Ullu, ALTT, Desiflix ಸೇರಿ 25 ಒಟಿಟಿ ಬ್ಯಾನ್! ಕೇಂದ್ರದ ಈ ನಿರ್ಧಾರಕ್ಕೆ ಕಾರಣ ಏನು..?

author-image
Ganesh
Updated On
Ullu, ALTT, Desiflix ಸೇರಿ 25 ಒಟಿಟಿ ಬ್ಯಾನ್! ಕೇಂದ್ರದ ಈ ನಿರ್ಧಾರಕ್ಕೆ ಕಾರಣ ಏನು..?
Advertisment
  • ಬ್ಯಾನ್ ಮಾಡಿ ಇಂಟರ್ನೆಟ್ ಸೇವಾ ಪೂರೈಕೆದಾರರಿಗೆ ನಿರ್ದೇಶನ
  • ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ ಮಹತ್ವದ ನಿರ್ಧಾರ
  • ಬ್ಯಾನ್ ಆಗಿರುವ ಒಟಿಟಿಗಳು ಯಾವ್ಯಾವುದು..?

Ullu, ALTT, Desiflix, Big Shots ಸೇರಿದಂತೆ ಒಟ್ಟು 25 ಜನಪ್ರಿಯ ಒಟಿಟಿಗಳನ್ನ ಭಾರತ ಸರ್ಕಾರ ಬ್ಯಾನ್ ಮಾಡಿದೆ. ಕಾನೂನು ಬಾಹಿರ ಮತ್ತು ಅಶ್ಲೀಲ ವಿಷಯವನ್ನು ಹತ್ತಿಕ್ಕುವ ಭಾಗವಾಗಿ ಸರ್ಕಾರ ಇಂಥ ನಿರ್ಧಾರ ತೆಗೆದುಕೊಂಡಿದೆ.

ಬ್ಯಾನ್ ಮಾಡಿರುವ ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ (MIB), ಇಂಟರ್​ನೆಟ್ ಸೇವಾ ಪೂರೈಕೆದಾರರಿಗೆ ನಿರ್ದೇಶನ ನೀಡಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 ಮತ್ತು ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮ- 2021 ಅಡಿಯಲ್ಲಿ ತೆಗೆದು ಹಾಕಲು ಸೂಚನೆ ನೀಡಿದೆ.

ಇದನ್ನೂ ಓದಿ: ಕೆಟ್ಟ ನಿರ್ಧಾರಕ್ಕೂ ಮುನ್ನ ತಂಗಿಗೆ ಮೆಸೇಜ್.. ಗ್ರಾ.ಪಂ ಸದಸ್ಯನ ಪುತ್ರಿ ಮಾಡಿದ ಆರೋಪ ಏನು?

ಬ್ಯಾನ್ ಆಗಿರುವ ಒಟಿಟಿ ಆ್ಯಪ್​​ಗಳ ವಿರುದ್ಧ ಮಿನಿಸ್ಟ್ರಿ ಆಫ್ ಎಲೆಕ್ಟ್ರಾನಿಕ್ಸ್​ ಅಂಡ್ ಇನ್ಫಾರ್ಮೇಷನ್ ಟೆಕ್ನಾಲೊಜಿ (MeitY)ಗೆ ಸಾಲು ಸಾಲು ದೂರುಗಳು ಬಂದಿದ್ದವು. ಕಾಮ ಪ್ರಚೋದನೆಗೆ ಸಂಬಂಧಿಸಿ ವೆಬ್​ ಸೀರೀಸ್​ಗಳು ಪ್ರಸಾರವಾಗುತ್ತಿರುವ ಬಗ್ಗೆ ದೂರುಗಳಿದ್ದವು. ಈ ಸಾಫ್ಟ್ ಫೋರ್ನೋಗ್ರಫಿ ಮೆಟೆರಿಯಲ್​ಗಳು ವಿಶೇಷವಾಗಿ ಮಕ್ಕಳಿಗೆ ಸುಲಭವಾಗಿ ಸಿಗುತ್ತಿದ್ದವು.

ಯಾವೆಲ್ಲ ಓಟಿಟಿ ಬ್ಯಾನ್..?

  • Dreams Films
  • Neon X VIP
  • MoodX
  • Besharams
  • Voovi
  • Mojflix
  • Yessma
  • Hunters
  • Hot Shots VIP
  • Fugi
  • Uncut Adda
  • Rabbit
  • Tri Flicks
  • Xtramood
  • Chikooflix
  • X Prime
  • Nuefliks
  • Prime Play
  • Ullu
  • ALTT
  • Desiflix
  • Big Shots

ಇದನ್ನೂ ಓದಿ: ಕಾರು ಡ್ರೈವರ್​​ ಮೇಲೆ MBA ವಿದ್ಯಾರ್ಥಿನಿಗೆ ಲವ್.. ಮದ್ವೆಯಾದ ಒಂದೇ ವರ್ಷದಲ್ಲಿ ಘೋರ ದುರಂತ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment