/newsfirstlive-kannada/media/post_attachments/wp-content/uploads/2025/06/Ukrainian-Drones-Strike.jpg)
ರಷ್ಯಾ ಮೇಲೆ ಉಕ್ರೇನ್ ಭಯಾನಕ ಡ್ರೋನ್ ದಾಳಿ ಮಾಡಿದೆ. ರಷ್ಯಾ ಒಳಗೆ ನುಗ್ಗಿರುವ ಉಕ್ರೇನ್ ಡ್ರೋನ್‌ಗಳು ರಷ್ಯಾದ ವಾಯುನೆಲೆ, ಮಿಲಿಟರಿ ವಿಮಾನಗಳನ್ನೇ ಟಾರ್ಗೆಟ್ ಮಾಡಿದೆ ಎಂದು ವರದಿಯಾಗಿದೆ.
ರಷ್ಯಾ ಮೇಲೆ ಉಕ್ರೇನ್ ನಡೆಸಿದ ಅತಿ ದೊಡ್ಡ ದಾಳಿ ಇದು ಎಂದು ವರದಿಯಾಗಿದೆ. ಉಕ್ರೇನ್ ಮಾಧ್ಯಮಗಳ ವರದಿ ಪ್ರಕಾರ ರಷ್ಯಾದ ಹಲವು ವಾಯುನೆಲೆಗಳ ಡ್ರೋನ್ ದಾಳಿ ಮಾಡಲಾಗಿದೆ. ಈ ದಾಳಿಯಲ್ಲಿ 40ಕ್ಕೂ ಹೆಚ್ಚು ಮಿಲಿಟರಿ ವಿಮಾನಗಳೇ ಸುಟ್ಟು ಭಸ್ಮವಾಗಿವೆ ಎನ್ನಲಾಗಿದೆ.
ಉಕ್ರೇನ್ ಡ್ರೋನ್‌ಗಳು ತನ್ನ ಗಡಿಯಿಂದ 1000 ಕಿಲೋ ಮೀಟರ್ ದೂರದವರೆಗೂ ನುಗ್ಗಿ ಈ ದಾಳಿ ನಡೆಸಿದೆ. ಪೂರ್ವ ಸೈಬೀರಿಯಾದ ವಾಯುನೆಲೆಗಳನ್ನೇ ಉಕ್ರೇನ್ ದಾಳಿ ಮಾಡಿ ರಷ್ಯಾಗೆ ಬಹಳ ದೊಡ್ಡ ನಷ್ಟವಾಗುವಂತೆ ಮಾಡಿದೆ. ಉಕ್ರೇನ್ ದಾಳಿಯ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
Incredible.
Ukraine is destroying Russia strategic bomber fleet like its fucking nothing.
Amazing day. pic.twitter.com/cVYp2NqcrT
— Jay in Kyiv (@JayinKyiv)
Incredible.
Ukraine is destroying Russia strategic bomber fleet like its fucking nothing.
Amazing day. pic.twitter.com/cVYp2NqcrT— Jay in Kyiv (@JayinKyiv) June 1, 2025
">June 1, 2025
ಇದನ್ನೂ ಓದಿ: ಆಪರೇಷನ್ ಸಿಂಧೂರ: ಭಾರತದ ಫೈಟರ್ ಜೆಟ್‌ಗಳಿಗೆ ಹಾನಿ! ಏನಿದು ಟ್ಯಾಕ್ಟಿಕಲ್ ಮಿಸ್ಟೇಕ್? VIDEO
ರಷ್ಯಾ, ಉಕ್ರೇನ್ ಯುದ್ಧದಲ್ಲಿ ಇಂದು ನಡೆದಿರೋದು ಭಯಾನಕ ದಾಳಿ ಎನ್ನಲಾಗುತ್ತಿದೆ. ಡ್ರೋನ್ ದಾಳಿಯಲ್ಲಿ ರಷ್ಯಾದ A-50, Tu-95 ಮತ್ತು Tu-22M3 ಬಾಂಬರ್‌ಗೆ ಹಾನಿಯಾಗಿದೆ. ಉಕ್ರೇನ್ ಡ್ರೋನ್ ದಾಳಿಯಿಂದ ರಷ್ಯಾಕ್ಕೆ ರಾಷ್ಟ್ರೀಯ ಅವಮಾನವಾಗಿದೆ ಎಂದು ರಷ್ಯಾ ಮಾಧ್ಯಮಗಳು ವರದಿ ಮಾಡಿವೆ. ರಷ್ಯಾಗೆ ಸರಿ ಸುಮಾರು 2 ಬಿಲಿಯನ್ ಡಾಲರ್ ಅಧಿಕ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ