/newsfirstlive-kannada/media/post_attachments/wp-content/uploads/2025/01/BIGG-BOSS-5.jpg)
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11ರ ಗ್ರ್ಯಾಂಡ್ ಫಿನಾಲೆಗೆ ಒಂದೇ ವಾರ ಬಾಕಿ ಉಳಿದಿದೆ. ಕೊನೆಯ ವಾರ ಅಂತ ಖುಷಿಯಲ್ಲಿ ಇರಬೇಕಾಗಿದ್ದ ಸ್ಪರ್ಧಿಗಳು ಏಕಾಏಕಿ ಸಿಡಿದೆದ್ದಿದ್ದಾರೆ.
ಇದನ್ನೂ ಓದಿ:ಕಿಚ್ಚನ ಎದುರು ದೋಸ್ತ ಹನುಮಂತು ಬಗ್ಗೆ ಮಾತನಾಡುತ್ತ ಧನರಾಜ್ ಕಣ್ಣೀರು.. ಆಗಿದ್ದೇನು?
ಹೌದು, ಕನ್ನಡದ ಬಿಗ್ಬಾಸ್ 114ನೇ ದಿನಕ್ಕೆ ಕಾಲಿಟ್ಟಿದೆ. ಇನ್ನೇನು ಒಂದೇ ವಾರದಲ್ಲಿ ಬಿಗ್ಬಾಸ್ ವಿನ್ನರ್ ಯಾರಾಗ್ತಾರೆ ಅಂತ ಗೊತ್ತಾಗಲಿದೆ. ಆದ್ರೆ ಇದರ ಮಧ್ಯೆ ಬಿಗ್ಬಾಸ್ ಸ್ಪರ್ಧಿಗಳ ಮಧ್ಯೆ ದೊಡ್ಡ ಕಿಡಿ ಹೊತ್ತಿಕೊಂಡಿದೆ ಅಂತ ಅನೀಸುತ್ತಿದೆ. ಸುಖಾ ಸುಮ್ಮನೆ ಹಳೆ ವಿಚಾರಗನ್ನು ಎತ್ತಿಕೊಂಡು ಮತ್ತೆ ದ್ವೇಷ ಬೆಳಸಿಕೊಳ್ಳುತ್ತಿದ್ದಾರಾ ಸ್ಪರ್ಧಿಗಳು ಅಂತ ಅನುಮಾನ ಮೂಡಿದೆ.
ಈಗ ರಿಲೀಸ್ ಆದ ಹೊಸ ಪ್ರೋಮೋದಲ್ಲಿ ಉಗ್ರಂ ಮಂಜು ಏಕಾಏಕಿ ಭವ್ಯಾ ಗೌಡ ಅವರ ಮೇಲೆ ಕೆಂಡಾಮಂಡಲರಾಗಿದ್ದಾರೆ. ಭವ್ಯಾ ಮೇಲಿನ ಕೋಪಕ್ಕೆ ಬಿಗ್ಬಾಸ್ ಪ್ರಾಪರ್ಟಿಗಳು ಪುಡಿ ಪುಡಿಯಾಗಿವೆ. ಬಿಗ್ಬಾಸ್ ಮನೆಯಲ್ಲಿರೋ 6 ಸ್ಪರ್ಧಿಗಳಿಗೆ ಒಂದು ಚಟುವಟಿಕೆ ಕೊಟ್ಟಿದ್ದಾರೆ. ಈ ಚಟುವಟಿಕೆ ವೇಳೆ ಉಗ್ರಂ ಮಂಜು ಭವ್ಯಾ ಮೇಲೆ ಮೇಲೆ ಕೋಪ ತೀರಿಸಿಕೊಂಡಿದ್ದಾರೆ. ಭವ್ಯಾ ಫೋಟೋ ಹಾಕಿದ್ದ ಮಡಿಕೆ ಒಡೆದ ಅವರು ಟೇಬಲ್, ಡ್ರಮ್ ಸೇರಿದಂತೆ ಇನ್ನಿತರ ವಸ್ತುಗಳನ್ನು ಪೀಸ್ ಪೀಸ್ ಮಾಡಿದ್ದಾರೆ.
View this post on Instagram
ಫಸ್ಟ್ ಮಂಜು ಅಣ್ಣ ಅಂತೀಯಾ, ಆಮೇಲೆ ಮಂಜು ಅವರೇ ಅಂತೀಯಾ, ತ್ರಿವಿಕ್ರಮ್ ಅವರಿಂದಲೇ ಇಲ್ಲಿ ತನಕ ಬಂದೇ ಅಲ್ವಾ, ಯಾರಿಗೋ ಸಿಗಬೇಕಾಗಿದ್ದ ಕ್ಯಾಪ್ಟನ್ಸಿಯನ್ನು ಮೋಸ ಮಾಡಿ ಆದ್ರಿ ಅಲ್ವಾ ಅಂತ ಕಿಡಿಕಾರಿದ್ದಾರೆ. ಆಗ ಭವ್ಯಾ, ನಾನೇನಾದ್ರೂ ಅಗ್ರಿಮೆಂಟ್ ಮಾಡಿದ್ನಾ ಮಂಜಣ್ಣ ಅಂತ ಕರೀತೀನಿ ಅಂತ. ಮೊದಲು ನಿಮ್ಮಲ್ಲಿ ಎಷ್ಟು ತೂತು ಇದೆ ಅಂತ ನೋಡಿಕೊಳ್ಳಿ, ನಿಮ್ಮ ಗೌತಮಿ ವಿಚಾರಕ್ಕೆ ನಾನು ಬಂದಿದ್ದೀನಾ, ಅರ್ಹತೆ ಇಲ್ಲ ನಿಮಗೆ ನನ್ನ ಬಗ್ಗೆ ಮಾತಾಡೋಕೆ ಗೇಟ್ ಲಾಸ್ಟ್ ಅಂತ ಸಿಟ್ಟಿಗೆದ್ದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ