ಭಾರೀ ಮಳೆಗೆ ದೇವಾಲಯದ ಹೊರಬದಿಯ ಗೋಡೆ ಕುಸಿತ
ಅವಶೇಷಗಳ ಅಡಿಯಲ್ಲಿರುವ ಹಲವಾರು ಜನರು ಸಿಲುಕಿರುವ ಶಂಕೆ
ದೇವಸ್ಥಾನದಲ್ಲಿ ಆರತಿ ಬೆಳಗುವ ಹೊತ್ತಿನಲ್ಲಿ ಆತಂಕ ಸೃಷ್ಟಿಸಿದ್ದ ವರುಣ
ಭಾರೀ ಮಳೆಯಿಂದಾಗಿ ಉಜ್ಜಯಿನಿಯ ಮಹಾಕಾಳ ದೇವಾಲಯದ ಹೊರಬದಿಯ ಗೋಡೆ ಕುಸಿದಿದ್ದು, ಹಲವರು ಸಿಲುಕಿರುವ ಆತಂಕವಿದೆ. ಅವಶೇಷಗಳ ಅಡಿಯಲ್ಲಿರುವ ವ್ಯಕ್ತಿಗಳ ಪತ್ತೆಗೆ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಈ ದುರಂತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಈ ಬಗ್ಗೆ ಮಾಹಿತಿ ಇಲ್ಲಿದೆ.
ನಿನ್ನೆ ಸಂಜೆ ಇನ್ನೇನು ಆ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಆರತಿ ಬೆಳಗಬೇಕು. ಅಷ್ಟೊತ್ತಿಗಾಗಲೇ ವರುಣ ದೇವ ಎಂಟ್ರಿ ಕೊಟ್ಟು. ಈ ಅವಾಂತರವನ್ನ ಸೃಷ್ಟಿಸಿ ಬಿಟ್ಟಿದ್ದ.
ನಾಲ್ವರು ಗಾಯಾಳುಗಳು ಆಸ್ಪತ್ರೆಗೆ ಶಿಫ್ಟ್, ಇಬ್ಬರು ಸಾವು
ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರೋ ಮಹಾರಾಜವಾಡ ಶಾಲೆಯ ಸಮೀಪವಿರುವ ಗಡಿಗೋಡೆಯ ಒಂದು ಭಾಗವು ಭಾರೀ ನೀರಿನ ಹರಿವಿನಿಂದ ಕುಸಿದಿದೆ. ಗೋಡೆ ಕುಸಿತದಲ್ಲಿ ಓರ್ವ ಪುರುಷ ಮತ್ತು ಓರ್ವ ಮಹಿಳೆ ಸಾವನ್ನಪ್ಪಿರೋದು ದೃಢವಾಗಿದೆ. ಗಾಯಗೊಂಡ ನಾಲ್ವರಿಗೆ ಚಿಕಿತ್ಸೆಗಾಗಿ ಇಂದೋರ್‌ನ ಆಸ್ಪತ್ರೆಗೆ ಕಳುಹಿಸಲಾಗಿದೆ. ತೀವ್ರ ನಿಗಾ ವಹಿಸಿರೋ ಚಿಕಿತ್ಸೆ ಮುಂದುವರೆದಿದೆ.
ಇದನ್ನೂ ಓದಿ: ಕೆಂಪು, ನೀಲಿ, ಹಸಿರು.. ರೈಲಿನ ಬಣ್ಣಕ್ಕೂ ವೇಗಕ್ಕೂ ಇರೋ ಲಿಂಕ್ ಏನು? ಓದಲೇಬೇಕಾದ ಸ್ಟೋರಿ ಇದು!
ಧಾರಾಕಾರ ಮಳೆಯಲ್ಲೇ ಮುಂದುವರೆದ ರಕ್ಷಣಾ ಕಾರ್ಯ
ಇಬ್ಬರು ಮಕ್ಕಳು, ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷ ಸೇರಿದಂತೆ ಐದು ವ್ಯಕ್ತಿಗಳನ್ನು ಅವಶೇಷಗಳಿಂದ ಹೊರತೆಗೆಯುವಲ್ಲಿ ರಕ್ಷಣಾ ತಂಡ ಯಶಸ್ವಿಯಾಗಿದೆ. ತಕ್ಷಣ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇದೇ ಗೋಡೆ ಪಕ್ಕದಲ್ಲಿ ಹಲವರ ಅಂಗಡಿಗಳಿತ್ತು. ಸರಕುಗಳನ್ನ ಮಾರಾಟ ಮಾಡ್ತಿದ್ರು. ಹೀಗಾಗಿ ಗೋಡೆಯ ಅವಶೇಷಗಳಡಿಯಲ್ಲಿ ಇನ್ನೂ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಮಹಾಕಾಲ್ ದೇವಸ್ಥಾನದ ಆಡಳಿತ ಮಂಡಳಿಯವರು, ತಕ್ಷಣ ಮಹಾಕಲ್ ಪೊಲೀಸ್ ಠಾಣೆ ಮತ್ತು ದೇವಸ್ಥಾನದ ಸಿಬ್ಬಂದಿಗೆ ವಿಷಯ ಮುಟ್ಟಿಸಿ ರಕ್ಷಣಾ ಕಾರ್ಯಕ್ಕೆ ಮುಂದಾದ್ರು.
ಇದನ್ನೂ ಓದಿ: ವಿಕೋಪಕ್ಕೆ ತಿರುಗಿದ ತಮಿಳು ಸ್ಟಾರ್ ನಟನ ಡಿವೋರ್ಸ್ ಕೇಸ್.. ಜಯಂ ರವಿ, ಆರತಿ ಮಧ್ಯೆ ಮತ್ತೇನಾಯ್ತು?
ಮಧ್ಯಪ್ರದೇಶ ಮುಖ್ಯಮಂತ್ರಿ ಡಾ. ಮೋಹನ್ ಯಾದವ್, ತಮ್ಮ ಟ್ವೀಟ್‌ನಲ್ಲಿ ಉಜ್ಜಯಿನಿಯ ಘಟನೆ ಬಗ್ಗೆ ಬರೆದುಕೊಂಡಿದ್ದು, ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ 50,000 ರೂಪಾಯಿ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದ್ರು. ಒಟ್ಟಾರೆ, ಅಬ್ಬರದ ಮಳೆ ರಾತ್ರಿ ವೇಳೆಯಾಗಿರೋದ್ರಿಂದ ರಕ್ಷಣೆ ಕಾರ್ಯಕ್ಕೆ ಭಾರೀ ಅಡ್ಡಿಯಾಗಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ