/newsfirstlive-kannada/media/post_attachments/wp-content/uploads/2025/01/BIGG-BOSS66.jpg)
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11ರ ಮುಕ್ತಾಯಗೊಂಡಿದೆ. ಭಾನುವಾರದ ಸಂಚಿಕೆಯಲ್ಲಿ ಬಿಗ್ಬಾಸ್ ಮನೆಯಿಂದ 4ನೇ ರನ್ನರ್ ಅಪ್ ಉಗ್ರಂ ಮಂಜು ಆಚೆ ಬಂದಿದ್ದರು. ಇದಾದ ಬಳಿಕ ಮೋಕ್ಷಿತಾ, ರಜತ್ ಆಚೆ ಬಂದರು. ಹನುಮಂತ ಬಿಗ್ಬಾಸ್ 11ರ ವಿನ್ನರ್ ಆದ್ರೆ, ತ್ರಿವಿಕ್ರಮ್ ರನ್ನರ್ ಅಪ್ ಆಗಿ ಹೊರ ಹೊಮ್ಮಿದ್ದಾರೆ.
ಇದನ್ನೂ ಓದಿ: BBK11: ಹನುಮಂತ ಗೆದ್ದಿದ್ದು ಸರಿಯಿಲ್ಲ.. ಬಿಗ್ಬಾಸ್ ವಿನ್ನರ್ ಮೇಲೆ ತ್ರಿವಿಕ್ರಮ್ ತಾಯಿಗೆ ಬೇಸರ; ಏನಂದ್ರು?
ಇನ್ನೂ, ನ್ಯೂಸ್ ಫಸ್ಟ್ನೊಂದಿಗೆ ಉಗ್ರಂ ಮಂಜು ತಂದೆ ಹೆಮ್ಮೆಯ ಮಾತುಗಳನ್ನು ಆಡಿದ್ದಾರೆ. ಅಲ್ಲದೇ ಉಗ್ರಂ ಮಂಜು ಸೋಲಿಗೆ ಗೌತಮಿ, ಮೋಕ್ಷಿತಾನೇ ಕಾರಣನಾ ಎಂಬುವುದಕ್ಕೆ ಪ್ರತಿಕ್ರಿಯೆ ಕೂಡ ಕೊಟ್ಟಿದ್ದಾರೆ. ಈ ಬಗ್ಗೆ ಮಾತಾಡಿದ ಉಗ್ರಂ ಮಂಜು ತಂದೆ, ನನ್ನ ಮಗ ಮಂಜು ಟ್ರೋಫಿ ಸೋತಿರಬಹುದು. ಆದ್ರೆ ಕನ್ನಡಿಗರ ಮನಸ್ಸು ಗೆದ್ದಿದ್ದಾನೆ. ಮಂಜು ಈಗ ಕನ್ನಡಿಗರ ಮನೆ ಮಾತಾಗಿದ್ದಾನೆ. ಮಂಜು ಗೆಲ್ಲಬೇಕಿತ್ತು ಅನ್ನೋದು ಎಲ್ಲರ ಆಸೆ ಆಗಿತ್ತು ಎಂದಿದ್ದಾರೆ.
ಹೀಗೆ ಮಾತನ್ನು ಮುಂದುವರೆಸಿದ ಅವರು, ಆದ್ರೆ ಈ ಹನುಮಂತ ಗೆದ್ದಿರೋದು ಖುಷಿಯಿದೆ. ಬಿಗ್ ಬಾಸ್ ಆರಂಭದಿಂದಲೂ ಚೆನ್ನಾಗಿ ಆಡ್ಕೊಂದ್ ಬಂದಿದ್ದಾನೆ. ಮಧ್ಯದಲ್ಲಿ ಸ್ವಲ್ಪ ಸೈಲೆಂಟಾಗಿದ್ದ, ನಂತರದಲ್ಲಿ ಸರಿಯಾದ. ಹೆಣ್ಣು ಮಕ್ಕಳ ವಿಚಾರದಲ್ಲಿ ಮಂಜು ಯಾವಾಗಲೂ ತಪ್ಪು ಮಾಡಲ್ಲ. ಹೆಣ್ಣು ಮಕ್ಕಳಿಗೆ ತುಂಬಾ ಗೌರವ ನೀಡ್ತಾನೆ. ಉಗ್ರಂ ಮಂಜು ತಂದೆ ಅಂತಾ ಕರೆಸಿಕೊಳ್ಳೋಕೆ ತುಂಬಾ ಖುಷಿಯಿದೆ. ಮಂಜು ಅಥವಾ ತ್ರಿವಿಕ್ರಮ್ ಗೆಲ್ತಾರೆ ಅಂದುಕೊಂಡಿದ್ದೆ. ಆದರೆ ಹನುಮಂತ ಗೆದ್ದುಕೊಂಡ. ಇದು ಜನರ ತೀರ್ಮಾನವಾಗಿದೆ ಅದಕ್ಕೆ ನಾವು ಜೈ ಎನ್ನಬೇಕು ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ