9/11 ಮಾದರಿ ಮತ್ತೊಂದು ಅಟ್ಯಾಕ್‌.. ರಷ್ಯಾದ ಮೇಲೆ ಡ್ರೋನ್ ದಾಳಿ; ಭಯಾನಕ ವಿಡಿಯೋ ಸೆರೆ!

author-image
Gopal Kulkarni
Updated On
9/11 ಮಾದರಿ ಮತ್ತೊಂದು ಅಟ್ಯಾಕ್‌.. ರಷ್ಯಾದ ಮೇಲೆ ಡ್ರೋನ್ ದಾಳಿ; ಭಯಾನಕ ವಿಡಿಯೋ ಸೆರೆ!
Advertisment
  • ರಷ್ಯಾದ ಕಝಾನ್​ನಲ್ಲಿ ಭೀಕರ ಡ್ರೋನ್ ದಾಳಿ
  • 9/11 ಘಟನೆ ನೆನಪಿಸುವಂತಹ ಭೀಕರ ದಾಳಿ
  • WTC ಮಾದರಿಯಲ್ಲಿ ನಡೆದ ಭೀಕರ ಅಟ್ಯಾಕ್

ರಷ್ಯಾದ ಕಝಾನ್​ ನಗರದ ವಸತಿ ಕಟ್ಟದ ಮೇಲೆ ದಾಳಿ ನಡೆದಿದೆ. ಅನಾಮಿಕ ವೈಮಾನಿಕ ವಾಹನಗಳಿಂದ ಈ ಒಂದು ದಾಳಿ ನಡೆದಿದ್ದು 2001ರಲ್ಲಿ ಬಿನ್ ಲಾಡೆನ್ ಅಮೆರಿಕಾದ ವಿಶ್ವ ವಾಣಿಜ್ಯ ಕೇಂದ್ರದ ಕಟ್ಟಡ ಮೇಲೆ ನಡೆಸಿದ ಮಾದರಿಯಲ್ಲಿಯೇ ಈ ಒಂದು ದಾಳಿ ನಡೆದಿದೆ.
ಕಝಾನ್​​ ನಗರದ ಐಷಾರಾಮಿ ವಸತಿ ಕಟ್ಟಡದ ಮೇಲೆ ಈ ಒಂದು ದಾಳಿ ನಡೆದಿದ್ದು. ದಾಳಿಯಿಂದಾಗಿ ಕಟ್ಟಡದ ಒಂದು ಭಾಗದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಈ ಒಂದು ದಾಳಿಯನ್ನು ಉಕ್ರೇನ್​ ನಡೆಸಿರುವ ಸಾಧ್ಯತೆ ಇದೆ ಎಂದು ರಷ್ಯಾ ಹೇಳಿದೆ.

ಈ ಒಂದು ದಾಳಿಯನ್ನು ಕಣ್ಣಾರೆ ಕಂಡವರು ವಿಡಿಯೋ ಮಾಡಿಕೊಂಡಿದ್ದಾರೆ. ಕಟ್ಟಡದ ಮೇಲೆ ದಾಳಿ ನಡೆದದ್ದು ಹಾಗೂ ಆನಂತರ ಆದ ಭಯಾನಕ ಪರಿಣಾಮಗಳು ಆ ವಿಡಿಯೋದಲ್ಲಿ ಕಂಡು ಬಂದಿವೆ. ಕಟ್ಟಡದ ಮೇಲೆ ನಡೆದ ಡ್ರೋನ್ ದಾಳಿ  ಕಝಾನ್​ ಏರ್​ಪೋರ್ಟ್​​ನ  ವಿಮಾನ ಹಾರಾಟದ ಮೇಲೂ ಪರಿಣಾಮ ಬೀರಿದೆ. ತಾತ್ಕಾಲಿಕವಾಗಿ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ ಎಂದು ರಷ್ಯಾದ ಮಾಧ್ಯಮಗಳು ವರದಿ ಮಾಡಿವೆ.


">December 21, 2024


ಇದನ್ನೂ ಓದಿ: ‘ಡಿಂಗ ಡಿಂಗ’.. ಮಕ್ಕಳು, ಮಹಿಳೆಯರನ್ನೇ ಕಾಡುತ್ತಿದೆ ಈ ವಿಲಕ್ಷಣ ಕಾಯಿಲೆ; ಔಷಧಿಯೇ ಇಲ್ಲ!

ದಾಳಿ ನಡೆದ ಕೂಡಲೇ ತುರ್ತುಸೇವೆಯ ಎಲ್ಲಾ ಘಟಕಗಳು ಘಟನೆ ನಡೆದ ಸ್ಥಳಕ್ಕೆ ಧಾವಿಸಿವೆ. ಸದ್ಯಕ್ಕೆ ದಾಳಿ ನಡೆದ ಜಾಗದಲ್ಲಿ ಇರುವ ನಾಗರಿಕರನ್ನು ಬೇರೆಡೆಗೆ ತಾತ್ಕಾಲಿಕವಾಗಿ ಸ್ಥಳಾಂತರಗೊಳಿಸಲಾಗಿದೆ. ಡ್ರೋನ್ ದಾಳಿಯಿಂದ ಯಾವುದೇ ರೀತಿಯ ಸಾವು-ನೋವುಗಳು ಸಂಭವಿಸಿಲ್ಲ ಎಂದು ಹೇಳಲಾಗಿದೆ.

ಇದನ್ನೂ ಓದಿ:ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿರುವ ಸುನಿತಾ ವಿಲಿಯಮ್ಸ್ & ಬುಚ್; ಶಾಕಿಂಗ್ ನ್ಯೂಸ್ ಕೊಟ್ಟ ನಾಸಾ!

ಈ ಬಗ್ಗೆ ಮಾತನಾಡಿರುವ ರಷ್ಯಾದ ರಕ್ಷಣಾ ಸಚಿವ ಉಕ್ರೇನ್​ನಿಂದ ಹಾರಿಸಲ್ಪಟ್ಟ ಅನಾಮಿಕ ವೈಮಾನಿಕ ವಾಹನದಿಂದಾಗಿ ಈ ಒಂದು ದುರ್ಘಟನೆ ನಡೆದಿದೆ. ಉಕ್ರೇನ್​ಗೆ ಈಗಾಗಲೇ ನ್ಯಾಟೊ ಪಡೆಯನ್ನು ಸೇರದಿರುವಂತೆ ಪುಟಿನ್ ಸರ್ಕಾರ ಬೇಡಿಕೆಯಿಟ್ಟದೆ ಆದ್ರೆ ಉಕ್ರೇನ್ ಮತ್ತು ಪಾಶ್ಚಿಮಾತ್ಯ ದೇಶಗಳು ಈ ಬೇಡಿಕೆಯನ್ನು ತಿರಸ್ಕರಿಸಿವೆ. ಈ ದಾಳಿಯ ಹಿಂದೆ ಉಕ್ರೇನ್​ ಇರುವುದು ಖಚಿತ ಎಂದು ಹೇಳಿದ್ದಾರೆ.
ರಷ್ಯಾ ಹಾಗೂ ಉಕ್ರೇನ್​ನ ನಡುವೆ ಈ ಒಂದು ಕದನ ಆರಂಭವಾಗಿ ಬರುವ ಫೆಬ್ರವರಿಗೆ 3 ವರ್ಷಗಳ ತುಂಬುತ್ತವೆ, ಈ ಮೂರು ವರ್ಷದ ಅವಧಿಯಲ್ಲಿ ರಷ್ಯಾದ ಗಡಿಯೊಳಗೆ ಸಾಕಷ್ಟು ಉಕ್ರೇನ್​ನ ಡ್ರೋನ್​ಗಳು ಹಾರಾಟ ನಡೆಸಿವೆ. ಆದ್ರೆ ಈ ಬಾರಿ ಗಡಿದಾಟಿ ಬಂದ ಡ್ರೋನ್​ಗಳು ತಮ್ಮ ಗುರಿಮುಟ್ಟುವಲ್ಲಿ ಯಶಸ್ವಿಯಾಗಿವೆ. ಒಂದು ಡ್ರೋನ್​ನನ್ನು ಹೊಡೆದುರುಳಿಸುವಲ್ಲಿ ನಮ್ಮ ಸೇನಾ ಪಡೆ ಯಶಸ್ವಿಯಾಗಿದೆ ಎಂದು ರಷ್ಯಾದ ಡಿಫೆನ್ಸ್ ಮಿನಿಸ್ಟರ್ ಆ್ಯಂಡ್ರೆ ಬೆಲೌಸೊವ್ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment