ತನ್ನ ಕಾರನ್ನು ತಾನೇ ₹22 ಲಕ್ಷ ಕೊಟ್ಟು ಖರೀದಿಸಿದ ಆಸಾಮಿ.. ಅಸಲಿ ವಿಚಾರ ಗೊತ್ತಾಗಿದ್ದೇ ರೋಚಕ ಸ್ಟೋರಿ!

author-image
Veena Gangani
Updated On
ಹೊಸ ಕಾರು ಖರೀದಿಸುವವರಿಗೆ ಬಿಗ್ ಶಾಕ್‌.. ಹೊಸ ವರ್ಷಕ್ಕೆ ದುಬಾರಿ ದುನಿಯಾ! ಯಾವ ಕಾರಿಗೆ ಎಷ್ಟು ಹೆಚ್ಚಳ?
Advertisment
  • ಅದು ನನ್ನ ಹಳೆಯ ಕಾರು ಅಂತ ಪತ್ತೆ ಹಚ್ಚಿದ್ದೇಗೆ?
  • ತನ್ನದೇ ಕಾರನ್ನು ಮರಳಿ ಪಡೆದುಕೊಂಡಿದ್ದು ಹೇಗೆ?
  • 22 ಲಕ್ಷ ಕೊಟ್ಟು ಕಾರು ಖರೀದಿ ಮಾಡಿದ ವ್ಯಕ್ತಿಗೆ ಶಾಕ್

ವ್ಯಕ್ತಿಯೊಬ್ಬ ಒಂದಲ್ಲಾ ಎರಡಲ್ಲಾ ಬರೋಬ್ಬರಿ 22 ಲಕ್ಷ ರೂಪಾಯಿ ಕೊಟ್ಟು ತನ್ನ ಕಾರನ್ನೇ ತಾನೇ ಖರೀದಿಸಿದ ಘಟನೆ ಇಂಗ್ಲೆಂಡ್​ನಲ್ಲಿ ನಡೆದಿದೆ.

ಇದನ್ನೂ ಓದಿ: ‘ಭಾರತದಲ್ಲೇ ಇರಲು ಬಿಡಿ ಪ್ಲೀಸ್​’.. ಪಾಕಿಸ್ತಾನಿ ಸೀಮಾ ಹೈದರ್​ಗೆ ಗಡಿಪಾರು ಭೀತಿ!

ಹೌದು, ಇಂಗ್ಲೆಂಡ್ ಮೂಲದ ಇವಾನ್ ವ್ಯಾಲೆಂಟೈನ್ ಎಂಬ ವ್ಯಕ್ತಿಯೂ ಕದ್ದ ಕಾರನ್ನು ತಾನೇ ಮರಳಿ ಖರೀದಿಸಲು ಲಕ್ಷಗಟ್ಟಲೇ ಖರ್ಚು ಮಾಡಿರುವುದಾಗಿ ಹೇಳಿಕೊಂಡಿದ್ದಾನೆ. ಹೌದು, ವೆಸ್ಟ್ ಮಿಡ್‌ಲ್ಯಾಂಡ್ಸ್‌ನ ಸೋಲಿಹುಲ್‌ನವರಾದ ಇವಾನ್ ವ್ಯಾಲೆಂಟೈನ್ ಫೆಬ್ರವರಿ 28ರಂದು ಹೋಂಡಾ ಸಿವಿಕ್ ಟೈಪ್-ಆರ್‌ ಕಳ್ಳತನವಾಗಿತ್ತು. ಆ ಕಾರಿಗಾಗಿ ಎಷ್ಟೇ ಪತ್ತೆ ಹಚ್ಚಿದ್ದರೂ ಅದು ಸಿಕ್ಕಿರಲಿಲ್ಲ. ಕಾರನ್ನು ಕಳೆದುಕೊಂಡು ದುಃಖಿತರಾಗಿದ್ದ ಇವಾನ್ ವ್ಯಾಲೆಂಟೈನ್ ಅದೇ ರೀತಿಯ ಕಾರನ್ನು ಖರೀದಿ ಮಾಡಬೇಕು ಅಂತ ಯೋಚಿಸುತ್ತಾನೆ. ಆಗ ಸೆಕೆಂಡ್ ಹ್ಯಾಂಡ್ ಹೋಂಡಾ ಸಿವಿಕ್ ಅನ್ನು ಸುಮಾರು ರೂ. 22 ಲಕ್ಷ ಕೊಟ್ಟು ಖರೀದಿ ಮಾಡುತ್ತಾನೆ. ಆದ್ರೆ ವಿಪರ್ಯಾಸ ಎಂದರೆ ತಾನು ಈ ಹಿಂದೆ ಕಳೆದುಕೊಂಡಿದ್ದ ಕಾರನ್ನೇ ಸೆಕೆಂಡ್ ಹ್ಯಾಂಡ್ ರೂಪದಲ್ಲಿ ಖರೀದಿಸಿದ್ದರು.

publive-image

ತನ್ನದೇ ಕಾರು ಅಂತ ಗೊತ್ತಾಗಿದ್ದು ಹೇಗೆ?

ವ್ಯಾಲೆಂಟೈನ್ ಸೆಕೆಂಡ್ ಹ್ಯಾಂಡ್ ಕಾರನ್ನು ತನ್ನ ಮನೆಯಿಂದ 70 ಮೈಲಿ ದೂರಕ್ಕೆ ಹೋಗುತ್ತಿದ್ದಂತೆ ಕೊಂಚ ಅನುಮಾನ ಶುರುವಾಯ್ತು. ಆಗ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅದು ತನ್ನದೇ ಆದ ಹೋಂಡಾ ಸಿವಿಕ್ ಎಂದು ಅರಿವಾಗಿದೆ. ಒಂದೇ ಟೆಂಟ್ ಪೆಗ್ ಸೇರಿದಂತೆ ಎಲ್ಲವೂ ಹಳೆ ಕಾರಿನಂತೆ ಇದಿದ್ದು ಗೊತ್ತಾಯ್ತು. ಹೀಗಾಗಿ ಕಾರು ಮತ್ತೆ ಸಿಕ್ಕಿದ್ದಕ್ಕೆ ವ್ಯಾಲೆಂಟೈನ್ ಖುಷಿ ಪಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment