು ಬಂದಿಲ್ಲ. ಪೊಲೀಸರು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸ್ತಿದ್ದಾರೆ. ಗಂಡ ಕುಡುಕನೋ, ದುರುಳನೋ ಆಗಿದ್ರೆ ಆ ಮಾತು ಬೇರೆ, ಆದ್ರೆ ಪರಸಂಗಕ್ಕಾಗಿ ಚಿನ್ನದಂತ ಗಂಡನಿಗೆ ಚಟ್ಟ ಕಟ್ಟಿದ ಈ ಲೇಡಿಗೆ ಜನ ಛೀ ಥೂ ಅಂತಿದ್ದಾರೆ. ಸದ್ಯ ಪ್ರತಿಮಾ ಹಾಗೂ ಪ್ರಿಯಕರ ಲಾಕ್ ಆಗಿದ್ದಾರೆ. ಇಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸೋದೇ ಪ್ರತಿಮಾ ಸಹೋದರ ಸಂದೀಪ್‌. ದೇವರಂಥಾ ಭಾವನನ್ನ ಅಕ್ಕನೇ ಕೊಂದಿರಬಹುದು ಅನ್ನೋ ಸಣ್ಣ ಸಂಶಯದಿಂದಲೇ ಕೊಲೆಗಾತಿ ಸಿಕ್ಕಿಬಿದ್ದಿದ್ದಾರೆ.

ಇದನ್ನೂ ಓದಿ: ಮಾಜಿ ಸಚಿವರ ಜೊತೆ ಸೆಕ್ಸ್‌ ಚಾಟ್‌, ಹನಿಟ್ರ್ಯಾಪ್ ಆರೋಪ; ಕಾಂಗ್ರೆಸ್ ನಾಯಕಿ ಮಂಜುಳಾ ಬಂಧನ; ಯಾರಿವರು? 

ಸ್ಲೋ ಪಾಯಿಸನ್ ಸುಂದರಿ ಸತ್ಯ

ಪ್ರಿಯಕರ ತಂದು ಕೊಟ್ಟ ವಿಷವನ್ನು ಪತಿಗೆ ಕೊಡುತ್ತಿದ್ದ ಪ್ರತಿಮಾ
ಪ್ರತಿನಿತ್ಯ ಪತಿಗೆ ಊಟದಲ್ಲಿ ವಿಷ ಸೇರಿಸಿ ಕೊಡುತ್ತಿದ್ದಳು
ಪತಿ ಅನಾರೋಗ್ಯಕ್ಕೀಡಾದಾಗ ಆಸ್ಪತ್ರೆಗಳಿಗೆ ಹೋಗುತ್ತಿದ್ದಳು
ವರದಿ ಬರುವ ಮೊದಲೇ ಬೇರೆ ಆಸ್ಪತ್ರೆಗೆ ಶಿಫ್ಟ್ ಮಾಡುತ್ತಿದ್ದಳು
ಒಟ್ಟು 6-7 ಆಸ್ಪತ್ರೆಗೆ ದಾಖಲಿಸಿ ಡಿಸ್ಚಾರ್ಜ್ ಮಾಡಿಸಿದ್ದಳು
ಸಾವಿನ ಕದ ತಟ್ಟಿ ಬದುಕಿದ್ದ ಪತಿ ಬಾಲಕೃಷ್ಣ ಪೂಜಾರಿ
ವಿಷದಿಂದ ಪಾರಾದ ಹಿನ್ನೆಲೆ ಉಸಿರುಗಟ್ಟಿಸಿ ಕೊಲೆಗೆ ಪ್ಲಾನ್
ಅ.20ರಂದು ದಿಲೀಪ್ ಶೌಚಾಲಯದಲ್ಲಿ ಅಡಗಿ ಸಂಚು
ದಿಲೀಪ್ ಹಿಂದಿನಿಂದ ಬೆಡ್​ಶೀಟ್ ತಂದು ಮುಖಕ್ಕೆ ಒತ್ತಿದ್ದ
ಗಂಡನ ಎದೆ ಮೇಲೆ ಕೂತು ಕೈ-ಕಾಲು ಹಿಡಿದಿದ್ದ ಪ್ರತಿಮಾ
ಉಸಿರುಗಟ್ಟಿ ಕೆಲವೇ ನಿಮಿಷದಲ್ಲಿ ಪ್ರಾಣ ಬಿಟ್ಟಿದ್ದ ಬಾಲಕೃಷ್ಣ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸ್ಲೋ ಪಾಯಿಸನ್‌ ಕೊಟ್ಟರೂ ಸಾಯಲಿಲ್ಲ.. ಬದುಕಿದ್ದ ಗಂಡನ ಉಸಿರು ನಿಲ್ಲಿಸಿದ ಪಾಪಿ ಹೆಂಡತಿ; ಕಂಪ್ಲೀಟ್ ಸ್ಟೋರಿ ಇಲ್ಲಿದೆ!

https://newsfirstlive.com/wp-content/uploads/2024/10/Udupi-Wife-Arrest-1.jpg

Load More