newsfirstkannada.com

ಮಾಡಿದ್ರೆ ರಾಜ್‌ಕುಮಾರ್ ಕುಟುಂಬದ ಜೊತೆ ಸಿನಿಮಾ ಮಾಡ್ಬೇಕು.. ದರ್ಶನ್ ಮಾತಿನ ಬಳಿಕ ಉಮಾಪತಿ ಹೀಗಂದಿದ್ದು ಯಾಕೆ?

Share :

Published February 23, 2024 at 3:59pm

Update February 23, 2024 at 4:00pm

  ಸಿನಿಮಾ ಮಾಡೋದಾದ್ರೆ ದೊಡ್ಡ ಮನೆಗೆ ಮಾಡಬೇಕು ಅಂದಿದ್ದೇಕೆ?

  ನಿರ್ಮಾಪಕರೇ ದೇವರು ಅಂತಾ ಟ್ವೀಟ್​ ಮಾಡಿದ್ದ ಉಪಾಮತಿ ಗೌಡ

  ಸಮಾಜದಲ್ಲಿ ತೂಕವಿರುವ ವ್ಯಕ್ತಿ ಘನತೆಯಿಂದ ನಡೆದುಕೊಳ್ಳಬೇಕು

ಬೆಂಗಳೂರು: ಕಾಟೇರ ಸಿನಿಮಾ ಟೈಟಲ್‌ ವಿವಾದದಲ್ಲಿ ನಟ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ಗೌಡ ಅವರ ವಾಗ್ವಾದ ಇನ್ನೂ ನಿಂತಿಲ್ಲ. ದರ್ಶನ್ ಮಾತಿಗೆ ಕೌಂಟರ್ ಕೊಟ್ಟಿದ್ದ ನಿರ್ಮಾಪಕ ಉಮಾಪತಿ ಗೌಡ ಇದೀಗ ದೊಡ್ಮನೆಯನ್ನು ಎಳೆದು ತಂದಿದ್ದಾರೆ. ವರನಟ ಡಾ. ರಾಜ್ ಕುಮಾರ್ ಹಾಕಿದ ಆಲದ ಮರ. ಸಿನಿಮಾ ಮಾಡೋದಾದ್ರೆ ದೊಡ್ಡಮನೆಗೆ ಮಾಡಿ ಅಂದಿದ್ರು ಆದರೆ ನಮಗೆ ಈಗ ಅನುಭವವಾಗ್ತಿದೆ ಎಂದು ನಿರ್ಮಾಪಕ ಉಮಾಪತಿ ಗೌಡ ಹೇಳಿದ್ದಾರೆ.

ಇದೇ ವಿಚಾರವಾಗಿ ನಿರ್ಮಾಪಕ ಉಮಾಪತಿ ಗೌಡ ಅವರು ‘‘ನಿರ್ಮಾಪಕರೇ ದೇವರು’’ ಎಂದು ಟ್ವೀಟ್​​ ಮಾಡಿದ್ದರು. ಇದೇ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಹೌದು ಡಾ. ರಾಜ್ ಕುಮಾರ್ ಹಾಕಿದ ಆಲದ ಮರ ಅಲ್ವಾ. ಸಿನಿಮಾ ಮಾಡೋದಾದ್ರೆ ದೊಡ್ಡ ಮನೆಗೆ ಬಂದು ಮಾಡಿ. ಅದರಲ್ಲಿ ಒಂದು ತೂಕವಿರುತ್ತೆ ಅಂತಾ ಅನೇಕರು ಹೇಳುತ್ತಿದ್ದರು. ಆದರೆ ನಮಗೆ ಈಗ ಅನುಭವವಾಗ್ತಿದೆ ಎಂದರು.

ಇದನ್ನೂ ಓದಿ: VIDEO: ಹೆಣ್ಣುಮಕ್ಕಳ ಬಗ್ಗೆ ಮಾತಾಡುವಾಗ ನಾಲಿಗೆ ಹಿಡಿತದಲ್ಲಿ ಇರಲಿ.. ನಟ ದರ್ಶನ್​ಗೆ ವಾರ್ನಿಂಗ್​​​

ಹೀಗೆ ಮಾತನ್ನು ಮುಂದುವರೆಸಿದ ಅವರು, ಎಲ್ಲರಿಗೂ ಸಮಸ್ಯೆಗಳು ಬರುತ್ತವೆ ಸಾರ್. ಅದನ್ನು ಹ್ಯಾಂಡಲ್ ಮಾಡುವ ರೀತಿ ಗೊತ್ತಿರಬೇಕು. ಸಮಾಜದಲ್ಲಿ ತೂಕವಿರುವ ವ್ಯಕ್ತಿ ಘನತೆಯಿಂದ ನಡೆದುಕೊಳ್ಳಬೇಕು. ನಾ ಆವಾಗಲೇ ಹೇಳಿದಂತೆ ದೇಹ ತೂಕವಿದ್ದರೆ ಸಾಲದು, ಮಾತು ಕೂಡ ತೂಕವಿರಬೇಕು ಎಂದು ನಟ ದರ್ಶನ್ ವಿರುದ್ಧ ನಿರ್ಮಾಪಕ ಉಮಾಪತಿ ಗೌಡ ಕಿಡಿಕಾರಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಾಡಿದ್ರೆ ರಾಜ್‌ಕುಮಾರ್ ಕುಟುಂಬದ ಜೊತೆ ಸಿನಿಮಾ ಮಾಡ್ಬೇಕು.. ದರ್ಶನ್ ಮಾತಿನ ಬಳಿಕ ಉಮಾಪತಿ ಹೀಗಂದಿದ್ದು ಯಾಕೆ?

https://newsfirstlive.com/wp-content/uploads/2024/02/umapathi.jpg

Load More