/newsfirstlive-kannada/media/post_attachments/wp-content/uploads/2025/06/KERALA_F_35B_fighter_jet_New.jpg)
ಬ್ರಿಟಿಷ್ ಫೈಟರ್ ಜೆಟ್ ಎಫ್-35 ಬಿ ಕಳೆದ 2 ವಾರದಿಂದ ತಿರುವನಂತಪುರ ಏರ್​​ಪೋರ್ಟ್​​ನಲ್ಲಿ ರನ್ ವೇ ಬಳಿ ಕೆಟ್ಟು ನಿಂತಿತ್ತು. ಯುದ್ಧ ವಿಮಾನವನ್ನು ಏರ್​ಪೋರ್ಟ್​ನ ಹ್ಯಾಂಗರ್​ನಲ್ಲಿ ನಿಲ್ಲಿಸಲು ಸ್ಥಳಾವಕಾಶ ನೀಡುವುದಾಗಿ ಭಾರತ ಹೇಳಿದ್ದರೂ, ಬ್ರಿಟನ್ ನಿರಾಕರಿಸಿತ್ತು.
ಬ್ರಿಟನ್ ಹ್ಯಾಂಗರ್​ಗೆ ನಿಲ್ಲಿಸುವುದು ಬೇಡ ಎಂದೇ ಹೇಳಿತ್ತು. ಆದರೇ, ಈಗ ಯುದ್ಧ ವಿಮಾನವನ್ನು ಹ್ಯಾಂಗರ್​​​ನಲ್ಲಿ ನಿಲ್ಲಿಸಲು ಬ್ರಿಟನ್ ಒಪ್ಪಿಕೊಂಡಿದೆ. ಬ್ರಿಟನ್​​ನಿಂದ ಇಂಜಿನಿಯರಿಂಗ್ ಟೀಮ್ ಬಂದ ಬಳಿಕ ಯುದ್ಧ ವಿಮಾನವನ್ನು ಹ್ಯಾಂಗರ್​ಗೆ ಸ್ಥಳಾಂತರಿಸಲಾಗುತ್ತೆ ಎಂದು ದೆಹಲಿಯಲ್ಲಿರುವ ಬ್ರಿಟನ್ ಹೈಕಮೀಷನ್ ವಕ್ತಾರರು ಇಂದು ( ಜೂನ್27) ಹೇಳಿದ್ದಾರೆ.
ಇದನ್ನೂ ಓದಿ: ಹುಲಿಗಳ ಜೀವ ತೆಗೆದ್ರೆ ಎಷ್ಟು ವರ್ಷ ಜೈಲು ಶಿಕ್ಷೆ, ದಂಡ.. ನಿವೃತ್ತ ಅರಣ್ಯ ಅಧಿಕಾರಿ ಪೂವಯ್ಯ ಏನಂದ್ರು?
/newsfirstlive-kannada/media/post_attachments/wp-content/uploads/2025/06/KERALA_F_35B_fighter_jet.jpg)
ಎಫ್-35 ಬಿ ವಿಶ್ವದ ದುಬಾರಿ ಯುದ್ಧ ವಿಮಾನ ಎಂದೇ ಹೆಸರಾಗಿರುವ ಯುದ್ಧ ವಿಮಾನ. ತಾಂತ್ರಿಕ ತೊಂದರೆಯಿಂದ ತುರ್ತಾಗಿ ತಿರುವನಂತಪುರ ಏರ್​ಪೋರ್ಟ್​​ನಲ್ಲಿ ಲ್ಯಾಂಡಿಂಗ್​​​ಗೆ ಬ್ರಿಟನ್ ಅನುಮತಿ ಕೇಳಿತ್ತು. ಭಾರತ ಅನುಮತಿ ನೀಡಿದ ಬಳಿಕ ತಿರುವನಂತಪುರ ಏರ್​ಪೋರ್ಟ್​​ನಲ್ಲಿ ಲ್ಯಾಂಡಿಂಗ್ ಮಾಡಿದೆ. ಈ ಯುದ್ಧ ವಿಮಾನದಲ್ಲಿ ಹೈಡ್ರಾಲಿಕ್ ತೊಂದರೆ ಉಂಟಾಗಿದೆ. ಇದು ಏರ್​​ಪೋರ್ಟ್​​ನ ಬೇನಲ್ಲೇ ನಿಂತಿತ್ತು. ಇಂಗ್ಲೆಂಡ್​​ನಿಂದ ವಿಮಾನ ರಿಪೇರಿಗೆ ಟೆಕ್ನಿಷಿಯನ್ ಬಂದರೂ ರಿಪೇರಿ ಮಾಡಲು ಸಾಧ್ಯವಾಗಿರಲಿಲ್ಲ.
ಯುದ್ಧ ವಿಮಾನಕ್ಕೆ ತಿರುವನಂತಪುರ ಏರ್​ಪೋರ್ಟ್​​ನಲ್ಲಿ ಸಿಐಎಸ್‌ಎಫ್​​​ನಿಂದ ರಕ್ಷಣೆ ನೀಡಲಾಗಿದೆ. ಹ್ಯಾಂಗರ್​​ಗೆ ಫೈಟರ್ ಜೆಟ್ ಸ್ಥಳಾಂತರಿಸಿದರೇ, ಬೇರೆಯವರು ಹತ್ತಿರದಿಂದ ಫೈಟರ್ ಜೆಟ್ ನೋಡಬಹುದು ಎನ್ನುವ ಕಾರಣಕ್ಕೋ, ವಿಮಾನದ ತಂತ್ರಜ್ಞಾನದ ಬಗ್ಗೆ ಭಾರತವು ತಿಳಿದುಕೊಂಡು ಬಿಡುತ್ತೆ ಎಂಬ ಕಾರಣಕ್ಕೋ ಹ್ಯಾಂಗರ್ ಗೆ ಸ್ಥಳಾಂತರಿಸಲು ಬ್ರಿಟನ್ ಒಪ್ಪಿರಲಿಲ್ಲ. ಈಗ ಹ್ಯಾಂಗರ್​ ಸ್ಥಳಾಂತರಕ್ಕೆ ಬ್ರಿಟನ್ ಒಪ್ಪಿಕೊಂಡಿದೆ. ಎಮರ್ಜೆನ್ಸಿ ಸ್ಥಿತಿಯಲ್ಲಿ ಭಾರತಕ್ಕೆ ಬಂದು ಲ್ಯಾಂಡಿಂಗ್ ಆದ ವಿಮಾನದ ಹೈಡ್ರಾಲಿಕ್ ತೊಂದರೆಯನ್ನು ಸರಿಪಡಿಸಿ, ರೀಪೇರಿ ಮಾಡಲು ಬ್ರಿಟನ್ ಇಂಜಿನಿಯರ್​​ಗಳಿಗೆ 2 ವಾರವಾದರೂ, ಸಾಧ್ಯವಾಗಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
 Follow Us
 Follow Us
                                    


