/newsfirstlive-kannada/media/post_attachments/wp-content/uploads/2025/05/chaitra-kundapura.jpg)
ಬಿಗ್ಬಾಸ್ ಸೀಸನ್ 11ರ ಸ್ಪರ್ಧಿ ಚೈತ್ರಾ ಕುಂದಾಪುರ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಉಡುಪಿ ಕಮಲಶಿಲೆಯ ಬ್ರಾಹ್ಮೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಚೈತ್ರಾ ಕುಂದಾಪುರ ಹಾಗೂ ಶ್ರೀಕಾಂತ್ ಕಶ್ಯಪ್ ಅವರ ಮದುವೆ ನೆರವೇರಿದೆ.
ಇದನ್ನೂ ಓದಿ:ಬಿಗ್ಬಾಸ್ ಖ್ಯಾತಿಯ ರಂಜಿತ್ ಕುಮಾರ್ ಅದ್ಧೂರಿ ಮದುವೆ; ಫೋಟೋಸ್ ಇಲ್ಲಿವೆ!
ಚೈತ್ರಾ ಕುಂದಾಪುರ ಅವರು 12 ವರ್ಷ ಪ್ರೀತಿಸಿದ ಗೆಳೆಯ ಶ್ರೀಕಾಂತ್ ಕಶ್ಯಪ್ ಅವರನ್ನು ಕೈ ಹಿಡಿದಿದ್ದು, ಇವರ ಮದುವೆ ಶಾಸ್ತ್ರ, ಸಂಪ್ರದಾಯಬದ್ಧವಾಗಿ ನಡೆದಿದೆ. ಚೈತ್ರಾ ಕುಂದಾಪುರ ಅವರ ಮದುವೆಗೆ ಬಿಗ್ ಬಾಸ್ ಸ್ಪರ್ಧಿಗಳಾದ ರಜತ್ ಕಿಶನ್, ಗೋಲ್ಡ್ ಸುರೇಶ್, ಧನರಾಜ್ ಆಚಾರ್ ಅವರ ಕುಟುಂಬ ಸದಸ್ಯರು ಭಾಗಿಯಾಗಿದ್ದರು.
View this post on Instagram
ಇನ್ನೂ, ಮದುವೆಯ ಮರುದಿನ ಚೈತ್ರಾ ಕುಂದಾಪುರ ಅವರ ಮನೆಗೆ ಉಗ್ರಂ ಮಂಜು ಅವರು ಭೇಟಿ ಕೊಟ್ಟಿದ್ದಾರೆ. ಇದಾದ ಬಳಿಕ ನವಜೋಡಿಗೆ ಶುಭ ಹಾರೈಸಿ ವಿಶೇಷವಾದ ಗೋವಿನ ಮೂರ್ತಿಯನ್ನು ಉಡುಗೊರೆ ಕೊಟ್ಟಿದ್ದಾರೆ. ಬಿಗ್ಬಾಸ್ ಮನೆಯಲ್ಲಿದ್ದಾಗ ಬರೀ ಹಸು, ಕರು ಅಂತ ಜಪಿಸುತ್ತಿದ್ದರು ಹೀಗಾಗಿ ಇದನ್ನೇ ಗಿಫ್ಟ್ ಆಗಿ ನೀಡಿದ್ದೇನೆ ಅಂತ ಉಗ್ರಂ ಮಂಜು ಹೇಳಿದ್ದಾಳೆ. ಉಗ್ರಂ ಮಂಜು ಕೊಟ್ಟ ಗಿಫ್ಟ್ ಅನ್ನು ಓಪನ್ ಮಾಡುತ್ತಿದ್ದಂತೆ ಚೈತ್ರಾ ಕುಂದಾಪುರ ಖುಷ್ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ