Advertisment

ತ್ರಿವಿಕ್ರಮ್,​ ಭವ್ಯಾ ಆಡಿದ ಅದೊಂದು ಮಾತಿಗೆ ಸಿಕ್ಕಾಪಟ್ಟೆ ಬೇಜಾರಾಗಿದೆ; ಉಗ್ರಂ ಮಂಜು ಹೇಳಿದ್ದೇನು?

author-image
Veena Gangani
Updated On
ತ್ರಿವಿಕ್ರಮ್,​ ಭವ್ಯಾ ಆಡಿದ ಅದೊಂದು ಮಾತಿಗೆ ಸಿಕ್ಕಾಪಟ್ಟೆ ಬೇಜಾರಾಗಿದೆ; ಉಗ್ರಂ ಮಂಜು ಹೇಳಿದ್ದೇನು?
Advertisment
  • ಬಿಗ್​ಬಾಸ್​ನಿಂದ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ ಮಂಜು
  • ಗ್ರೇ ಏರಿಯಾ ಕಿಂಗ್‌ ಅಂತಲೇ ಫೇಮಸ್ ಆಗಿದ್ದ ಉಗ್ರಂ ಮಂಜು
  • ಅಂದು ಭವ್ಯಾ ಗೌಡ, ತ್ರಿವಿಕ್ರಮ್​ ಆಡಿದೆ ಮಾತಿಗೆ ಮಂಜು ಬೇಸರ

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11 ಅದ್ದೂರಿಯಾಗಿ ಮುಕ್ತಾಯವಾಗಿದೆ. ಸದ್ಯ ಬಿಗ್​ಬಾಸ್​ ಸ್ಪರ್ಧಿಗಳು ಸಂದರ್ಶನ ಕೊಡುವುದರಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಗ್ರೇ ಏರಿಯಾ ಕಿಂಗ್‌ ಅಂತಲೇ ಫೇಮಸ್ ಆಗಿದ್ದ ಉಗ್ರಂ ಮಂಜು ಅವರು ನ್ಯೂಸ್​ ಫಸ್ಟ್​ ಸಂದರ್ಶನದಲ್ಲಿ ಬಿಗ್​ಬಾಸ್​ ಅನುಭವದ ಬಗ್ಗೆ ಮಾತಾಡಿದ್ದಾರೆ.

Advertisment

ಇದನ್ನೂ ಓದಿ: ಧನರಾಜ್​ಗೆ BIGG BOSS ಟ್ರೋಫಿ ಕೊಟ್ಟ ಹನುಮಂತ.. ದೋಸ್ತನ ಹಾಡಿ ಹೊಗಳಿದ ಪ್ರಾಣ ಸ್ನೇಹಿತ

publive-image

ಹೌದು, ಬಿಗ್​ಬಾಸ್​ ಸೀಸನ್ 11ರ ಸ್ಪರ್ಧಿ ಉಗ್ರಂ ಮಂಜು 4ನೇ ಫೈನಲಿಸ್ಟ್​ ಆಗಿ ಆಚೆ ಬಂದು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದರು. ಬಿಗ್​ಬಾಸ್ ಮೂಲಕವೇ ಮತ್ತಷ್ಟೂ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಇನ್ನೂ, ಬಿಗ್​ಬಾಸ್​ನಿಂದ ಆಚೆ ಬರುತ್ತಿದ್ದಂತೆ ನ್ಯೂಸ್ ಫಸ್ಟ್​ನೊಂದಿಗೆ ಮನಬಿಚ್ಚಿ ಮಾತಾಡಿದ್ದಾರೆ. ಬಿಗ್​ಬಾಸ್​ ಮನೆಯಲ್ಲಿದ್ದಾಗ ಉಗ್ರಂ ಮಂಜು ಆಟಕ್ಕೆ ಉಳಿದ ಸ್ಪರ್ಧಿಗಳು ಶಾಕ್​ ಆಗುತ್ತಿದ್ದರು. ಮಂಜು ಅವರು ಟಾಸ್ಕ್​ ಆಡುತ್ತಿದ್ದಾರೆ ಎಂದ್ರೆ ಉಳಿದವರು ಭಯ ಪಡುತ್ತಿದ್ದರು. ಆದ್ರೆ ಫಿನಾಲೆಗೆ ಇನ್ನೂ ಎರಡು ವಾರ ಬಾಕಿ ಇದ್ದಾಗ ಬಿಗ್​ಬಾಸ್​ ಮನೆಯಲ್ಲಿ ಸಖತ್​ ಸೈಲೆಂಟ್​ ಆಗಿಬಿಟ್ಟಿದ್ದರು ಉಗ್ರಂ ಮಂಜು. ಆದ್ರೆ ಅದೇ ವೇಳೆ ಅಣ್ಣ, ಅಣ್ಣ ಅಂತ ಕರೆಯುತ್ತಿದ್ದ ತ್ರಿವಿಕ್ರಮ್​ ಏಕಾಏಕಿ ಉಗ್ರಂ ಮಂಜು ಅವರಿಗೆ ಏಕವಚನದಲ್ಲಿ ಮಾತಾಡಿದ್ದರು. ಇದೇ ವಿಚಾರಕ್ಕೆ ಸಿಕ್ಕಾಪಟ್ಟೆ ಬೇಸರ ಕೂಡ ಆಗಿದ್ದರಂತೆ ಉಗ್ರಂ ಮಂಜು.

ಇದೇ ವಿಚಾರವಾಗಿ ನ್ಯೂಸ್ ಫಸ್ಟ್​ನೊಂದಿಗೆ ಮಾತಾಡಿದ ಉಗ್ರಂ ಮಂಜು, ತ್ರಿವಿಕ್ರಮ್​ ತಂದೆ ಹೆಸರು ಮಂಜುನಾಥ್​ ಅಂತ. ಅವರ ಬಾಯಿಂದಲೇ ಬಂದಿದೆ, ಅಣ್ಣ ಟಾಸ್ಕ್​ನಲ್ಲಿ ಎಷ್ಟೇ ಗಲಾಟೆ ಮಾಡಿದ್ರೂ, ಏನೇ ಪಟ್ಟಾದ್ರೂ ಆಗ ಅವರು ಬರ್ತಾರೆ, ನಾವು ಹೋಗ್ತೀವಿ. ನನ್ನ ತಂದೆ ಹೆಸರು ಮಂಜುನಾಥ್ ನಿಮ್ಮನ್ನೂ ಅಣ್ಣನ ಸ್ಥಾನದಲ್ಲಿ ಇಟ್ಟಿದ್ದೀನಿ ಅಂತಾರೆ. ಆದ್ರೆ ಆ ರೀತಿಯಲ್ಲಿ ಮಾತಾಡುತ್ತಾರೆ. ಯಾವುದು ನಿಜ? ಯಾವುದು ಸುಳ್ಳು? ಬರೀ ಆಟಕ್ಕಾಗಿ ಹೀಗೆ ಹೇಳಿದ್ರಾ? ಎಂದಿದ್ದಾರೆ.

Advertisment

ಇದನ್ನೂ ಓದಿ:ಕಿಚ್ಚ ಹೇಳಿದರೂ ಗೌತಮಿ ಜೊತೆ ಫ್ರೆಂಡ್​ಶಿಪ್ ಕಟ್​ ಮಾಡಲಿಲ್ಲ ಯಾಕೆ.. ಮಂಜು ಕೊಟ್ಟ ಕಾರಣಗಳೇನು?

ಮಾತನ್ನು ಮುಂದುವರೆಸಿದ ಅವರು, ಭವ್ಯಾ ಒಂದೊಂದು ಸಲ, ಒಂದೊಂದು ತರ ಕರೀತ್ತಾಳೆ. ಒಂದು ಸರಿ ಅಣ್ಣ ಅಂತಾಳೆ. ಮತ್ತೊಂದು ಸಲ ಹೋಗು ಗುರು ಅಂತಾಳೆ. ಒಂದು ಕಡೆ ತ್ರಿವಿಕ್ರಮ್​ ಹೋಗೋ ಅಂತಾನೇ, ಮತ್ತೇ ಹೋಗಲ್ಲೇ ಅಂತಾನೇ ನನಗೆ ಹೀಗೆ ಹೇಳಿದ್ದು ಸಿಕ್ಕಾಪಟ್ಟೆ ಹರ್ಟ್​ ಆಗಿದೆ. ಅಣ್ಣ ಅಣ್ಣ ಅಂತ ಬಂದೋನು ಹೀಗೆ ಅಂದ್ರೆ ಹೇಗೆ ಇದು ನನಗೆ ಬೇಜಾರ್ ಆಗಿದೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment