/newsfirstlive-kannada/media/post_attachments/wp-content/uploads/2024/12/bbk-manju2.jpg)
ಕನ್ನಡದ ಬಿಗ್ಬಾಸ್ ಈಗ ಐಶಾರಾಮಿ ರೆಸಾರ್ಟ್ ಆಗಿ ಬದಲಾಗಿದೆ. ಬಿಗ್ಬಾಸ್ ಮನೆಯಷ್ಟೇ ಅಲ್ಲದೇ ಸ್ಪರ್ಧಿಗಳು ಕೂಡ ಚೇಂಜ್ ಆಗಿದ್ದಾರೆ. ಒಂದು ತಂಡ ಐಶಾರಾಮಿ ರೆಸಾರ್ಟ್ನಲ್ಲಿ ಕೆಲಸಗಾರರಾಗಿದ್ದರೆ, ಮತ್ತೊಂದು ತಂಡ ಅತಿಥಿಗಳಾಗಿದ್ದಾರೆ.
ಇದನ್ನೂ ಓದಿ:ಬೆಂಗಳೂರು-ಮೈಸೂರು ಹೈವೇಯಲ್ಲಿ ಕಾರಿಗೆ ಮೊಟ್ಟೆ ಒಡೆದು, ಕಣ್ಣಿಗೆ ಖಾರದ ಪುಡಿ ಎರಚಿ ದರೋಡೆ
ಈ ವಾರ ಬಿಗ್ಬಾಸ್ ಮನೆ ಮಂದಿಗೆ ಟಾಸ್ಕ್ವೊಂದನ್ನು ಕೊಟ್ಟಿದ್ದಾರೆ. ಈಗ ಬಿಗ್ಬಾಸ್ ಮನೆ ಸಂಪೂರ್ಣವಾಗಿ ರೆಸಾರ್ಟ್ ರೀತಿಯಲ್ಲೇ ಬದಲಾಗಿದೆ. ರೆಸಾರ್ಟ್ಗೆ ಅತಿಥಿಯಾಗಿ ಬಂದ ಮಂಜಣ್ಣ ಉಗ್ರ ಅವತಾರಾ ತಾಳಿದ್ದಾರೆ. ರೆಸಾರ್ಟ್ಗೆ ಬಂದ ಅತಿಥಿಗಳನ್ನು ತ್ರಿವಿಕ್ರಮ್, ಭವ್ಯಾ ಗೌಡ, ಧನರಾಜ್, ರಜತ್ ಹಾಗೂ ಮೋಕ್ಷಿತಾ ಇದ್ದಾರೆ ನೋಡಿಕೊಳ್ಳಬೇಕು. ಅತಿಥಿಗಳು ಹೇಳಿದ ಕೆಲಸವನ್ನು ಚಾಚು ತಪ್ಪದೇ ಪಾಲಿಸಬೇಕಾಗಿತ್ತು.
View this post on Instagram
ಇದೇ ವೇಳೆ ಮ್ಯಾನೇಜರ್ ಎಲ್ಲ ಕತ್ತೆ ಮೇಯಿಸೋಕೆ ಬಂದಿದ್ದೀರಾ ಅಂತ ಪ್ರಶ್ನೆ ಮಾಡಿದ್ದಾರೆ. ಇದಾದ ಬಳಿಕ ಮೋಕ್ಷಿತಾ ಮೇಲೆ ಮಂಜು, ತಲೆ ತುಂಬಾ ಮಣ್ಣು ತುಂಬಿಕೊಂಡ್ರೆ ಏನೂ ಮಾಡೋದಕ್ಕೆ ಆಗೋದಿಲ್ಲ ಅಂತ ಹೇಳಿದ್ದಾರೆ. ಅಲ್ಲೇ ನಿಂತುಕೊಂಡಿದ್ದ ಧನರಾಜ್ ನೀರನ್ನು ಮಂಜುಗೆ ಕೊಡಲು ಬಂದಿದ್ದಾರೆ. ಆಗ ಮಂಜು ಅದನ್ನು ಒಡೆದು ಹಾಕಿದ್ದಾರೆ. ಇದು ತ್ರಿವಿಕ್ರಮ್ ಟೀಮ್ ಕೋಪಕ್ಕೆ ಗುರಿಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ