/newsfirstlive-kannada/media/post_attachments/wp-content/uploads/2025/05/pak-vs-india1.jpg)
ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧದ ಕಾರ್ಮೋಡ ಕವಿದಿದೆ. ಹೀಗಾಗಿ ದೇಶದಾದ್ಯಂತ ರಕ್ಷಣಾ ಮಾಕ್ ಡ್ರಿಲ್ ಮಾಡಲು ಕೇಂದ್ರ ಗೃಹ ಇಲಾಖೆ ಸೂಚಿಸಿದೆ. ಇದರ ಮಧ್ಯೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ಸದಸ್ಯರು ಪಾಕಿಸ್ತಾನಕ್ಕೆ ಪ್ರಶ್ನೆಗಳ ಸುರಿಮಳೆ ಗೈದಿದ್ದಾರೆ. ಪಾಕ್ ಭಾರತದ ವಿರುದ್ಧ ಸುಳ್ಳು ನಿರೂಪಣೆಯನ್ನು ಮಾಡಿದೆಯೆ? ದಾಳಿಯಲ್ಲಿ ಎಲ್‌ಇಟಿ ಭಾಗಿಯಾಗಿರುವ ಸಾಧ್ಯತೆ ಇದೆಯೇ ಎಂದು ಪ್ರಶ್ನೆಗಳನ್ನು ಹಾಕಲಾಗಿದೆ.
ಇದನ್ನೂ ಓದಿ:ದೇಶದ 244 ಜಿಲ್ಲೆಗಳಲ್ಲಿ ನಾಳೆ ಮಾಕ್ ಡ್ರಿಲ್.. ಈ ಯುದ್ಧ ಕವಾಯತ್ನ ಉದ್ದೇಶ ಏನು..?
ಈ ಸಭೆಯಲ್ಲಿ ಪಾಕಿಸ್ತಾನಕ್ಕೆ ಕ್ಷಿಪಣಿ ಪರೀಕ್ಷೆಗಳು ಮತ್ತು ಪರಮಾಣು ದಾಳಿ ಬೆದರಿಕೆ ಹಾಕಿರುವ ಬಗ್ಗೆ ಪ್ರಶ್ನೆಗಳನ್ನು ಮಾಡಲಾಗಿದೆ. ಪಾಕಿಸ್ತಾನದ ಈ ನಡೆ ವಿರುದ್ಧ ಅನೇಕ ಸದಸ್ಯರು ಕಳವಳ ವ್ಯಕ್ತಪಡಿಸಿದರು. ಅಲ್ಲದೇ ಭಾರತದೊಂದಿಗೆ ದ್ವಿಪಕ್ಷೀಯ ಸಮಸ್ಯೆಗಳನ್ನು ಬಗೆಹರಿಸಲು ಪಾಕ್ಗೆ ಸಲಹೆ ನೀಡಲಾಯಿತು. ಆ ಮೂಲಕ ಪಾಕಿಸ್ತಾನ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯರಿಗೆ ತಾನೇ ದೊಣ್ಣೆ ಕೊಟ್ಟು ಹೊಡೆಸಿಕೊಂಡಂತೆ ಆಗಿದೆ.
ಭಾರತ- ಪಾಕ್ ಉದ್ವಿಗ್ನತೆಯ ಬಗ್ಗೆ ಚರ್ಚೆಗೆ ಸಭೆ ಕರೆಯಲು ಮನವಿ ಮಾಡಿದ್ದೇ ಪಾಕಿಸ್ತಾನ. ಆದರೆ ಸಭೆಯಲ್ಲಿ ಸದಸ್ಯ ರಾಷ್ಟ್ರಗಳು ಪಾಕಿಸ್ತಾನಕ್ಕೆ ತರಾಟೆಗೆ ತೆಗೆದುಕೊಂಡಿವೆ. ಸದಸ್ಯ ರಾಷ್ಟ್ರಗಳ ಪ್ರಶ್ನೆಗಳಿಗೆ ಉತ್ತರ ನೀಡಲಾಗದೇ ಪಾಕಿಸ್ತಾನದ ಪರದಾಡಿದೆ. ದ್ವಿಪಕ್ಷೀಯ ವಿಷಯಗಳನ್ನು ಭಾರತದ ಜೊತೆ ಮಾತುಕತೆ ಮೂಲಕವೇ ಬಗೆ ಹರಿಸಿಕೊಳ್ಳಿ ಅಂತ ಸದಸ್ಯ ರಾಷ್ಟ್ರಗಳು ಪಾಕಿಸ್ತಾನಕ್ಕೆ ಸಲಹೆ ನೀಡಿವೆ. ಅದರಲ್ಲೂ ಭದ್ರತಾ ಮಂಡಳಿಯ 15 ಸದಸ್ಯ ರಾಷ್ಟ್ರಗಳ ಪೈಕಿ 13 ರಾಷ್ಟ್ರಗಳಿಂದ ಭಾರತಕ್ಕೆ ಬೆಂಬಲ ನೀಡಿವೆ. ಹೀಗಾಗಿ ವಾದ-ಪ್ರತಿವಾದ ನಡುವೆಯೇ ಯಾವುದೇ ನಿರ್ಣಯ ಇಲ್ಲದೇ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆ ಅಂತ್ಯವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ