newsfirstkannada.com

ಯುಗಾದಿ ಹೊಸತಡಕುಗಾಗಿ ಚೀಟಿ ಹಾಕಿದ್ದವ್ರಿಗೆ ಮಕ್ಮಲ್​ ಟೋಪಿ.. ಮಾಂಸದ ಆಸೆಗೆ ಕೋಟಿ, ಕೋಟಿ ಕಳ್ಕೊಂಡ ಜನ!

Share :

Published March 29, 2024 at 7:25am

    ಹೊಸತಡಕುಗಾಗಿ ಚೀಟಿ ಹಾಕುವುದು ಬೆಂಗಳೂರು ಸುತ್ತ ಇನ್ನೂ ಇದೆ

    6 ಸಾವಿರ ಜನರಿಗೆ ಮಕ್ಮಲ್​ಟೋಪಿ ಹಾಕಿ ಎಸ್ಕೇಪ್ ಆಗಿರುವ ದಂಪತಿ

    ಉಂಡುಹೋದ ಕೊಂಡುಹೋದ ಅನ್ನೊಂಗೆ ಉಂಡೆನಾಮ ಹಾಕಿದರು

ಇದೊಂದು ಬಿಗ್ ಸ್ಕ್ಯಾಮ್ ಎನ್ನಬಹುದು. ಬೃಹತ್ ವಂಚನೆಯ ಪ್ಲಾನಿಂಗೇ ಬೇರೆ. ಯುಗಾದಿ ಹಬ್ಬದ ಮಾಂಸಕ್ಕೆ ಆಸೆ ಪಟ್ಟವರು ಕಳೆದುಕೊಂಡಿದ್ದು ಕೋಟ್ಯಾಂತರ ರೂಪಾಯಿ. ಚೀಟಿ ಎಂಬ ಮಹಾ ವಂಚನೆ ನಡೆಸಿದವನು ಎಸ್ಕೇಪ್ ಆಗಿದ್ದಾನೆ. ಈ ಘಟನೆ ಬ್ಯಾಟರರಾಯನಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಯುಗ ಯುಗ ಕಳೆದ್ರೂ ಯುಗಾದಿ ಮರಳಿ ಬರುತಿದೆ ಅನ್ನೋದು ನವ ವಸಂತದ ಬಣ್ಣನೆ. ಯುಗಾದಿಯು ಹತ್ತಿರದಲ್ಲಿದೆ. ಅದರಲ್ಲೂ ಯುಗಾದಿಯ ಹೊಸತಡಕು ಹರುಷದಿಂದ ಕಾಯುವ ದಿನ. ಆದ್ರೆ, ಈ ಹೊಸ ತಡಕು ನಂಬಿ ಚೀಟಿ ಹಾಕಿದ್ದವರಿಗೆ ಮಕ್ಮಲ್​ ಟೋಪಿ ಹಾಕಿಸಿದೆ.

6 ಸಾವಿರ ಜನರ ಬಳಿ ಚೀಟಿ.. 2 ಕೋಟಿ 78‌ ಲಕ್ಷ ವಂಚನೆ!

ಜನರಿಗೆ ಮಾಂಸ ಅಂದ್ರೆ ಎಲ್ಲಿಲ್ಲದ ಆಸೆ.. ಅದರಲ್ಲೂ ಹೊಸತಡಕುಗಾಗಿ ಚೀಟಿ ಹಾಕುವ ಸಂಪ್ರದಾಯ ಬೆಂಗಳೂರು ಸುತ್ತಮುತ್ತಲ ಹಳ್ಳಿಗಳಲ್ಲಿದೆ.. ಇದೇ ಹೊಸತಡುಕಿನ ಆಸೆ, 6 ಸಾವಿರ ಜನರಿಗೆ ತೊಡಕಾಗಿದೆ. ಬಾಡೂಟದ ಆಸೆಗೆ ಕೆಡವಿ ಕೋಟ್ಯಾಂತರ ವಂಚನೆ ನಡೆದಿದೆ. ಯಸ್ ಪುಟ್ಟಸ್ವಾಮಿ ಹಾಗು ಆತನ ಪತ್ನಿ ಸೌಮ್ಯ ನಡೆಸಿದ ಬಿಗ್ ಸ್ಕ್ಯಾಮ್ ಇದು. ವಂಚನೆ ನಂತ್ರ ಮೊಬೈಲ್ ಸ್ವಿಚ್ ಆಫ್ ಮಾಡಿ ದಂಪತಿ ಪರಾರಿಯಾಗಿದ್ದಾರೆ.

ಪುಟ್ಟಸ್ವಾಮಿ ದಂಪತಿ ಕಳೆದ 4 ವರ್ಷದಿಂದ ಮಾಂಸದ ಚೀಟಿ ವ್ಯವಹಾರ ನಡೆಸ್ತಿದ್ರು. ಪ್ರತಿವರ್ಷ ಕೂಡ ಯುಗಾದಿ ಹಬ್ಬಕ್ಕೆ 3 ಕೆಜಿ ಮಾಂಸ ಹಾಗು ಅಕ್ಕಿ, ಬೇಳೆ, ಅಡುಗೆ ಎಣ್ಣೆ ಹೀಗೆ 36 ಬಗೆಯ ದಿನಸಿ ಪದಾರ್ಥಗಳನ್ನ ಹಬ್ಬಕ್ಕೆ ನೀಡಲಾಗ್ತಿತ್ತು. ಹೀಗೆ ನಂಬಿಕೆ ಹುಟ್ಟಿಸಿ ಚೀಟಿ ಹಾಕಿದ್ದವರ ಸಂಖ್ಯೆ ಬರೋಬ್ಬರಿ 6 ಸಾವಿರ. ಈಗ ಊಂಡುಹೋದ ಕೊಂಡುಹೋದ ಅನ್ನೊಂಗೆ ಉಂಡೆನಾಮ ಹಾಕಿದ್ದಾರೆ.. ಚೀಟಿ ಕಟ್ಟಿದ ಜನರು ಆತನ ಮನೆ ಮುಂದೆ ಕಂಗಾಲಾಗಿ ಕೂತಿದ್ದಾರೆ.

ಪ್ರತಿ ಸಾರಿ 32 ಕಾರ್ಡ್ ಹಾಕುತ್ತಿದ್ದರು. ಆದರೆ ಈ ಬಾರಿ 102 ಕಾರ್ಡ್ ಹಾಕಿದರು. ತುಂಬಾ ಚೆನ್ನಾಗಿರೋ ಐಟಾಮ್ ಹಾಕಿದ್ದಾರೆಂದು ನಮಗೂ ಕೊಟ್ಟರು. ನಾವು ಈ ದಂಪತಿ ನಂಬಿ ಹಾಕಿದೇವು. ನೋಡಿದರೆ ಈಗ ನಮ್ಮ ಪರಿಸ್ಥಿತಿ ಹೀಗಾಗಿದೆ.

ಕೃಷ್ಣಯ್ಯ, ವಂಚನೆಗೊಳಗಾದವರು

ಇನ್ನು, ಈ ಚೀಟಿಯ ವಿಧಾನ ಹೇಗೆ ಅಂದರೆ ಚೀಟಿ ಹಾಕಿದವರಿಗೂ ಚೀಟಿ ನಡೆಸುವವನಿಗೂ ಡೈರೆಕ್ಟ್ ಲಿಂಕ್ ಇರೋದಿಲ್ಲ. ಇಲ್ಲಿ ಒಬ್ಬ ವ್ಯಕ್ತಿಯನ್ನ ನಂಬಿ ತಿಂಗಳಿಗೆ ಕೊಡಬೇಕಾದ ಚೀಟಿಯ ಹಣವನ್ನ ಆ ವ್ಯಕ್ತಿಗೆ ನೀಡಲಾಗುತ್ತೆ. ಆ ವ್ಯಕ್ತಿ ಆ ಹಣವನ್ನ ಕಲೆಕ್ಟ್ ಮಾಡಿ ಪುಟ್ಟಸ್ವಾಮಿ ಬಳಿ ನೀಡ್ತಿದ್ದ. ಇದಕ್ಕೆ ಮದ್ಯವರ್ತಿಗೆ ಕಮೀಷನ್ ಇತ್ತು. ಆತ ಚೀಟಿ ಹಾಕಿದ್ರೆ, ಆತನಿಗೆ 2 ಚೀಟಿ ಕಟ್ಟುವಂತಿಲ್ಲ.

ಹೀಗೆ ಆಫರ್ ಇಟ್ಟಿದ್ದ ಮುಖ್ಯ ವ್ಯಕ್ತಿ ಪುಟ್ಟಸ್ಚಾಮಿಯೇ ಪರಾರಿಯಾಗಿದ್ದಾನೆ.. ಇದ್ರಿಂದ ಮದ್ಯವರ್ತಿಗಳು ಕಂಗಾಲಾಗಿದ್ದಾರೆ. ಇನ್ನು ಹೀಗೆ ಒಬ್ಬೊಬ್ಬ 100 ಚೀಟಿ ಇನ್ನೂರು ಚೀಟಿಯಂತೆ ಹಲವರಿಂದ ಚೀಟಿ ಕಟ್ಟಿಸಿದ್ದವರು ಬಾಯಿ ಬಡ್ಕೋತಿದ್ದಾರೆ.

ಇದನ್ನೂ ಓದಿ: ಇಂದಿನಿಂದ ರಾಜ್ಯಾದ್ಯಂತ ‘ಯುವ’ ಘರ್ಜನೆ.. ಚೊಚ್ಚಲ ಸಿನಿಮಾದಲ್ಲೇ ಫ್ಯಾನ್ಸ್​ ಮನಸು ಗೆಲ್ತಾರಾ ದೊಡ್ಮನೆ ಕುಡಿ?

490 ಕಾರ್ಡ್ ನಾನು ಮಾಡಿದ್ದೀನಿ. ಇದು 4ನೇ ವರ್ಷ ಅವರು ಕೊಡುತ್ತಿರೋದು. ಈ ಮೊದಲು 3 ವರ್ಷ ಚೆನ್ನಾಗಿ ಕೊಟ್ಟಿದ್ದಾರೆ. ಆದರೆ ಈ ವರ್ಷ ಹೀಗೆ ಮಾಡಿದ್ದಾರೆ. ನಂಬಿಕೆ ಮೇಲೆ ವ್ಯವಹಾರ ಮಾಡಿದ್ದು ನಾವು. ಈಗ 20ನೇ ತಾರೀಖಿನಿಂದ ಫೋನ್ ಸ್ವಿಚ್ ಆಫ್ ಮಾಡಿ, ಮನೆ ಬೀಗ ಹಾಕಿಕೊಂಡು ಹೋಗಿದ್ದಾರೆ.

ಪುಟ್ಟರಾಜು, ವಂಚನೆಗೊಳಗಾದವರು

ಸದ್ಯ ಪುಟ್ಟಸ್ವಾಮಿ ಮನೆ ಮುಂದಯೇ ಚೀಟಿ ಕಟ್ಟಿದವರು ಮೊಕ್ಕಾಂ ಹೂಡಿದ್ದು, ಈ ಸಂಬಂಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಯುಗಾದಿ ಹೊಸತಡಕುಗಾಗಿ ಚೀಟಿ ಹಾಕಿದ್ದವ್ರಿಗೆ ಮಕ್ಮಲ್​ ಟೋಪಿ.. ಮಾಂಸದ ಆಸೆಗೆ ಕೋಟಿ, ಕೋಟಿ ಕಳ್ಕೊಂಡ ಜನ!

https://newsfirstlive.com/wp-content/uploads/2024/03/YUGADI.jpg

Load More