/newsfirstlive-kannada/media/post_attachments/wp-content/uploads/2024/02/Darshan_Umapathy.jpg)
ಬೆಂಗಳೂರು: ಕೊಲೆ ಕೇಸ್​ವೊಂದರಲ್ಲಿ ನಟ ದರ್ಶನ್​​ ಅರೆಸ್ಟ್​ ಆಗಿದ್ದಾರೆ. ಕೋರ್ಟ್​ ಕೂಡ ದರ್ಶನ್​ ಮತ್ತು ಗ್ಯಾಂಗನ್ನು ಪೊಲೀಸ್​ ಕಸ್ಟಡಿಗೆ ಒಪ್ಪಿಸಿದೆ. ನಟ ದರ್ಶನ್​ ವಿರುದ್ಧ ಸಾರ್ವಜನಿಕರು ಭಾರೀ ಆಕ್ರೋಶ ಹೊರಹಾಕಿದ್ದಾರೆ. ಈ ಮಧ್ಯೆ ರಾಬರ್ಟ್​ ಸಿನಿಮಾ ನಿರ್ಮಾಪಕ ಉಮಾಪತಿ ಶ್ರೀನಿವಾಸ್​ ಗೌಡ ಮಾತಾಡಿರೋ ಮಾತು ವೈರಲ್​ ಆಗಿದೆ.
ಈ ಹಿಂದೆ ತನಗೂ ದರ್ಶನ್​ಗೂ ಗಲಾಟೆ ಆಗಿದ್ದಾಗ ಮಾತಾಡಿದ್ದ ವಿಡಿಯೋವೊಂದನ್ನು ನಿರ್ಮಾಪಕ ಉಮಾಪತಿ ಶ್ರೀನಿವಾಸ್​ ಗೌಡ ಅವರು ಇನ್​ಸ್ಟಾದಲ್ಲಿ ಸ್ಟೋರಿಗೆ ಹಾಕಿದ್ದಾರೆ. ದರ್ಶನ್​ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಉಮಾಪತಿ ಗೌಡ, ಧೈರ್ಯ ಇರಬೇಕು. ಯಾವುದೇ ಕಾರಣಕ್ಕೂ ಭಂಡ ಧೈರ್ಯ ಇರಬಾರದು. ಅಂತವನಿಗೆ ಕಾಲ ಇಲ್ಲ ಎಂದಿದ್ದಾರೆ.
View this post on Instagram
ಬುದ್ಧಿವಂತ ಬದುಕಬಹುದು, ಅಮಾಯಕ ಬದುಕಬುದು. ಆದರೆ, ಅತಿ ಬುದ್ಧಿವಂತನಿಗೆ ಕಾಲ ಇಲ್ಲ. ಬದುಕೋನು ಕೊನೆವರೆಗೂ ಬುದ್ಧಿವಂತಿಕೆಯಿಂದ ಬದುಕಬೇಕು, ಭಂಡ ಧೈರ್ಯ ಇರೋರು ಬದುಕೋಕೆ ಸಾಧ್ಯವಿಲ್ಲ. ಜನ ಇದಾರೆ ಜೈಕಾರ ಹಾಕ್ತಾರೆ ಎಂದು ಮೆರೆದರೆ, ಮುಂದೊಂದು ದಿನ ಮಣ್ಣಾಗ್ತೀವಿ ಎಂದಿದ್ದರು.
ಇದನ್ನೂ ಓದಿ:ಅಯ್ಯೋ ತಗಡೇ.. ನಟ ದರ್ಶನ್ ಅರೆಸ್ಟ್ ಆದ್ಮೇಲೆ ಉಮಾಪತಿ ವಿಡಿಯೋಗಳು ಸಖತ್ ವೈರಲ್!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ