/newsfirstlive-kannada/media/post_attachments/wp-content/uploads/2024/10/JOB_LIC.jpg)
ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ (ಯುಐಐಸಿ)ನಲ್ಲಿ ಹುದ್ದೆಗಳು ಖಾಲಿ ಇದ್ದು ಈ ಬಗ್ಗೆ ನೋಟಿಫಿಕೇಶನ್ ರಿಲೀಸ್ ಮಾಡಲಾಗಿದೆ. ಆಡಳಿತಾಧಿಕಾರಿ (ಸ್ಕೇಲ್-I) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನ ಮಾಡಿದೆ. ಅಕ್ಟೋಬರ್ 15 ರಿಂದ ಈ ಕೆಲಸಗಳಿಗೆ ಅಪ್ಲೇ ಮಾಡಬಹುದು. ಹೀಗಾಗಿ ಇಂದೇ ಇದಕ್ಕೆ ಬೇಕಾದ ಪೂರ್ವ ತಯಾರಿ ಮಾಡಿಕೊಳ್ಳಿ.
ಈ ಸಂಸ್ಥೆಯಲ್ಲಿ ಕೆಲಸಕ್ಕೆ ತಕ್ಕಂತೆ ವೇತನ ಶ್ರೇಣಿಯು ನಿಗದಿ ಮಾಡಲಾಗಿರುತ್ತದೆ. ಅಭ್ಯರ್ಥಿಗಳು ಪೂರ್ವ ತಯಾರಿ ಮಾಡಿಕೊಂಡ ಬಳಿಕವೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಈ ಕೆಲಸಗಳಿಗೆ ಅರ್ಜಿ ಶುಲ್ಕ, ಸಂಬಳ, ವಿದ್ಯಾರ್ಹತೆ, ಅಂತಿಮ ದಿನಾಂಕ, ಆಯ್ಕೆ ಪ್ರಕ್ರಿಯೆ ಸೇರಿ ಮುಂತಾದ ಮಾಹಿತಿಯನ್ನು ನೀಡಲಾಗಿದೆ. ಈ ಆರ್ಟಿಕಲ್ ಅನ್ನು ಸಂಪೂರ್ಣವಾಗಿ ಗಮನಿಸಿ.
ಇದನ್ನೂ ಓದಿ: ಸರ್ಕಾರಿ ರಸಗೊಬ್ಬರ ಇಲಾಖೆಯಲ್ಲಿ ಉದ್ಯೋಗ ಖಾಲಿ ಖಾಲಿ.. ಬೆಂಗಳೂರಿನಲ್ಲೂ ಕೆಲಸ; ಈಗಲೇ ಅಪ್ಲೇ ಮಾಡಿ
ಅಭ್ಯರ್ಥಿಗಳು ಆನ್ಲೈನ್ ಪರೀಕ್ಷೆಯಲ್ಲಿ 150 ನಿಮಿಷದಲ್ಲಿ 200 ಪ್ರಶ್ನೆಗಳಿಗೆ ಉತ್ತರಿಸಬೇಕಾಗಿರುತ್ತದೆ. ಇದಕ್ಕೆ 250 ಅಂಕಗಳನ್ನು ನಿಗದಿ ಮಾಡಲಾಗಿರುತ್ತದೆ. ಇನ್ನು ಅರ್ಜಿಗಾಗಿ ಪಾವತಿ ಮಾಡಲಾದ ಶುಲ್ಕವನ್ನು ಯಾವುದೇ ಕಾರಣಕ್ಕೂ ವಾಪಸ್ ನೀಡಲ್ಲ. ಈ ಉದ್ಯೋಗಗಳಿಗೆ ಅರ್ಜಿ ಆಹ್ವಾನ ಮಾಡಿದ ದಿನವೇ ಹಾಲ್ಟಿಕೆಟ್ ನೀಡುವ ಹಾಗೂ ಪರೀಕ್ಷೆ ದಿನಾಂಕಗಳನ್ನ ನೀಡಲಾಗಿರುತ್ತದೆ.
ಉದ್ಯೋಗಗಳ ಹೆಸರು
- ಜೆನೆರಲ್ಲಿಸ್ಟ್ = 100
- ರಿಸ್ಕ್ ಮ್ಯಾನೇಜ್ಮೆಂಟ್= 10
- ಫೈನಾನ್ಸ್ & ಇನ್ವೆಸ್ಟ್ಮೆಂಟ್= 20
- ಇಂಜಿನಿಯರ್= 20
- ಕೆಮಿಕಲ್, ಮೆಕಾಟ್ರಾನಿಕ್ಸ್ ಇಂಜಿನಿಯರ್= 10
- ಡಾಟಾ ಅನಾಲಿಟಿಕಲ್ ಸ್ಪೆಷಲಿಸ್ಟ್= 20
- ಲೀಗಲ್= 20
ಒಟ್ಟು ಉದ್ಯೋಗಗಳು= 200
ಉದ್ಯೋಗದ ವರ್ಗ= ಬ್ಯಾಂಕ್ ಜಾಬ್ಸ್
ಮಾಸಿಕ ಸಂಬಳ= 88,000 ರೂಪಾಯಿಗಳು
ಆಯ್ಕೆ ಪ್ರಕ್ರಿಯೆ
- ಆನ್ಲೈನ್ ಟೆಸ್ಟ್
- ಸಂದರ್ಶನ
ಪ್ರಮುಖ ದಿನಾಂಕಗಳು
- ಅಪ್ಲೇ ಮಾಡಲು ಆರಂಭದ ದಿನಾಂಕ- ಅಕ್ಟೋಬರ್ 15, 2024
- ಅಪ್ಲೇ ಮಾಡಲು ಕೊನೆಯ ದಿನಾಂಕ- ನವೆಂಬರ್ 05, 2024
- ಪರೀಕ್ಷೆ ಹಾಲ್ಟಿಕೆಟ್ ನೀಡುವ ದಿನಾಂಕ- ಡಿಸೆಂಬರ್ ಮೊದಲ ವಾರ (2024)
- ಪರೀಕ್ಷೆಯ ದಿನಾಂಕ ಯಾವಾಗ- 14 ಡಿಸೆಂಬರ್ 2024
ಇದನ್ನೂ ಓದಿ:ಹೈಕೋರ್ಟ್ನಲ್ಲಿ ಭಾರೀ ಹುದ್ದೆಗಳ ನೇಮಕಾತಿ.. 100 ಅಲ್ಲ, 200 ಅಲ್ಲ 3 ಸಾವಿರಕ್ಕೂ ಹೆಚ್ಚು ಉದ್ಯೋಗಗಳು
ಅರ್ಜಿ ಶುಲ್ಕ ಎಷ್ಟು ಇದೆ..?
ಜನರಲ್, ಒಬಿಸಿ, ಸಾಮಾನ್ಯ ಅಭ್ಯರ್ಥಿಗಳು- 1,000 ರೂಪಾಯಿ
ಎಸ್ಸಿ, ಎಸ್ಟಿ, ವಿಶೇಷ ಚೇತನ ಅಭ್ಯರ್ಥಿಗಳು- 250 ರೂಪಾಯಿ
ವಯೋಮಿತಿ
21 ರಿಂದ 30 ವರ್ಷದ ಒಳಗಿನ ಅಭ್ಯರ್ಥಿಗಳಿಗೆ ಅವಕಾಶ
ವಿದ್ಯಾರ್ಹತೆ (ಆಯಾಯ ಉದ್ಯೋಗಕ್ಕೆ ತಕ್ಕಂತೆ)
ಪದವಿ, ಸ್ನಾತಕೋತ್ತರ ಪದವಿ, ಬಿಇ, ಬಿಟೆಕ್, ಎಂಇ, ಎಂಟೆಕ್, ಬಿಕಾಮ್, ಎಂಕಾಮ್, ಸಿಎ, ಕಾನೂನು ಪದವಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ