/newsfirstlive-kannada/media/post_attachments/wp-content/uploads/2024/05/Supreme-Court.jpg)
ನವದೆಹಲಿ: ಪದವಿಪೂರ್ವ ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕಾಗಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆ ನೀಟ್. ಈ ವರ್ಷ ನಡೆದ ನೀಟ್ ಪರೀಕ್ಷೆಯಲ್ಲಿ ಭಾರೀ ಅಕ್ರಮ ನಡೆದಿರುವುದು ಇಡೀ ದೇಶಾದ್ಯಂತ ಭಾರೀ ಸದ್ದು ಮಾಡುತ್ತಿದ್ದು, ಕೇಸ್ ಸುಪ್ರೀಂ ಕೋರ್ಟ್ನಲ್ಲಿದೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತು ಈಗಾಗಲೇ ಕೇಂದ್ರ ಸರ್ಕಾರ ತನ್ನ ನಿಲುವು ಸುಪ್ರೀಂಕೋರ್ಟ್ಗೆ ತಿಳಿಸಿದ್ದು, ಪರೀಕ್ಷೆ ರದ್ದುಗೊಳಿಸೋ ಉದ್ದೇಶವಿಲ್ಲ ಎಂದು ಹೇಳಿದೆ. ಇದರ ಬೆನ್ನಲ್ಲೇ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮಹತ್ವದ ಸಲಹೆ ನೀಡಿದೆ.
ನೀಟ್ ಪರೀಕ್ಷೆ ಅನ್ನೋದು ಬರೋಬ್ಬರಿ 23 ಲಕ್ಷ ವಿದ್ಯಾರ್ಥಿಗಳ ಭವಿಷ್ಯ. ಇತ್ತೀಚೆಗೆ ನಡೆದ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಸ್ಪಷ್ಟ. ನೀಟ್ ಪರೀಕ್ಷೆ ರದ್ದು ಎಂಬುದು ಕೊನೆಯ ಆಯ್ಕೆಯಾಗಬೇಕು. ದೇಶದ ಪ್ರತಿಯೊಂದು ಮಧ್ಯಮ ವರ್ಗದ ಕುಟುಂಬ ನೀಟ್, ಜೆಇಇ ಪಾಸ್ ಮಾಡೋ ಗುರಿ ಹೊಂದಿದೆ. ಹಾಗಾಗಿ ನೀಟ್ ರದ್ದು ಮಾಡುವುದು ಬಹಳಷ್ಟು ವಿದ್ಯಾರ್ಥಿಗಳ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಮರು ಪರೀಕ್ಷೆಗೆ ಆದೇಶ ಮಾಡುವಾಗ ಎಚ್ಚರ ಇರಲಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಅಷ್ಟೇ ಅಲ್ಲ ಪ್ರಶ್ನೆ ಪತ್ರಿಕೆ ಲೀಕ್ ಯಾರು ಮಾಡಿದ್ದು ಎಂದು ಗುರುತಿಸೋದು ಹೇಗೆ? ಲೀಕ್ ಆಗಿರೋದು ಪಕ್ಕಾ. ಆದರೆ, ಅದರ ಫಲಾನುಭವಿಗಳು ಯಾರು ಎಂದು ಹೇಗೆ ಗುರುತಿಸುವುದು. ಎಷ್ಟರ ಮಟ್ಟಿಗೆ ಲೀಕ್ ಆಗಿದೆ ಎಂದು ಗೊತ್ತಾಗಬೇಕು. ಲೀಕ್ ಮಾಡಿದವರನ್ನು ಪತ್ತೆ ಹಚ್ಚಲು ಸಾಧ್ಯವೇ ಆಗದಿದ್ರೆ ರೀ ಎಕ್ಸಾಮ್ ಮಾಡಿ ಎಂದಿದೆ ಸುಪ್ರೀಂ ಕೋರ್ಟ್.
ಇದನ್ನೂ ಓದಿ: 40ಕ್ಕೂ ಹೆಚ್ಚು ಶಾಲಾ ಮಕ್ಕಳಿದ್ದ ಮಿನಿ ಬಸ್ ಪಲ್ಟಿ.. ಮಕ್ಕಳ ಸ್ಥಿತಿಗತಿ ಹೇಗಿದೆ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ