/newsfirstlive-kannada/media/post_attachments/wp-content/uploads/2024/11/UMPIRE.jpg)
- ಕ್ರಿಕೆಟ್ ಅಂಪೈರ್ ಆಗಲು ನೀವು ಏನು ಮಾಡಬೇಕು?
- ಐಸಿಸಿ ಅಂಪೈರ್ ಆಗಿ ಬಡ್ತಿ ಪಡೆದರೆ ಸಂಬಳ ಎಷ್ಟು?
- ಕ್ರಿಕೆಟ್ ಆಟ ಆರಾಧಿಸುವುದರಲ್ಲಿ ಭಾರತ ಅಗ್ರಸ್ಥಾನ
ಕ್ರಿಕೆಟ್​ ಆಟವನ್ನು ಆರಾಧಿಸುವುದರಲ್ಲಿ ಭಾರತ ಅಗ್ರಸ್ಥಾನದಲ್ಲಿದೆ. ಪಂದ್ಯಾವಳಿಗಳನ್ನು ಹಬ್ಬದ ರೀತಿಯಲ್ಲಿ ಆಯೋಜಿಸಿ ಸಂಭ್ರಮಿಸುತ್ತಾರೆ. ಹೀಗಿದ್ದೂ ಈ ಆಟದ ಬೇರುಗಳು ಇಂಗ್ಲೆಂಡ್​​ನಲ್ಲಿವೆ. ಆದರೂ ಭಾರತ ಕ್ರಿಕೆಟ್​ನಲ್ಲಿ ಪ್ರಾಬಲ್ಯ ಹೊಂದಿದೆ. ಏಕೆಂದರೆ ಭಾರತ ವಿಶ್ವದ ಅತ್ಯುತ್ತಮ ಕ್ರಿಕೆಟ್ ಪ್ರತಿಭೆಗಳನ್ನು ಉತ್ಪಾದಿಸುತ್ತದೆ.
ಭಾರತದಂತಹ ಕ್ರಿಕೆಟ್ ಪ್ರೇಮಿ ದೇಶದಲ್ಲಿ.. ಬಾಲ್ಯದಲ್ಲಿ ಕ್ರಿಕೆಟ್ ಆಡುವ ಪ್ರತಿಯೊಬ್ಬರೂ ಟೀಂ ಇಂಡಿಯಾ ಪರ ಆಡುವ ಕನಸನ್ನು ಕಾಣುತ್ತಾರೆ. ಎಲ್ಲರಿಗೂ ಭಾರತೀಯ ಕ್ರಿಕೆಟ್ ತಂಡವನ್ನು ಸೇರಲು ಸಾಧ್ಯವಿಲ್ಲ. ಕ್ರಿಕೆಟ್​ಗೆ ಸಂಬಂಧಿಸಿದಂತೆ ಇನ್ನೇನು ಮಾಡಬಹುದು ಎಂಬ ಪ್ರಶ್ನೆ ಬಂದರೆ ಅದು ಅಂಪೈರಿಂಗ್! ಅಂಪೈರಿಂಗ್ ಹೆಸರು ಅಗ್ರಸ್ಥಾನದಲ್ಲಿದೆ. ಆದರೆ ಕೆಲವೇ ಕೆಲವು ಜನರಿಗೆ ಮಾತ್ರ ಅಂಪೈರ್ ಆಗುವುದು ಹೇಗೆಂದು ಗೊತ್ತಿದೆ. ಕ್ರಿಕೆಟ್ ಅಂಪೈರ್ ಆಗುವ ಪ್ರಕ್ರಿಯೆಯಲ್ಲಿ ಅನೇಕ ಸ್ಟೆಪ್​ಗಳಿವೆ. ಕ್ರಿಕೆಟ್ ಜ್ಞಾನವನ್ನು ಮಾತ್ರವಲ್ಲದೇ ದೈಹಿಕ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಕೂಡ ಮುಖ್ಯವಾಗಿರುತ್ತದೆ.
ಇದನ್ನೂ ಓದಿ:ಕಿಚ್ಚ ಸುದೀಪ್​ ಮಂಗಳಾರತಿಗೂ ಕ್ಯಾರೇ ಎನ್ನದ ಚೈತ್ರಾ; ಮತ್ತೆ ಅದೇ ರಾಗ ಅದೇ ಹಾಡು!
ಮೊದಲು ಏನು ಮಾಡಬೇಕು?
ನೀವು ಕ್ರಿಕೆಟ್​ ಅಂಪೈರ್ ಆಗಲು ಬಯಸಿದ ಅಭ್ಯರ್ಥಿಗಳು ತಮಗೆ ಸಂಬಂಧಿತ ‘ರಾಜ್ಯ ಕ್ರಿಕೆಟ್ ಸಂಸ್ಥೆ’ಯಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಇದಕ್ಕಾಗಿ ಸ್ಥಳೀಯ ಪಂದ್ಯಗಳಲ್ಲಿ ಅಂಪೈರಿಂಗ್ ಅನುಭವ ಪಡೆಯುವುದು ಅಗತ್ಯವಾಗಿದೆ.
ಸ್ಥಳೀಯ ಪಂದ್ಯಗಳಲ್ಲಿ ಅನುಭವ
ಸ್ಥಳೀಯ ಮಟ್ಟದಲ್ಲಿ ನಡೆಯುವ ಪಂದ್ಯಗಳ ಅಂಪೈರ್ ಮಾಡಬೇಕಾಗುತ್ತದೆ. ಆ ಮೂಲಕ ಅಂಪೈರಿಂಗ್ ಮಾಡುವ ಅನುಭವವನ್ನು ಪಡೆದುಕೊಳ್ಳಬೇಕು. ಇಲ್ಲಿ ಸಿಗುವ ಅನುಭವ ಅಂಪೈರ್ ವಿಭಾಗದಲ್ಲಿ ನಿಮ್ಮನ್ನು ಎತ್ತರಕ್ಕೆ ಕೊಂಡೊಯ್ಯಲು ಸಹಾಯ ಮಾಡುತ್ತದೆ.
BCCI ಪರೀಕ್ಷೆಗೆ ನಾಮನಿರ್ದೇಶನ
ನಿಮ್ಮ ರಾಜ್ಯ ಅಸೋಸಿಯೇಷನ್‌ನೊಂದಿಗೆ ನೀವು ಸಾಕಷ್ಟು ಅನುಭವ ಪಡೆದ ನಂತರ BCCI (ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ) ನಡೆಸುವ ಹಂತ-1 ಪರೀಕ್ಷೆಗೆ ಹೆಸರನ್ನು ಕಳುಹಿಸಲಾಗುತ್ತದೆ.
ತರಬೇತಿ ಮತ್ತು ಲಿಖಿತ ಪರೀಕ್ಷೆ
ಮೂರು ದಿನಗಳ ಕಾಲ ಬಿಸಿಸಿಐ ತರಬೇತಿ ನೀಡುತ್ತದೆ. ನಾಲ್ಕನೇ ದಿನ ಲಿಖಿತ ಪರೀಕ್ಷೆ ನಡೆಸುತ್ತದೆ. ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ಬಿಸಿಸಿಐ ಶಾರ್ಟ್​​ಲಿಸ್ಟ್ ಮಾಡುತ್ತದೆ.
ಇದನ್ನೂ ಓದಿ:RCB ಈ ಚಾನ್ಸ್​ ಬಳಸಿದ್ರೆ ಬಲಿಷ್ಠ ಟೀಮ್ ಕಟ್ಟಬಹುದಿತ್ತು.. ಫ್ರಾಂಚೈಸಿ ಮಾಡಿದ ತಪ್ಪು ಯಾವುದು?
ವಿಶೇಷ ತರಬೇತಿ
ಬಿಸಿಸಿಐ ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳನ್ನು ವಿಶೇಷ ತರಬೇತಿಗೆ ಕರೆಯುತ್ತದೆ. ಅಲ್ಲಿ ಆಟದ ನಿಯಮಗಳು ಮತ್ತು ಇತರ ಪ್ರಮುಖ ವಿಷಯಗಳ ಬಗ್ಗೆ ಮಾಹಿತಿ ನೀಡುತ್ತದೆ.
ಪ್ರಾಯೋಗಿಕ ಮತ್ತು ಮೌಖಿಕ ಪರೀಕ್ಷೆ
ವಿಶೇಷ ತರಬೇತಿ ನೀಡಿದ ಬಳಿಕ ಅಭ್ಯರ್ಥಿಗಳು ಪ್ರಾಯೋಗಿಕ ಮತ್ತು ಮೌಖಿಕ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಈ ಪರೀಕ್ಷೆಗಳಲ್ಲಿ ಯಶಸ್ವಿಯಾದರೆ ಮಾತ್ರ ಹಂತ-2 ಪರೀಕ್ಷೆಗೆ ಅರ್ಹರಾಗುತ್ತೀರಿ.
ವೈದ್ಯಕೀಯ ಪರೀಕ್ಷೆ
ಹಂತ 2 ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ವೈದ್ಯಕೀಯ ಪರೀಕ್ಷೆ ನಡೆಸುತ್ತದೆ. ಇದರಲ್ಲಿ ದೈಹಿಕ ಸಾಮರ್ಥ್ಯವನ್ನು ಪರಿಶೀಲಿಸಲಾಗುತ್ತದೆ.
ಅಂತಿಮ ಗುರುತಿಸುವಿಕೆ
ಎಲ್ಲಾ ಹಂತಗಳನ್ನು ಯಶಸ್ವಿಯಾಗಿ ಮುಗಿಸಿದ ನಂತರ BCCI ಅಂಪೈರ್ ಎಂದು ಪ್ರಕಟಿಸುತ್ತದೆ. ಈ ಪ್ರಕ್ರಿಯೆಯನ್ನು ಅನುಸರಿಸುವ ಮೂಲಕ ನೀವು ಅರ್ಹ ಕ್ರಿಕೆಟ್ ಅಂಪೈರ್ ಆಗಬಹುದು. ವಿವಿಧ ಹಂತಗಳಲ್ಲಿ ಪಂದ್ಯಗಳನ್ನು ನಿರ್ವಹಿಸಬಹುದು.
ಇದನ್ನೂ ಓದಿ:ಬಾಲಿವುಡ್ ಬ್ಯೂಟಿಗೆ ಮನಸೋತ RCB ಮಾಜಿ ಬೌಲರ್.. ಪ್ರೀತಿ ಬಲೆಗೆ ಬಿದ್ರಾ ಸಿರಾಜ್?
ಅಂಪೈರ್‌ಗೆ ಇಷ್ಟು ಸಂಬಳ?
ಅಂಪೈರ್‌ನ ವೇತನವು ಅವರ ದರ್ಜೆ, ಅನುಭವ ಮತ್ತು ಹಿರಿತನದ ಅವಲಂಬಿಸಿರುತ್ತದೆ. ವರದಿಗಳ ಪ್ರಕಾರ, ಬಿಸಿಸಿಐನಲ್ಲಿ ಎ+ ಮತ್ತು ಎ ಗ್ರೇಡ್ ಅಂಪೈರ್‌ಗಳು ದೇಶೀಯ ಪಂದ್ಯಗಳಿಗೆ ದಿನಕ್ಕೆ 40,000 ರೂಪಾಯಿ. ಬಿ ಮತ್ತು ಸಿ ದರ್ಜೆಯ ಅಂಪೈರ್‌ಗಳಿಗೆ ದಿನಕ್ಕೆ 30,000 ರೂಪಾಯಿ. ಅಂಪೈರ್‌ನ ದಾಖಲೆ ಉತ್ತಮವಾಗಿದ್ದರೆ ಅವರನ್ನು ಐಸಿಸಿ ಪ್ಯಾನೆಲ್‌ಗೆ ಸೇರಿಸಬಹುದು. ಐಸಿಸಿ ಪ್ರತಿ ಪಂದ್ಯಕ್ಕೆ 1.50 ರಿಂದ 2.20 ಲಕ್ಷ ರೂಪಾಯಿ ನೀಡುತ್ತದೆ. ವಾರ್ಷಿಕ ವೇತನ 75 ಲಕ್ಷಕ್ಕಿಂತ ಹೆಚ್ಚಾಗಿರುತ್ತದೆ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್