newsfirstkannada.com

’ಪದ ಬಳಸುವಾಗ ಎಚ್ಚರಿಕೆ ಇರಬೇಕು, ನಂದೇನಿದ್ರೂ ಫೇಸ್​ ಟು ಫೇಸ್’- ದರ್ಶನ್​​ಗೆ ಉಮಾಪತಿ ವಾರ್ನಿಂಗ್​

Share :

Published February 20, 2024 at 5:48pm

  ನಟ ದರ್ಶನ್​ಗೆ ನಿರ್ಮಾಪಕ ಉಮಾಪತಿ ಸಖತ್​ ಕೌಂಟರ್​​​

  ನಂದೇನಿದ್ರೂ ಫೇಸ್​ ಟು ಫೇಸ್​ ಎಂದ ರಾಬರ್ಟ್​ ಪ್ರೊಡ್ಯೂಸರ್​​

  ಪದ ಬಳಸುವಾಗ ಎಚ್ಚರಿಕೆಯಿಂದ ಇರಬೇಕು ಎಂದು ವಾರ್ನಿಂಗ್​​!

ತನ್ನನ್ನು ತಗಡು ಎಂದು ಕರೆದಿದ್ದ ಚಾಲೆಂಜಿಂಗ್​ ಸ್ಟಾರ್​​ ದರ್ಶನ್ ಅವರಿಗೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್​ ಕೌಂಟರ್​ ಕೊಟ್ಟಿದ್ದಾರೆ. ಈ ಸಂಬಂಧ ನ್ಯೂಸ್​ಫಸ್ಟ್​ ಜತೆ ಮಾತಾಡಿದ ಉಮಾಪತಿ, ದರ್ಶನ್​ ಅವರು ನನಗೆ ಮಾತಾಡಿದ್ರು ಎಂದು ಬೇಜಾರೇನಿಲ್ಲ. ಸಮಯ ಸಂದರ್ಭ ಹಾಗೇ ಮಾತಾಡಿಸಿರಬೇಕು. ಪದಗಳನ್ನು ಬಳಸಬೇಕಾದ್ರೆ ಚೂರು ಎಚ್ಚರಿಕೆಯಿಂದ ಇರಬೇಕು ಎಂದರು.

ನಾನು ದರ್ಶನ್​ ಅವರ ಬೆಳವಣಿಗೆಯನ್ನೇ ಇಷ್ಟ ಪಡ್ತೀನಿ. ಅವರು ಬೆಳೆದಷ್ಟು ಒಂದಷ್ಟು ಜನಕ್ಕೆ ಮಾದರಿಯಾಗಿ ಇರ್ತಾರೆ. ಎಲ್ಲರಿಗೂ ಮಾದರಿಯಾಗಿ ಕೊನೆವರೆಗೂ ದರ್ಶನ್​ ಅವರು ಇರಬೇಕು ಎಂದು ನಾನು ಭಾವಿಸ್ತೀನಿ. ಕಾರಣ ಗೆಲುವು ಲೈಫ್​ ಟೈಮ್​ ಇರಲ್ಲ. ಗೆದ್ದಾಗ ತಗ್ಗಿಬಗ್ಗಿ ನಡೆಯಬೇಕು, ಸೋತಾಗ ಏನು ಮಾಡಿದ್ರು ನಡೆಯುತ್ತೆ. ಗೆದ್ದಾಗ ಎಲ್ಲರ ಕಣ್ಣು ನಮ್ಮ ಮೇಲೆ ಇರುತ್ತೆ, ಸೋತರೆ ಯಾರು ನಮ್ಮನ್ನು ನೋಡಲ್ಲ ಎಂದರು.

ದರ್ಶನ್​ ಅವರು ಮಾತಾಡಿದ್ದು ಸೂಕ್ತ ಅನಿಸಲಿಲ್ಲ. ಅವರು ಮಾತಾಡಿದ್ದು ಅವರಿಗೆ ಸರಿ ಅನಿಸಬೇಕು. ನನ್ನಿಂದ ಏನಾದ್ರೂ ತಪ್ಪಿದ್ರೆ ನಾನು ಕ್ಷಮೆ ಕೇಳ್ತೀನಿ. ನನ್ನದು ತಪ್ಪೇನಿಲ್ಲ, ಕ್ಷಮೆ ಕೇಳುವ ಪ್ರಮೇಯ ಕೂಡ ಇಲ್ಲ. ನನ್ನ ಹೇಳಿಕೆಗೆ ನಾನು ಈಗಲೂ ಬದ್ಧ, ನಾನು ಯೂಟರ್ನ್​ ಹೊಡೆಯೋ ಗಿರಾಕಿ ಅಲ್ಲ. ಸಮಸ್ಯೆ ಬಂದಾಗ ಬೆನ್ನು ತೋರಿಸಲ್ಲ, ನಂದೇನಿದ್ರೂ ಫೇಸ್​ ಟು ಫೇಸ್​​ ಅಷ್ಟೇ ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

’ಪದ ಬಳಸುವಾಗ ಎಚ್ಚರಿಕೆ ಇರಬೇಕು, ನಂದೇನಿದ್ರೂ ಫೇಸ್​ ಟು ಫೇಸ್’- ದರ್ಶನ್​​ಗೆ ಉಮಾಪತಿ ವಾರ್ನಿಂಗ್​

https://newsfirstlive.com/wp-content/uploads/2024/02/Umapathy_Darshan.jpg

Load More