/newsfirstlive-kannada/media/post_attachments/wp-content/uploads/2024/12/BIGG-BOSS-12.jpg)
ಬಿಗ್​ಬಾಸ್​ ಮನೆಯಲ್ಲಿ ನಾಮಿನೇಷನ್ ಬೆಂಕಿ ಹೊತ್ತುಕೊಂಡಿದೆ. ಈ ಬಾರಿ ವಿಭಿನ್ನವಾಗಿ ನೇರವಾಗಿ ನಾಮಿನೇಷನ್ ಟಾಸ್ಕ್ ನೀಡಲಾಗಿದೆ.
ಸ್ಪರ್ಧಿಗಳು ಮನೆಯಿಂದ ಆಚೆ ಕಳುಹಿಸಲು ಇಷ್ಟ ಪಡುವ ಸ್ಪರ್ಧಿಗಳ ತಲೆ ಮೇಲೆ ಬಾಟಲಿಯಿಂದ ಹೊಡೆದು ನಾಮಿನೇಟ್ ಮಾಡಬೇಕು. ಅಂತೆಯೇ ಭವ್ಯ ಗೌಡ ಅವರು, ಐಶ್ವರ್ಯ ಅವರ ತಲೆಗೆ ಬಾಟಲಿ ಹೊಡೆದಿದ್ದಾರೆ. ಇನ್ನು ಮೋಕ್ಷಿತಾ ಉಗ್ರಂ ಮಂಜು ತಲೆಗೆ ಬಾಟಲಿಯಿಂದ ಹೊಡೆದಿದ್ದಾರೆ.
ಇದನ್ನೂ ಓದಿ:ಮುನಿರತ್ನ ಮೇಲೆ ಮೊಟ್ಟೆ ಎಸೆತ ಪ್ರಕರಣ; ಹೋರಾಟಕ್ಕೆ ಸಜ್ಜಾದ ಕೇಸರಿ ಪಡೆ? ಪ್ಲ್ಯಾನ್ ಏನು?
ಈ ವೇಳೆ ಮಂಜು ಹಾಗೂ ಮೋಕ್ಷಿತಾ ಮಧ್ಯೆ ಟಾಕ್ ಫೈಟ್ ನಡೆದಿದೆ. ಮೋಕ್ಷಿತಾ ನೀವು ಮನೆಯಲ್ಲಿ ಕಾಣಿಸಿಕೊಂಡಿಲ್ಲ ಎಂದು ಕಾರಣ ನೀಡಿದ್ದಾರೆ. ಇದಕ್ಕೆ ರೊಚ್ಚಿಗೇಳುವ ಮಂಜು, ನಾಳೆಯಿಂದ ಈ ಮನೆಯಲ್ಲಿ ಹೇಗೆ ಕಾಣಿಸಿಕೊಳ್ಳಬೇಕು ಎಂದು ನಿಮ್ಮ ಬಳಿ ಟ್ಯೂಷನ್​​ಗೆ ಬರ್ತೀನಿ ಎಂದಿದ್ದಾರೆ. ನಿಮಗೆ ನಾನು ಕಾಣಿಸಿಕೊಳ್ಳಲು ಏನಾದರೂ ತಂದುಕೊಡಬೇಕಾ ಎಂದು ಕೇಳಿದ್ದಾರೆ.
ಆಗ ಕೆರಳಿದ ಮೋಕ್ಷಿತಾ, ಅಂದರೆ ನೀವು ಮನೆಯಲ್ಲಿ ಕಾಣಿಸಿಕೊಳ್ಳೋದು ಒಬ್ಬರಿಗೆ ತೆಗೆದುಕೊಂಡು ಹೋಗಿ ಇಬ್ಬರಿಗೆ ಕೊಟ್ಟಾಗಲೇ ಅಂತಾನಾ? ನೀವು ಯಾರು ನನಗೆ ವೈಸ್​ ರೈಸ್ ಮಾಡೋಕೆ ಎಂದು ಆವಾಜ್ ಹಾಕಿದ್ದಾರೆ. ಕ್ಷುಲ್ಲಕ ಕಾರಣಗಳಿಗೆ ನಾನು ನಾಮಿನೇಟ್ ಆಗಲ್ಲ ಎಂದ ಮಂಜುಗೆ, ನಿಮ್ಮನ್ನು ನಾಮಿನೇಟ್ ಮಾಡೋದು ನನ್ನಿಷ್ಟ. ನನ್ನ ನಿರ್ಧಾರ ಎಂದು ಬಾಟಲಿಯಿಂದ ತಲೆಗೆ ಹೊಡೆದಿದ್ದಾರೆ.
ಇದನ್ನೂ ಓದಿ:BBK11: ಈ ಬಾರಿ ಭವ್ಯಾ ಕಪ್ ಗೆಲ್ತಾರಾ? ತೆಲುಗು ಬಿಗ್ ಬಾಸ್ ವಿನ್ನರ್ ನಿಖಿಲ್ ಹೇಳಿದ್ದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us